ದಿನ ಭವಿಷ್ಯ : 14-7-2022

Public TV
2 Min Read
DINA BHAVISHYA

ಶ್ರೀ ಶುಭಕೃತ ನಾಮ ಸಂವತ್ಸರ
ಉತ್ತರಾಯಣ, ಗ್ರೀಷ್ಮ ಋತು
ಆಷಾಡ ಮಾಸ, ಕೃಷ್ಣ ಪಕ್ಷ
ಪ್ರಥಮಿ, ಗುರುವಾರ
ಉತ್ತರಾಷಾಡ ನಕ್ಷತ್ರ
ರಾಹುಕಾಲ: 02: 04 ರಿಂದ 03:40
ಗುಳಿಕಕಾಲ: 09:16 ರಿಂದ 10:52
ಯಮಗಂಡಕಾಲ: 06:05 ರಿಂದ 07:40

ಮೇಷ : ಮಕ್ಕಳಿಂದ ಅನುಕೂಲ, ಉತ್ತಮ ಹೆಸರಿನ ಆಲೋಚನೆ, ಉದ್ಯೋಗದಲ್ಲಿ ನಿರಾಸಕ್ತಿ, ಮಾಟ ಮಂತ್ರ ತಂತ್ರದ ಭೀತಿ, ಬಾಲಗ್ರಹ ದೋಷಗಳು, ಅನಾರೋಗ್ಯ.

ವೃಷಭ : ತಾಯಿಂದ ಸಹಕಾರ, ವೈರಾಗ್ಯದ ಭಾವ, ಸ್ಥಿರಾಸ್ತಿ ವಾಹನ ಯೋಗ, ದೈವ ಕಾರ್ಯಗಳು, ಸರ್ಕಾರದಿಂದ ಅನುಕೂಲ, ವಯೋವೃದ್ಧರಿಂದ ಸಹಾಯ, ಕೃಷಿಕರಿಗೆ ಅನುಕೂಲ.

ಮಿಥುನ : ಅನಗತ್ಯ ಪ್ರಯಾಣ, ಧೈರ್ಯದಿಂದ ಕಾರ್ಯಜಯ, ಅನಾರೋಗ್ಯ, ನೆರೆಹೊರೆಯವರೊಂದಿಗೆ ಮನಸ್ತಾಪ, ಉದ್ಯೋಗ ಬದಲಾವಣೆ ಆಲೋಚನೆ, ಆಯುಷ್ಯದ ಭೀತಿ, ಪತ್ರ ವ್ಯವಹಾರಗಳಿಂದ ತೊಂದರೆ.

ಕಟಕ : ಆರ್ಥಿಕ ಅನುಕೂಲ, ಸ್ವಯಂಕೃತ ಅಪರಾಧಗಳು, ದಾಂಪತ್ಯದಲ್ಲಿ ನಿರಾಸಕ್ತಿ, ಆತುರ, ಅಧಿಕ ಕೋಪ, ವ್ಯಾಪರ ವೃದ್ಧಿ, ಅಧಿಕ ಆಹಾರ ಸೇವನೆ, ವಿದ್ಯಾಭ್ಯಾಸ ಬದಲಾವಣೆ, ಆತುರದ ಪ್ರವೃತ್ತಿಗಳು.

ಸಿಂಹ : ಅವಕಾಶ ವಂಚಿತರಾಗುವಿರಿ, ಅನಾರೋಗ್ಯ, ವೃತ್ತಿಯಲ್ಲಿ ಏರಿಳಿತ, ಸ್ವತಂತ್ರ ನಿರ್ಧಾರಗಳಿಂದ ಪ್ರಗತಿ, ಕಣ್ಣಿನಲ್ಲಿ ತೊಂದರೆ, ಅಲರ್ಜಿ ಸಮಸ್ಯೆಗಳು.

ಕನ್ಯಾ : ಬಂಧುಗಳಿಗೆ ದೇವತಾಕಾರ್ಯಗಳಿಗೆ ಖರ್ಚುಗಳು, ಗುಪ್ತ ಮಾರ್ಗದಿಂದ ಕಾರ್ಯಾ ಜಯ, ದೂರ ಪ್ರಯಾಣದ ಯೋಚನೆ, ಪರಸ್ಥಳ ವಾಸ ಅಧ್ಯಾತ್ಮದ ಆಲೋಚನೆಗಳು, ಮೋಕ್ಷದ ಭಾವ, ಆತುರದ ನಿರ್ಧಾರದಿಂದ ಜೈಲುವಾಸ ಅಥವಾ ಆಸ್ಪತ್ರೆವಾಸ ಮೋಸಕ್ಕೆ ಬಲಿ ದುಸ್ವಪ್ನಗಳು ನಿದ್ರಾಭಂಗ.

