ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಪಂಚಮಿ ತಿಥಿ,
ಬುಧವಾರ, ಉತ್ತರ ನಕ್ಷತ್ರ ಉಪರಿ ಹಸ್ತ ನಕ್ಷತ್ರ,
Advertisement
ದಿನ ವಿಶೇಷ: ನಾಗರಪಂಚಮಿ
Advertisement
ಮೇಷ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಸಾಲ ಬಾಧೆ, ವೃಥಾ ತಿರುಗಾಟ, ಸುಖ ಭೋಜನ ಪ್ರಾಪ್ತಿ, ನಂಬಿಕಸ್ಥರಿಂದ ದ್ರೋಹ, ಈ ದಿನ ಎಚ್ಚರಿಕೆ ಅಗತ್ಯ.
Advertisement
ವೃಷಭ: ಹೊಸ ವ್ಯಕ್ತಿಗಳ ಪರಿಚಯ, ಮನಸ್ಸಿಗೆ ಅಶಾಂತಿ, ನಿರ್ಧಾರ ಕೈಗೊಳ್ಳುವುದರಲ್ಲಿ ನಿಧಾನ, ಅನಗತ್ಯ ಆತ್ಮೀಯರಿಂದ ನಿಷ್ಠೂರ, ಕುಟುಂಬದ ಬಗ್ಗೆ ಯೋಚನೆ ಅಗತ್ಯ.
Advertisement
ಮಿಥುನ: ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಆದಾಯ, ಆತ್ಮೀಯರ ಭಾವನೆಗಳಿಗೆ ಸ್ಪಂದಿಸುವಿರಿ, ಚಿನ್ನಾಭರಣ ಖರೀದಿಗೆ ಮನಸ್ಸು, ಮನಸ್ಸಿನಲ್ಲಿ ಕೆಟ್ಟಾಲೋಚನೆ, ದೇಹದಲ್ಲಿ ಆಲಸ್ಯ-ಸೋಮಾರಿತನ.
ಕಟಕ: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಬಿಡುವಿಲ್ಲದ ಕೆಲಸ ಕಾರ್ಯಗಳು, ಸ್ತ್ರೀಯರಿಗೆ ಅನುಕೂಲ, ಮಾನಸಿಕ ನೆಮ್ಮದಿ ಪ್ರಾಪ್ತಿ, ಆತ್ಮೀಯರೊಂದಿಗೆ ವೈಮನಸ್ಸು.
ಸಿಂಹ: ಮಾಡುವ ಕೆಲಸದಲ್ಲಿ ತಾಳ್ಮೆ ಅತ್ಯಗತ್ಯ, ವ್ಯವಹಾರಗಳಲ್ಲಿ ಎಚ್ಚರಿಕೆ, ಗೊಂದಲವಾದ ಮನಸ್ಸು, ವಾಹನ ಮಾರಾಟಗಾರರಿಗೆ ಅನುಕೂಲ, ವಿದ್ಯಾರ್ಥಿಗಳಿಗೆ ಸಂತಸ.
ಕನ್ಯಾ: ವ್ಯವಹಾರದಲ್ಲಿ ಉತ್ತಮ ಅವಕಾಶ, ಮಕ್ಕಳ ವಿಚಾರದಲ್ಲಿ ಅಧಿಕವಾದ ಚಿಂತೆ, ಶುಭ ಕಾರ್ಯಕ್ಕಾಗಿ ವಿಪರೀತ ಓಡಾಟ, ಮನೆ ಕಟ್ಟಲು ತಯಾರಿ ನಡೆಸುವಿರಿ, ಆರೋಗ್ಯದ ಬಗ್ಗೆ ಕಾಳಜಿವಹಿಸಿ.
ತುಲಾ: ಈ ದಿನ ವಿಪರೀತ ಖರ್ಚು ಮಾಡುವಿರಿ, ಕೆಟ್ಟ ಶಬ್ದಗಳಿಂದ ನಿಂದನೆಗೆ ಒಳಗಾಗುವಿರಿ, ಮಾಡುವ ವ್ಯಾಪಾರದಲ್ಲಿ ನಷ್ಟ, ಸಾಲ ಮಾಡುವ ಪರಿಸ್ಥಿತಿ ಎದುರಾಗುವುದು. .
ವೃಶ್ಚಿಕ: ಸಂತಸದ ವಾತಾವರಣಕ್ಕೆ ಆಕಸ್ಮಿಕ ಕಂಟಕ, ಮಾನಸಿಕವಾದ ನೆಮ್ಮದಿಗೆ ಭಂಗ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ಈ ದಿನ ಸಾಧಾರಣವಾದ ಪ್ರಗತಿ.
ಧನಸ್ಸು: ಚಿನ್ನಾಭರಣ-ವಸ್ತ್ರ ವ್ಯಾಪಾರಿಗಳಿಗೆ ಲಾಭ, ಕೆಲಸ ಕಾರ್ಯಗಳಲ್ಲಿ ಮುನ್ನಡೆ, ನೆಮ್ಮದಿಗಾಗಿ ದೇವತಾ ಕಾರ್ಯ ಮಾಡುವಿರಿ, ವಿದ್ಯಾರ್ಥಿಗಳ ಮನಸ್ಸಿನಲ್ಲಿ ನಾನಾ ಆಲೋಚನೆ.
ಮಕರ: ಮಕ್ಕಳ ಪ್ರತಿಭೆಗೆ ತಕ್ಕ ಮನ್ನಣೆ, ದೂರ ಪ್ರಯಾಣ ಮಾಡುವ ಸಾಧ್ಯತೆ ಅಧಿಕವಾದ ಕೋಪ, ಸುಖ ಭೋಜನ ಪ್ರಾಪ್ತಿ.
ಕುಂಭ: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ನೀವಾಡುವ ಮಾತಿನಿಂದ ವೈಮನಸ್ಸು, ಹಿರಿಯರ ಸಲಹೆ ಪರಿಗಣಿಸುವುದು ಉತ್ತಮ, ಸ್ತ್ರೀಯರಿಗೆ ಅನುಕೂಲ, ಈ ದಿನ ಎಚ್ಚರಿಕೆಯಲ್ಲಿರುವುದು ಅಗತ್ಯ.
ಮೀನ: ಸ್ಥಿರಾಸ್ತಿ ತಗಾದೆ-ಮನಃಸ್ತಾಪ, ಅನಗತ್ಯ ಖರ್ಚು ಮಾಡುವಿರಿ, ವ್ಯವಹಾರದಲ್ಲಿ ನಷ್ಟ-ತೊಂದರೆ, ಉದ್ಯೋಗ ಸ್ಥಳದಲ್ಲಿ ವೈಮನಸ್ಸು, ಹಣಕಾಸು ವಿಚಾರದಲ್ಲಿ ಎಚ್ಚರಿಕೆ.