Connect with us

Dina Bhavishya

ದಿನಭವಿಷ್ಯ 14-06-2017

Published

on

ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ಪಂಚಮಿ ತಿಥಿ,
ಬುಧವಾರ, ಶ್ರವಣ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 12:23 ರಿಂದ 2:00
ಗುಳಿಕಕಾಲ: ಬೆಳಗ್ಗೆ 10:47 ರಿಂದ 12:23
ಯಮಗಂಡಕಾಲ: ಬೆಳಗ್ಗೆ 7:35 ರಿಂದ 9:11

ಮೇಷ: ಉನ್ನತ ವಿದ್ಯಾಭ್ಯಾಸಕ್ಕಾಗಿ ಪ್ರಯಾಣ, ಅಧಿಕಾರ ಪ್ರಾಪ್ತಿ, ಸ್ಥಳ ಬದಲಾವಣೆ, ರಾಜ ವಿರೋಧ, ಮನಸಿಗೆ ಬೇಸರ.

ವೃಷಭ: ಹಣಕಾಸು ವಿಚಾರದಲ್ಲಿ ಎಚ್ಚರ, ಅನಾವಶ್ಯಕ ಖರ್ಚು ಮಾಡುವಿರಿ, ಮಾನಸಿಕ ನೆಮ್ಮದಿ, ಸ್ತ್ರೀಯರಿಗೆ ಶುಭ ಸಮಯ.

ಮಿಥುನ: ದಾಯಾದಿಗಳ ಕಲಹ, ಕಾರ್ಯ ಸಿದ್ಧಿಗಾಗಿ ಓಡಾಟ, ಎಲ್ಲರ ಮನಸ್ಸು ಗೆಲ್ಲುವಿರಿ, ನಾನಾ ವಿಚಾರಗಳಲ್ಲಿ ಆಸಕ್ತಿ.

ಕಟಕ: ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಿರಿ, ಹಣಕಾಸು ಖರ್ಚು, ಹೊಗಳಿಕೆ ಮಾತಿಗೆ ಮರುಳಾಗಬೇಡಿ.

ಸಿಂಹ: ನೂತನ ಒಪ್ಪಂದಗಳಿಂದ ಎಚ್ಚರಿಕೆ, ಬಾಕಿ ಹಣ ಕೈ ಸೇರುವುದು, ನೌಕರರಿಗೆ ಪ್ರಶಂಸೆ.

ಕನ್ಯಾ: ಮನೆಯಲ್ಲಿ ಸಂತಸ, ಸುಖ ಭೋಜನ, ಪ್ರಾಮಾಣಿಕತೆಗೆ ಮನ್ನಣೆ, ಯಶಸ್ಸಿನ ದಾರಿ ತಲುಪುವಿರಿ, ಆರ್ಥಿಕ ಪರಿಸ್ಥಿತಿ ಚೇತರಿಕೆ.

ತುಲಾ: ಕಾರ್ಯ ಕ್ಷೇತ್ರದಲ್ಲಿ ಪ್ರಗತಿ, ವಾದ-ವಿವಾದಗಳಿಂದ ದೂರವಿರಿ, ಶೀತ ಸಂಬಂಧಿತ ರೋಗಬಾಧೆ.

ವೃಶ್ಚಿಕ: ಯತ್ನ ಕಾರ್ಯದಲ್ಲಿ ಜಯ, ಸ್ತ್ರೀಯರಿಗೆ ಲಾಭ, ಮಕ್ಕಳಿಂದ ಧನ ಸಹಾಯ, ಉತ್ತಮ ಪ್ರಗತಿ, ತೀರ್ಥಯಾತ್ರೆ ದರ್ಶನ.

ಧನಸ್ಸು: ಕಾರ್ಯ ಕ್ಷೇತ್ರದಲ್ಲಿ ಪ್ರಗತಿ, ಶ್ರಮಕ್ಕೆ ತಕ್ಕ ಫಲ, ರಿಯಲ್ ಎಸ್ಟೇಟ್‍ನವರಿಗೆ ನಷ್ಟ, ಆಕಸ್ಮಿಕ ಖರ್ಚು, ದೂರ ಪ್ರಯಾಣ.

ಮಕರ: ಧನಾತ್ಮಕ ಚಿಂತನೆ, ಕೆಲಸಗಳಲ್ಲಿ ಜಯ, ಪಿತ್ರಾರ್ಜಿತ ಆಸ್ತಿ ಲಭ್ಯ, ಶತ್ರು ಬಾಧೆ, ಕುಟುಂಬದಲ್ಲಿ ಅನರ್ಥ, ಮಿಶ್ರ ಫಲ.

ಕುಂಭ: ಹಿರಿಯರೊಂದಿಗೆ ಸಮಾಲೋಚನೆ, ಗೆಳತಿಗೆ ಸಹಾಯ ಮಾಡುವಿರಿ, ಅನಗತ್ಯ ನಿಷ್ಠೂರ, ಮನಸ್ಸಿಗೆ ಸದಾ ಸಂಕಟ.

ಮೀನ: ಮನೆಯ ವಿಚಾರಗಳಲ್ಲಿ ಗಮನಹರಿಸಿ, ಕೆಟ್ಟಾಲೋಚನೆ, ಶರೀರದಲ್ಲಿ ಆಲಸ್ಯ, ನಿರೀಕ್ಷಿತ ಆದಾಯ ಪ್ರಾಪ್ತಿ.

Click to comment

Leave a Reply

Your email address will not be published. Required fields are marked *