ತುಲಾ : ಸರ್ಕಾರಿ ಅಧಿಕಾರಿ ಮತ್ತು ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಲಾಭದ ಪ್ರಮಾಣ ಅಧಿಕ, ಮಕ್ಕಳಿಂದ ಆರ್ಥಿಕ ಸಹಾಯ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಆತ್ಮಗೌರವಕ್ಕೆ ಧಕ್ಕೆ, ಅವಕಾಶವಿದ್ದರೂ ಉಪಯೋಗಿಸಿಕೊಳ್ಳುವುದಿಲ್ಲ.

ವೃಶ್ಚಿಕ : ಉದ್ಯೋಗದಲ್ಲಿ ವ್ಯಾಪಾರ-ವ್ಯವಹಾರದಲ್ಲಿ ನಿರಾಸಕ್ತಿ, ಸ್ವಂತ ಉದ್ಯಮದಲ್ಲಿ ಪ್ರಗತಿ, ಅಧಿಕಾರ ವರ್ಗದವರ ಭೇಟಿ, ಗೌರವ ಮತ್ತು ಅಂತಸ್ತಿನ ಚಿಂತೆ, ಪವಿತ್ರ ಯಾತ್ರಾಸ್ಥಳ ಭೇಟಿಯ ಮನಸ್ಸು ಸಾಮಾಜಿಕ ಸೇವೆಯಲ್ಲಿ ತೊಡಗುವಿರಿ, ಹಿರಿಯರ ಆಶೀರ್ವಾದ ಪಡೆಯುವಿರಿ.

ಧನಸ್ಸು: ದೂರ ಪ್ರಯಾಣ, ತಂದೆ ಆರೋಗ್ಯ ವ್ಯತ್ಯಾಸ, ಆಧ್ಯಾತ್ಮಿಕ ಚಿಂತನೆಗಳು, ಮೋಕ್ಷದ ಭಾವ ದೈವ ಕಾರ್ಯ ಆಸಕ್ತಿ, ಗುಪ್ತ ಮಾರ್ಗಗಳಿಂದ ಆಪತ್ತು, ಪೂಜೆಗಳಲ್ಲಿ ಅಪಚಾರ, ಅಧಿಕ ಉಷ್ಣ ರಕ್ತ ದೋಷ, ಮೈಕೈ ನೋವು, ಗ್ಯಾಸ್ಟಿಕ್, ಭವಿಷ್ಯದ ಚಿಂತೆ.

ಮಕರ : ಗುಪ್ತ ಮಾರ್ಗಗಳಿಂದ ಆಪತ್ತು, ಆಲಸ್ಯತನದಿಂದ ಸಮಸ್ಯೆ, ಗುಪ್ತ ಸಂಪತ್ತಿನ ಆಲೋಚನೆ, ದುರ್ಘಟನೆಗಳ ನೆನಪು, ಸೋಲು ನಷ್ಟ ನಿರಾಸೆಗಳಿಂದ ಮಾನಸಿಕ ಅಸಮತೋಲನ, ಅನಿರೀಕ್ಷಿತ ಧನಾಗಮನ ಗುಪ್ತರೋಗ ಮತ್ತು ಸಂಕಟಗಳು.

ಕುಂಭ : ದಾಂಪತ್ಯದಲ್ಲಿ ಬೇಸರ, ಪಾಲುದಾರಿಕೆಯ ಮನಸ್ತಾಪ, ವೈವಾಹಿಕ ಜೀವನದ ಚಿಂತೆ, ಪ್ರೀತಿ-ಪ್ರೇಮದಲ್ಲಿ ಸೋಲು, ವಿರೋಧಗಳು ಅಗೋಚರ ವಿಷಯದ ಚಿಂತೆ, ಗುಪ್ತ ಅನಾರೋಗ್ಯಗಳು, ಆರ್ಥಿಕ ತಪ್ಪು ನಿರ್ಧಾರ.

ಮೀನ : ಹಿತ ಶತ್ರುಗಳ ಕಾಟ, ದಾಂಪತ್ಯ ಸೌಖ್ಯದಿಂದ ಅಂತರ, ಕೈ ಕಾಲು ನೋವು, ತಾಯಿಯ ಬಂಧುಗಳಿಂದ ಸಮಸ್ಯೆಗಳು, ಅಧಿಕ ಉಷ್ಣ, ಅಂಗಾಲು ಉರಿ, ಪಿತ್ತ ದೋಷ, ಸಾಲದ ಚಿಂತೆ, ರಾಜಕೀಯ ವ್ಯಕ್ತಿಗಳ ಭೇಟಿಯಿಂದ ಕಾರ್ಯಜಯ, ಶತ್ರು ಧಮನ, ಸಂಶಯಾತ್ಮಕ ಸನ್ನಿವೇಶ ವಸ್ತುಗಳ ಕಳವು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *