ಶ್ರೀವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ತ್ರಯೋದಶಿ ತಿಥಿ,
ಭಾನುವಾರ, ಜ್ಯೇಷ್ಠ ಮಾಸ,
ರಾಹುಕಾಲ: ಸಂಜೆ 5:16 ರಿಂದ 6:52
ಗುಳಿಕಕಾಲ: ಮಧ್ಯಾಹ್ನ 3:40 ರಿಂದ 5:16
ಯಮಗಂಡಕಾಲ: ಮಧ್ಯಾಹ್ನ 12:28 ರಿಂದ 2:04
Advertisement
ಮೇಷ: ಅನಿರೀಕ್ಷಿತ ದೂರ ಪ್ರಯಾಣ, ಸಮಾಜದಲ್ಲಿ ಗೌರವ, ದಾನ-ಧರ್ಮದಲ್ಲಿ ಆಸಕ್ತಿ, ವಾಹನ ಖರೀದಿ, ಇಷ್ಟಾರ್ಥ ಸಿದ್ಧಿ, ಸುಖ ಭೋಜನ ಪ್ರಾಪ್ತಿ, ಮಾನಸಿಕ ನೆಮ್ಮದಿ,ಬಂಧುಗಳಲ್ಲಿ ನಿಷ್ಠೂರ.
Advertisement
ವೃಷಭ: ವ್ಯಾಸಂಗಕ್ಕೆ ತೊಂದರೆ, ದಾಯಾದಿಗಳ ಕಲಹ, ಮನಃಸ್ತಾಪ, ವ್ಯರ್ಥ ಧನಹಾನಿ, ಶತ್ರುಗಳ ಬಾಧೆ, ಮಿತ್ರರಿಂದ ಸಹಾಯ, ಅಕಾಲ ಭೋಜನ, ಆಸ್ತಿ ವಿಚಾರಗಳು ಇತ್ಯರ್ಥ,ಪರಸ್ಥಳ ವಾಸ.
Advertisement
ಮಿಥುನ: ದ್ರವ್ಯ ಲಾಭ, ತಂದೆ-ತಾಯಿಯ ಸೇವೆ ಮಾಡುವಿರಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ವ್ಯಾಪಾರ ವ್ಯವಹಾರದಲ್ಲಿ ಮಂದಗತಿ, ಕುಲದೇವರ ಪೂಜೆಯಿಂದ ಶುಭ ಫಲ, ದಾಂಪತ್ಯದಲ್ಲಿ ಪ್ರೀತಿ.
Advertisement
ಕಟಕ: ಮನಸ್ಸಿನಲ್ಲಿ ಆತಂಕ, ನಂಬಿಕಸ್ಥರಿಂದ ಮೋಸ, ಯಾರನ್ನೂ ಹೆಚ್ಚು ನಂಬಬೇಡಿ, ಚಂಚಲ ಮನಸ್ಸು, ಹಿತ ಶತ್ರುಗಳಿಂದ ತೊಂದರೆ, ಮಕ್ಕಳಲ್ಲಿ ದ್ವೇಷ, ಋಣ ಬಾಧೆ, ಅನಿರೀಕ್ಷಿತ ದ್ರವ್ಯ ಲಾಭ, ಮಾನಸಿಕ ನೆಮ್ಮದಿ.
ಸಿಂಹ: ಬಂಧುಗಳಲ್ಲಿ ನಿಷ್ಠೂರ, ಮಾನಸಿಕ ವೇದನೆ, ಬುದ್ಧಿ ಕ್ಲೇಷ, ದೂರದ ಆಲೋಚನೆ, ಆರೋಗ್ಯದಲ್ಲಿ ಏರುಪೇರು, ಉದ್ಯೋಗದಲ್ಲಿ ಬಡ್ತಿ, ಕುಟುಂಬ ಸೌಖ್ಯ, ದೈವಿಕ ಚಿಂತನೆ, ಧನ ಲಾಭ.
