ಪಂಚಾಂಗ
ವಾರ: ಮಂಗಳವಾರ, ತಿಥಿ: ತ್ರಯೋದಶಿ
ನಕ್ಷತ್ರ: ಶತಭಿಷ
ಶ್ರೀ ವಿಶ್ವಾವಸು ನಾಮ ಸಂವತ್ಸರ
ಉತ್ತರಾಯಣ, ಶಿಶಿರ ಋತು
ಪಾಲ್ಗುಣ ಮಾಸ, ಕೃಷ್ಣ ಪಕ್ಷ
ರಾಹುಕಾಲ: 3:33 ರಿಂದ 5:04
ಗುಳಿಕಕಾಲ: 12:32 ರಿಂದ 2:02
ಯಮಗಂಡಕಾಲ: 9:30 ರಿಂದ 11:01
ಮೇಷ: ಇಷ್ಟ ವಸ್ತುಗಳ ಖರೀದಿ, ಸರ್ಕಾರಿ ಕೆಲಸದವರಿಗೆ ತೊಂದರೆ, ಅನಗತ್ಯ ಹಸ್ತಕ್ಷೇಪ, ದಂಡ ಕಟ್ಟುವಿರಿ.
ವೃಷಭ: ಆತ್ಮೀಯರಲ್ಲಿ ಪ್ರೀತಿ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಆರೋಗ್ಯ ವೃದ್ಧಿ, ಅಪರೂಪದ ವ್ಯಕ್ತಿಯನ್ನ ಭೇಟಿಯಾಗುವಿರಿ.
ಮಿಥುನ: ಜಾಗ್ರತೆಯಿಂದ ಇರಿ, ಮನ ಶಾಂತಿ, ಶ್ರಮವಿಲ್ಲದೆ ಏನು ನಡೆಯುವುದಿಲ್ಲ.
ಕಟಕ: ಅನ್ಯಾಯ ದಬ್ಬಾಳಿಕೆಗಳನ್ನು ವಿರೋಧಿಸುವಿರಿ, ಕಾರ್ಯಕ್ಷೇತ್ರದಲ್ಲಿ ಒತ್ತಡ, ಲ್ಯಾಂಡ್ ಡೆವಲಪರ್‌ಗಳಿಗೆ ನಷ್ಟ.
ಸಿಂಹ: ವಿವಾದಾತ್ಮಕ ವಿಷಯಗಳಿಂದ ದೂರವಿರಿ, ಆರೋಗ್ಯದಲ್ಲಿ ವ್ಯತ್ಯಾಸ, ಪರರ ಧನಪ್ರಾಪ್ತಿ.
ಕನ್ಯಾ: ಮಕ್ಕಳ ವಿಚಾರದಲ್ಲಿ ಅಧಿಕ ಚಿಂತೆ, ಸೇವಕರಿಂದ ಸಹಾಯ, ಆಡಿದ ಮಾತಿಗೆ ಪಶ್ಚಾತಾಪ.
ತುಲಾ: ಪ್ರಯಾಣದಿಂದ ತೊಂದರೆ, ಅನಗತ್ಯ ಖರ್ಚು, ಮಾನಸಿಕ ವ್ಯಥೆ, ಬಾಕಿ ಹಣ ಕೈ ಸೇರುವುದು, ಪರಸ್ಥಳ ವಾಸ.
ವೃಶ್ಚಿಕ: ಅವಿವಾಹಿತರಿಗೆ ವಿವಾಹ ಯೋಗ, ಸ್ಥಿರಾಸ್ತಿ ಮಾರಾಟ, ಅನಾರೋಗ್ಯ, ಕೈಗೊಂಡ ಕಾರ್ಯಗಳಲ್ಲಿ ಪ್ರಗತಿ.
ಧನಸ್ಸು: ವಿವಿಧ ಮೂಲಗಳಿಂದ ಹಣ ಬರುವುದು, ಸ್ನೇಹಿತರು ಸಕಾಲದಲ್ಲಿ ನೆರವು ನೀಡುವರು, ಸುಖ ಭೋಜನ.
ಮಕರ: ಉದ್ಯೋಗ ಅವಕಾಶ, ಪುಣ್ಯಕ್ಷೇತ್ರ ದರ್ಶನ, ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ, ಪ್ರಿಯ ಜನರ ಭೇಟಿ.
ಕುಂಭ: ಅನಗತ್ಯ ತಿರುಗಾಟ, ವಿಶ್ರಾಂತಿ ಇಲ್ಲದ ಕೆಲಸ, ಗುರುಗಳಿಂದ ಬೋಧನೆ, ಸ್ವಂತ ಪರಿಶ್ರಮದಿಂದ ಯಶಸ್ಸು.
ಮೀನ: ಸ್ವಗೃಹ ವಾಸ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಸಾಲದಿಂದ ಮುಕ್ತಿ, ಯತ್ನ ಕಾರ್ಯಾನುಕೂಲ.

