Connect with us

Dina Bhavishya

ದಿನಭವಿಷ್ಯ 13-10-2017

Published

on

ಪಂಚಾಂಗ

ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಕೃಷ್ಣ ಪಕ್ಷ, ನವಮಿ ತಿಥಿ,
ಶುಕ್ರವಾರ, ಪುನರ್ವಸು ನಕ್ಷತ್ರ

ಶುಭ ಘಳಿಗೆ: ಬೆಳಗ್ಗೆ 7:24 ರಿಂದ 9:05
ಅಶುಭ ಘಳಿಗೆ: ಬೆಳಗ್ಗೆ 10:48 ರಿಂದ 12:28
ರಾಹುಕಾಲ: ಬೆಳಗ್ಗೆ 10:40 ರಿಂದ 12:09
ಗುಳಿಕಕಾಲ: ಬೆಳಗ್ಗೆ 7:42 ರಿಂದ 9:11
ಯಮಗಂಡಕಾಲ: ಮಧ್ಯಾಹ್ನ 3:07 ರಿಂದ 4:36

ಮೇಷ: ತಂದೆಯೊಂದಿಗೆ ಶತ್ರುತ್ವ, ದೇವರು-ಗುರುಗಳ ನಿಂದನೆ, ವಾಹನ-ಸ್ಥಿರಾಸ್ತಿ ಮೇಲೆ ಸಾಲ, ಆರ್ಥಿಕ ಸಹಾಯ ಕೇಳುವಿರಿ.

ವೃಷಭ: ಮಕ್ಕಳಿಂದ ಧನಾಗಮನ, ಉದ್ಯೋಗ-ಗೃಹ ಬದಲಾವಣೆ, ಕುಟುಂಬದಲ್ಲಿ ಉತ್ತಮ ಬಾಂಧವ್ಯ, ಮಿತ್ರರಿಂದ ಕೆಲಸಗಳಿಗೆ ಸಹಕಾರ.

ಮಿಥುನ: ತಾಯಿ ಕಡೆಯಿಂದ ಧನಾಗಮನ, ಸೈಟ್-ವಾಹನ ಖರೀದಿ,ಗೃಹ ನಿರ್ಮಾಣದ ಆಲೋಚನೆ, ಕೃಷಿಕರಿಗೆ ಅನುಕೂಲ, ವೃತ್ತಿಪರರಿಗೆ ಲಾಭ.

ಕಟಕ: ಶರೀರದಲ್ಲಿ ನೋವು, ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ದೂರ ಪ್ರದೇಶದಲ್ಲಿರುವವರ ಭೇಟಿ, ಸಂಬಂಧಿಕರೇ ಶತ್ರುವಾಗುವರು.

ಸಿಂಹ: ಮಕ್ಕಳಿಂದ ಅನುಕೂಲ, ಕುಟುಂಬದಲ್ಲಿ ಆರ್ಥಿಕ ಸಂಕಷ್ಟ, ವಿಶ್ರಾಂತಿ ವೇತನ ಪ್ರಾಪ್ತಿ, ಆಕಸ್ಮಿಕ ಧನಾಗಮನ, ಸಂಬಂಧಿಕರ ಮಾತಿನಿಂದ ನೋವು, ಅಗೌರವ, ಅಪಕೀರ್ತಿ.

ಕನ್ಯಾ: ಸ್ಥಿರಾಸ್ತಿ ವಾಹನ ಖರೀದಿ, ಸ್ನೇಹಿತರಿಂದ ಸಹಾಯ, ದಾಂಪತ್ಯ ಸಮಸ್ಯೆ ಶಮನ, ಸಂಗಾತಿಯಿಂದ ಲಾಭ,

ತುಲಾ: ಅಜೀರ್ಣ ಸಮಸ್ಯೆ, ಶರೀರದಲ್ಲಿ ಆತಂಕ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ಕೆಲಸಗಾರರ ಕೊರತೆ, ಬಾಡಿಗೆದಾರರಿಂದ ನಷ್ಟ, ಮಾನಸಿಕ ನೋವು.

ವೃಶ್ಚಿಕ: ಸಂತಾನ ದೋಷ ನಿವಾರಣೆ, ಮಕ್ಕಳಿಗೆ ಉತ್ತಮ ಅವಕಾಶ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ, ತಾಯಿಯನ್ನು ಗೌರವಿಸುವ ಆಸೆ,ಪುಣ್ಯ ಕಾರ್ಯಗಳ ಫಲ ಪ್ರಾಪ್ತಿ. ಪಿತ್ರಾರ್ಜಿತ ಆಸ್ತಿ ತಗಾದೆ ನಿವಾರಣೆ.

ಧನಸ್ಸು: ಸ್ವಂತ ಉದ್ಯಮದಲ್ಲಿ ನಷ್ಟ, ವ್ಯಾಪಾರ ವ್ಯವಹಾರದಲ್ಲಿ ಅಡೆತಡೆ, ಉದ್ಯೋಗ ಸ್ಥಳದಲ್ಲಿ ಮನಃಸ್ತಾಪ, ಸ್ಥಿರಾಸ್ತಿ ತಗಾದೆ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ತಾಯಿಯ ಆರೋಗ್ಯದಲ್ಲಿ ಏರುಪೇರು.

ಮಕರ: ಸಂಗಾತಿ-ಸ್ನೇಹಿತರಿಗಾಗಿ ಖರ್ಚು, ಪಾಲುದಾರಿಕೆ ವ್ಯವಹಾರಕ್ಕೆ ಹಣವ್ಯಯ, ತಂದೆಯೊಂದಿಗೆ ಆತ್ಮೀಯತೆ, ವಿದ್ಯಾಭ್ಯಾಸಕ್ಕಾಗಿ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿ.

ಕುಂಭ: ಸಾಲದ ಸಹಾಯ ಪ್ರಾಪ್ತಿ, ಶತ್ರುಗಳು ಮಿತ್ರರಾಗುವರು, ಕಾರ್ಮಿಕರ ಕೊರತೆ ನಿವಾರಣೆ, ಆರೋಗ್ಯದಲ್ಲಿ ಏರುಪೇರು,

ಮೀನ: ಭಾವನೆಗಳಿಗೆ ಮನ್ನಣೆ, ಕೆಲಸ ಕಾರ್ಯಗಳಿಗೆ ಸಹಕಾರ, ಶುಭ ಕಾರ್ಯಗಳಿಗೆ ಸುಸಮಯ, ಮಕ್ಕಳ ಜೀವನದಲ್ಲಿ ಅಭಿವೃದ್ಧಿ, ದಾಂಪತ್ಯದಲ್ಲಿ ಉತ್ತಮ, ಪಾಲುದಾರಿಕೆ ವ್ಯವಹಾರದಲ್ಲಿ ಪ್ರಗತಿ, ಉದ್ಯೋಗದಲ್ಲಿ ಬಡ್ತಿ, ಗೌರವ ಸನ್ಮಾನಗಳು ಪ್ರಾಪ್ತಿ.

 

Click to comment

Leave a Reply

Your email address will not be published. Required fields are marked *