ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಕೃಷ್ಣ ಪಕ್ಷ, ದ್ವಾದಶಿ ತಿಥಿ,
ಬೆಳಗ್ಗೆ 9:04 ನಂತರ ತ್ರಯೋದಶಿ
ಶುಕ್ರವಾರ, ಪೂರ್ವಭಾದ್ರಪದ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 10:51 ರಿಂದ 12:24
ಗುಳಿಕಕಾಲ: ಬೆಳಗ್ಗೆ 7:45 ರಿಂದ 9:18
ಯಮಗಂಡಕಾಲ: ಮಧ್ಯಾಹ್ನ 3:30 ರಿಂದ 5:03
Advertisement
ಮೇಷ: ಆಧ್ಯಾತ್ಮಿಕ ವಿಚಾರಗಳಲ್ಲಿ ಬೇಸರ, ಭೂ ವ್ಯವಹಾರಗಳಲ್ಲಿ ಜಯ, ಹಿರಿಯ ಸಹೋದರನಿಂದ ಕಿರಿಕಿರಿ, ಸಹೋದ್ಯೋಗಿಗಳ ಜೊತೆ ಎಚ್ಚರ, ಆಕಸ್ಮಿಕ ಸಂಕಷ್ಟಕ್ಕೆ ಸಿಲುಕುವಿರಿ.
Advertisement
ವೃಷಭ: ಉದ್ಯೋಗ ಬದಲಾವಣೆಯಿಂದ ಅನುಕೂಲ, ಆರ್ಥಿಕ ಸಂಕಷ್ಟಗಳಿಂದ ಮುಕ್ತಿ, ಪಾಲುದಾರಿಕೆ ವ್ಯವಹಾರ ಆರಂಭಕ್ಕೆ ಸಹಕಾರ.
Advertisement
ಮಿಥುನ: ನೀವಾಡುವ ಮಾತಿನಿಂದ ಅನುಕೂಲ, ಬಂಧುಗಳಿಂದ ತೊಂದರೆ, ದಾಯಾದಿಗಳ ಕಲಹ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ಉದ್ಯೋಗ ನಿಮಿತ್ರ ಪ್ರಯಾಣ, ಪ್ರವಾಸ ಕೈಗೊಳ್ಳುವಿರಿ.
ಕಟಕ: ಸ್ವಂತ ಆಲೋಚನೆ ಮಾಡುವಿರಿ, ಪ್ರಯತ್ನಗಳನ್ನು ಮುಂದೂಡುವುದು ಉತ್ತಮ, ಮಕ್ಕಳ ಬಗ್ಗೆ ಜಾಗ್ರತೆ, ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು.
ಸಿಂಹ: ಕೆಲಸ ಕಾರ್ಯಗಳಲ್ಲಿ ಯಶಸ್ಸು, ಮನೆ ವಾತಾವರಣದಲ್ಲಿ ಅಶಾಂತಿ, ದೇಹದಲ್ಲಿ ಆಲಸ್ಯ, ಮನಸ್ಸಿಗೆ ಬೇಸರ, ದಾಂಪತ್ಯದಲ್ಲಿ ಬೇರೆಯಾಗುವ ಮಾತು.
ಕನ್ಯಾ: ಸೇವಕರಿಂದ ಕಾರ್ಯ ಯಶಸ್ಸು, ಕೆಲಸಗಾರರಿಂದ ಉತ್ತಮ ಸಂಪಾದನೆ, ಸೇವಾ ವೃತ್ತಿಯ ಉದ್ಯೋಗ ಪ್ರಾಪ್ತಿ, ಸಹೋದರಿ ಶತ್ರುವಾಗಿ ಪರಿವರ್ತನೆಯಾಗುವರು, ಜಗಳವಾಗುವ ಸಾಧ್ಯತೆ.
ತುಲಾ: ಕುಟುಂಬದಲ್ಲಿ ನೆಮ್ಮದಿ, ಸಾಲಗಾರರಿಂದ ಮುಕ್ತಿ ಸಾಧ್ಯತೆ, ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ.
ವೃಶ್ಚಿಕ: ಕಿವಿ, ಹಲ್ಲು, ಕೀಲು ನೋವು, ಮನಸ್ಸಿಗೆ ಬೇಸರ, ಕೀಳರಿಮೆ ಬೆಳೆಸಿಕೊಳ್ಳುವಿರಿ, ಆಕಸ್ಮಿಕ ಸಂಕಷ್ಟಗಳು, ಮಾನಸಿಕ ಖಿನ್ನತೆಗೆ ಒಳಗಾಗುವಿರಿ.
ಧನಸ್ಸು: ಆಕಸ್ಮಿಕ ಪ್ರಯಾಣ, ಅತಿಯಾದ ನಿದ್ರೆ, ಬಂಧುಗಳು ದೂರವಾಗುವರು, ಸ್ವಯಂಕೃತ ಅಪರಾಧಗಳಿಂದ ಧನ ನಷ್ಟ, ಸ್ವಂತ ಉದ್ಯಮದಲ್ಲಿ ಏಳಿಗೆ.
ಮಕರ: ಸ್ವಂತ ಉದ್ಯಮದಲ್ಲಿ ಲಾಭ, ಅಧಿಕ ಸಂಪಾದನೆ, ಆರೋಗ್ಯಕ್ಕಾಗಿ ಖರ್ಚು, ಪಾಲುದಾರಿಕೆ ವ್ಯವಹಾರಕ್ಕೆ ಸಹಕಾರ, ಆತ್ಮೀಯರು-ಬಂಧುಗಳಿಂದ ಸಹಾಯ ಕೇಳುವಿರಿ.
ಕುಂಭ: ಆಹಾರ ವ್ಯತ್ಯಾಸದಿಂದ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ಮಕ್ಕಳಿಂದ ಲಾಭ, ಧನಾಗಮನ, ಉದ್ಯೋಗ ಸ್ಥಳದಲ್ಲಿ ನಿರಾಸೆ.
ಮೀನ: ಗೌರವ ಪ್ರತಿಷ್ಠೆಗೆ ಧಕ್ಕೆ, ಪ್ರಯಾಣದಲ್ಲಿ ಅಡೆತಡೆ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಮಾನಸಿಕ ನೆಮ್ಮದಿ.