ಕ್ರೋಧಿ ನಾಮ, ಗ್ರೀಷ್ಮ ಋತು ಉತ್ತರಾಯಣ, ಜೇಷ್ಠ ಮಾಸ
ಶುಕ್ಲ ಪಕ್ಷ, ದಶಮಿ, ಹಸ್ತಾ ನಕ್ಷತ್ರ
ರಾಹುಕಾಲ : 05:10 – 06:47
ಗುಳಿಕಕಾಲ : 03:33 – 5:10
ಯಮಗಂಡಕಾಲ : 12:20 – 01:57
Advertisement
ಮೇಷ: ಮನೆಯಲ್ಲಿ ಸಂತಸದ ವಾತಾವರಣ, ವೃತ್ತಿಯಲ್ಲಿ ಕೆಲಸದ ಒತ್ತಡಗಳು ಹೆಚ್ಚಾಗಬಹುದು, ಹೊಟೇಲ್ ಉದ್ಯಮಿಗಳಿಗೆ ಹೆಚ್ಚಿನ ಆದಾಯ.
Advertisement
ವೃಷಭ: ಖಾದಿಯ ವಸ್ತ್ರ ವ್ಯಾಪಾರಿಗಳಿಗೆ ಲಾಭ, ಜೀವನದಲ್ಲಿನ ಅಡೆತಡೆಗಳು ದೂರವಾಗುತ್ತದೆ. ಅವಸರದಲ್ಲಿ ತೆಗೆದುಕೊಂಡ ಹೆಜ್ಜೆ ಕಗ್ಗಂಟಾಗಬಹುದು.
Advertisement
ಮಿಥುನ: ವೈಮನಸ್ಯ ಉಂಟಾಗಬಹುದು, ಕೆಲಸ ಖಾಯಂ ಆಗುವುದು, ಮೌನದಿಂದ ಸಮಸ್ಯೆಗಳು ಪರಿಹಾರವಾಗುತ್ತದೆ
Advertisement
ಕಟಕ: ದೂರ ಪ್ರಯಾಣ ಸಾಧ್ಯತೆ, ಉನ್ನತ ವ್ಯಕ್ತಿಗಳ ಭೇಟಿ, ಋತುಮಾನದ ಕಾಯಿಲೆಗಳ ಬಗ್ಗೆ ಎಚ್ಚರ.
ಸಿಂಹ: ಆಸ್ತಿ ಸಮಸ್ಯೆಗಳು ಪರಿಹಾರವಾಗುತ್ತವೆ, ಮೂಳೆ ಸಮಸ್ಯೆ ಎದುರಾಗಬಹುದು, ವೃತ್ತಿಯಲ್ಲಿ ಆಡಳಿತಾತ್ಮಕ ಪರೀಕ್ಷೆ ತೆಗೆದುಕೊಳ್ಳಬಹುದು.
ಕನ್ಯಾ: ಯೋಗ್ಯ ಸಂಗಾತಿ ದೊರೆಯುವ ಸಾಧ್ಯತೆ, ಆದಾಯವು ಮಂದ ಗತಿಯಲ್ಲಿರುತ್ತದೆ, ಕಬ್ಬಿಣ ತಯಾರಿಸುವವರಿಗೆ ಬೇಡಿಕೆ.
ತುಲಾ: ಬೇರೆ ಇಲಾಖೆಗೆ ವರ್ಗಾವಣೆ ಸಾಧ್ಯತೆ, ಭೂಮಿ ಖರೀದಿಸಬಹುದು, ಕೆಲಸದ ಹೊರೆಯಿಂದ ತೊಂದರೆ
ವೃಶ್ಚಿಕ: ಹಿತಶತ್ರುಗಳು ಹೆಚ್ಚಾಗುವ ಸಾಧ್ಯತೆ, ಸಂಗಾತಿಯ ಬೆಂಬಲವಿರುತ್ತದೆ, ವಸ್ತ್ರಾಭರಣ, ಗೃಹೋಪಯೋಗಿ ಸಾಮಗ್ರಿಗಳ ಖರೀದಿ.
ಧನಸ್ಸು: ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ, ಹೊಸ ಯೋಜನೆ ಸಫಲವಾಗಲಿದೆ, ತಂದೆಯಿಂದ ಸಹಕಾರ ದೊರೆಯುತ್ತದೆ.
ಮಕರ: ಸ್ಥಿತಪ್ರಜ್ಞರಾಗಿರುವುದು ಒಳ್ಳೆಯದು, ಯಂತ್ರೋಪಕರಣ ಉದ್ಯಮಿಗಳಿಗೆ ಅನುಕೂಲ, ಸಂಸಾರದಲ್ಲಿ ಸಾಮರಸ್ಯವಿರುತ್ತದೆ.
ಕುಂಭ: ಹೂಡಿಕೆ ಮಾರುಕಟ್ಟೆಯಿಂದ ಲಾಭ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಪಾಲುದಾರಿಕೆಯಲ್ಲಿ ಲಾಭವಿರುತ್ತದೆ.
ಮೀನ: ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಅತಿಯಾದ ಕೆಲಸದಿಂದ ದೈಹಿಕ ಆಯಾಸ, ದೂರ ಪ್ರಯಾಣಿಸುವಾಗ ಎಚ್ಚರಿಕೆಯಿಂದಿರಿ.