ಕನ್ಯಾ: ವಿದ್ಯಾಭ್ಯಾಸದಲ್ಲಿ ಅಡಚಣೆ, ಪರರ ಧನ ಪ್ರಾಪ್ತಿ, ಗುರು ಹಿರಿಯರಲ್ಲಿ ಭಕ್ತಿ, ಗೌರವ ಸನ್ಮಾನ ಪ್ರಾಪ್ತಿ, ವಿವಾಹ ಯೋಗ, ಅಲ್ಪ ಆದಾಯ, ಅಧಿಕವಾದ ಖರ್ಚು, ಸ್ತ್ರೀಯರಿಗೆ ಲಾಭ, ಅಧಿಕ ತಿರುಗಾಟದಿಂದ ಆಯಾಸ.
ತುಲಾ: ಯತ್ನ ಕಾರ್ಯದಲ್ಲಿ ವಿಳಂಬ, ಮಾಡೋ ಕೆಲಸಕ್ಕೆ ಅಡೆತಡೆ, ಮಿತ್ರರಿಂದ ಮೋಸ, ಅಧಿಕವಾದ ಹಣವ್ಯಯ, ವಾದ-ವಿವಾದಿಂದ ಮನೆಯಲ್ಲಿ ಕಲಹ, ಮಹಿಳೆಯರಿಗೆ ತೊಂದರೆ.
ವೃಶ್ಚಿಕ: ಕುಟುಂಬ ಸೌಖ್ಯ, ಬಂಧು-ಮಿತ್ರರ ಸಮಾಗಮ, ಆತ್ಮೀಯರಲ್ಲಿ ಮನಃಸ್ತಾಪ, ಆಂತರಿಕ ಕಲಹ, ಪರರಿಂದ ಮೋಸ ಸಾಧ್ಯತೆ, ಅಲ್ಪ ಕಾರ್ಯ ಸಿದ್ಧಿ, ಆಸ್ತಿ ವಿಚಾರದಲ್ಲಿ ಕಿರಿಕಿರಿ,ಸಂತಾನ ಯೋಗ.
ಧನಸ್ಸು: ವ್ಯಾಪಾರದಲ್ಲಿ ಅಭಿವೃದ್ಧಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಸ್ಥಿರಾಸ್ತಿ ಮಾರಾಟ, ಸ್ತ್ರೀಯರಿಗೆ ಅನುಕೂಲ, ನಾನಾ ರೀತಿಯ ಚಿಂತೆ, ಪುಣ್ಯಕ್ಷೇತ್ರ ದರ್ಶನ, ವಿದೇಶ ಪ್ರಯಾಣದಿಂದ ತೊಂದರೆ, ಶತ್ರುಗಳ ಬಾಧೆ.
ಮಕರ: ದೇವತಾ ಕಾರ್ಯಗಳಲ್ಲಿ ಭಾಗಿ, ವಿರೋಧಿಗಳಿಂದ ತೊಂದರೆ, ರೋಗ ಬಾಧೆ, ಮಾನಸಿಕ ವ್ಯಥೆ, ಶ್ರಮಕ್ಕೆ ತಕ್ಕ ಪಲ, ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ಇತರರ ಮಾತಿಗೆ ಮರುಳಾಗಬೇಡಿ, ಅಧಿಕವಾದ ಕೋಪ.
ಕುಂಭ: ದಾಂಪತ್ಯದಲ್ಲಿ ಪ್ರೀತಿ, ಸಾಲದಿಂದ ಮುಕ್ತಿ, ಯತ್ನ ಕಾರ್ಯದಲ್ಲಿ ಅನುಕೂಲ, ಚಂಚಲ ಮನಸ್ಸು, ಗೆಳೆಯರಿಗಾಗಿ ಖರ್ಚು, ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಏರುಪೇರು, ಕೃಷಿಯಲ್ಲಿ ಅಲ್ಪ ಲಾಭ.
ಮೀನ: ಮಾಡುವ ಕೆಲಸದಲ್ಲಿ ವಿಘ್ನ, ಹಣಕಾಸು ತೊಂದರೆ, ದೇಹದಲ್ಲಿ ಆಲಸ್ಯ, ಆರೋಗ್ಯದಲ್ಲಿ ವ್ಯತ್ಯಾಸ, ಷೇರು ವ್ಯವಹಾರಗಳಲ್ಲಿ ಎಚ್ಚರ, ವಾಹನದಿಂದ ತೊಂದರೆ, ದುಃಖದಾಯಕ ಪ್ರಸಂಗ.