ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರಮಾಸ,
ಕೃಷ್ಣ ಪಕ್ಷ, ನವಮಿ ತಿಥಿ,
ಗುರುವಾರ, ಶ್ರವಣ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 1:57 ರಿಂದ 3:30
ಗುಳಿಕಕಾಲ: ಬೆಳಗ್ಗೆ 9:18 ರಿಂದ 10:51
ಯಮಗಂಡಕಾಲ: ಬೆಳಗ್ಗೆ 6:11 ರಿಂದ 7:45
Advertisement
ಮೇಷ: ಮಾನಸಿಕ ಕಿರಿಕಿರಿ, ದೇಹದಲ್ಲಿ ಆಲಸ್ಯ, ಆತ್ಮೀಯರೊಂದಿಗೆ ಮನಃಸ್ತಾಪ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಉದ್ಯೋಗದಲ್ಲಿ ಕಿರಿಕಿರಿ, ಮನೆಯಲ್ಲಿ ಅಶಾಂತಿ, ಸ್ಥಿರಾಸ್ತಿ ತಗಾದೆ, ನೀರು-ವಾಹನದಿಂದ ಎಚ್ಚರ.
Advertisement
ವೃಷಭ: ಬಂಧುಗಳಿಂದ ಕಿರಿಕಿರಿ, ಸಹೋದರಿಯಿಂದ ತೊಂದರೆ, ಪ್ರಯಾಣದಲ್ಲಿ ಎಚ್ಚರ, ಪೆಟ್ಟಾಗುವ ಸಾಧ್ಯತೆ, ಉದ್ಯೋಗ ಬದಲಾವಣೆಯಿಂದ ಸಮಸ್ಯೆ, ಹೇಳಿಕೆ ಮಾತುಗಳಿಂದ ಬೇಸರ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ.
Advertisement
ಮಿಥುನ: ಆಕಸ್ಮಿಕ ಆರ್ಥಿಕ ಸಂಕಷ್ಟ, ರೋಗ ಬಾಧೆ, ಶತ್ರುಗಳಿಂದ ತೊಂದರೆ, ಕುಟುಂಬದಲ್ಲಿ ಕಲಹ, ಹೆಣ್ಣು ಮಕ್ಕಳಿಂದ ಆರ್ಥಿಕ ಸಹಾಯ, ಮೋಜು-ಮಸ್ತಿಯಿಂದ ಸಮಸ್ಯೆ, ಪ್ರೇಮ ವಿಚಾರದಲ್ಲಿ ವೈಮನಸ್ಸು.
Advertisement
ಕಟಕ: ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಅವಕಾಶಗಳು ಕೈ ತಪ್ಪುವುದು, ಸ್ವಂತ ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ಉದ್ಯೋಗದಲ್ಲಿ ಒತ್ತಡ, ಕೆಟ್ಟ ದೃಷ್ಠಿ ಬೀಳುವುದು, ದಾಂಪತ್ಯದಲ್ಲಿ ಸಂಶಯ, ಮನಸ್ಸಿನಲ್ಲಿ ಆತಂಕ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.
ಸಿಂಹ: ವಿಪರೀತ ಸಾಲ, ಋಣ-ರೋಗ ಬಾಧೆ, ಅಧಿಕ ಖರ್ಚು, ಸೇವಕರಿಂದ ಕಿರಿಕಿರಿ, ಕಾರ್ಮಿಕರಿಂದ ತೊಂದರೆ, ಕೆಳ ಹಂತದ ಅಧಿಕಾರಿಗಳಿಂದ ನಷ್ಟ, ಆರೋಗ್ಯದಲ್ಲಿ ಸಮಸ್ಯೆ, ಮನಸ್ಸಿನಲ್ಲಿ ಆತಂಕ, ಸಹೋದರಿಯೊಂದಿಗೆ ಶತ್ರುತ್ವ, ನೆರೆಹೊರೆಯವರೊಂದಿಗೆ ಕಲಹ.
ಕನ್ಯಾ: ಮಕ್ಕಳಿಂದ ಅನುಕೂಲ, ಪ್ರೇಮ ವಿಚಾರದಲ್ಲಿ ಯಶಸ್ಸು, ಆಲೋಚನೆಗಳಿಂದ ತೊಂದರೆ, ಗೌರವ-ಸನ್ಮಾನಕ್ಕೆ ಮಿತ್ರರಿಂದ ಅಡೆತಡೆ, ರಾಜಕಾರಣಿಗಳಿಂದ ಸಮಸ್ಯೆ, ಸರ್ಕಾರಿ ಅಧಿಕಾರಿಗಳಿಂದ ಅವಮಾನ, ನಷ್ಟಗಳು ಹೆಚ್ಚಾಗುವುದು.
ತುಲಾ: ಉದ್ಯೋಗ ಅವಕಾಶ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ವಾಸ ಸ್ಥಳದಲ್ಲಿ ಮಾಟದ ಭೀತಿ, ಕಾರ್ಯಗಳಿಂದ ಸಮಸ್ಯೆ, ನೀರಿನ ಸ್ಥಳಗಳಲ್ಲಿ ಎಚ್ಚರಿಕೆ, ಮಹಿಳೆಯರಿಂದ ಅಪವಾದ, ಮೇಲಾಧಿಕಾರಿಗಳಿಂದ ಕಿರಿಕಿರಿ, ನೋವು-ನಿರಾಸೆ ಹೆಚ್ಚು.
ವೃಶ್ಚಿಕ: ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ದೂರ ಪ್ರಯಾಣ ಮಾಡುವ ಸಾಧ್ಯತೆ, ಕೈ ಕಾಲುಗಳಿಗೆ ಪೆಟ್ಟು, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಅವಕಾಶಗಳು ಕೈತಪ್ಪುವುದು.
ಧನಸ್ಸು: ಆಕಸ್ಮಿಕ ಧನಾಗಮನ, ನಾನಾ ಮೂಲಗಳಿಂದ ಧನ ಪ್ರಾಪ್ತಿ, ಸೋಲು-ನಿರಾಸೆಗಳು, ವಿಪರೀತ ನಷ್ಟ-ಅಪಕೀರ್ತಿ, ಕುಟುಂಬದಲ್ಲಿ ಆತಂಕ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಶೀತ ಸಂಬಂಧಿತ ರೋಗ, ದೈವ ದರ್ಶನಕ್ಕೆ ಪುಣ್ಯಕ್ಷೇತ್ರಗಳಿಗೆ ಪ್ರಯಾಣ.
ಮಕರ: ದಾಂಪತ್ಯದಲ್ಲಿ ವಿರಸ, ಮನಸ್ಸಿಗೆ ಬೇಸರ, ಅಧಿಕ ಮುಂಗೋಪ, ಮಕ್ಕಳಿಂದ ವೈಮನಸ್ಸು, ಗುಪ್ತ ವಿಚಾರಗಳು ಬಯಲಾಗುವುದು, ವ್ಯಾಪಾರ-ಉದ್ಯಮದಲ್ಲಿ ನಷ್ಟ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ದುಷ್ಟ ವ್ಯಕ್ತಿಗಳಿಂದ ತೊಂದರೆ, ಅನ್ಯರ ಕುತಂತ್ರಕ್ಕೆ ಸಿಲುಕುವಿರಿ.
ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ಗುಪ್ತ ಶತ್ರುಗಳಿಂದ ತೊಂದರೆ, ಕೆಲಸಗಾರರಿಂದ ವಂಚನೆ, ಸೇವಕರಿಂದ ಮೋಸ, ಇಲ್ಲ ಸಲ್ಲದ ಅಪವಾದ, ಉಸಿರಾಟದ ತೊಂದರೆ, ಕಣ್ಣಿಗೆ ಪೆಟ್ಟಾಗುವ ಸಾಧ್ಯತೆ.
ಮೀನ: ಮಕ್ಕಳ ಏಳಿಗೆಗೆ ತೊಂದರೆ, ಜೀವನದಲ್ಲಿ ಏರುಪೇರು, ಸಂತಾನ ದೋಷ, ದುಶ್ಚಟಗಳಿಂದ ಸಮಸ್ಯೆ, ಅಕ್ರಮ ಸಂಪಾದನೆಯಿಂದ ತೊಂದರೆ, ಮಹಿಳಾ ಮಿತ್ರರೊಂದಿಗೆ ಕಲಹ, ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆಯಾಗುವ ಸಾಧ್ಯತೆ.