ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಕೃಷ್ಣ ಪಕ್ಷ, ಪಂಚಮಿ ತಿಥಿ,
ಗುರುವಾರ, ಹಸ್ತ ನಕ್ಷತ್ರ
ಬೆಳಗ್ಗೆ 9:25 ನಂತರ ಚಿತ್ತಾ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 2:06 ರಿಂದ 3:34
ಗುಳಿಕಕಾಲ: ಬೆಳಗ್ಗೆ 9:42 ರಿಂದ 11:10
ಯಮಗಂಡಕಾಲ: ಬೆಳಗ್ಗೆ 6:46 ರಿಂದ 8:14
Advertisement
ಮೇಷ: ಆಕಸ್ಮಿಕ ದುರ್ಘಟನೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಿತ್ರರಿಂದ ಸಂಕಷ್ಟ, ಉದ್ಯೋಗದಲ್ಲಿ ಕಿರಿಕಿರಿ, ವ್ಯವಹಾರದಲ್ಲಿ ನಷ್ಟ, ದಾಂಪತ್ಯದಲ್ಲಿ ಕಲಹ, ಹಳೇ ವಸ್ತುಗಳಿಂದ ಪೆಟ್ಟು.
Advertisement
ವೃಷಭ: ವಿದ್ಯಾರ್ಥಿಗಳಿಗೆ ಮರೆವಿನ ಸಮಸ್ಯೆ, ಸಂಗಾತಿಯೊಂದಿಗೆ ಕಲಹ, ಬಂಧುಗಳಿಂದ ಆರ್ಥಿಕ ನೆರವು, ಸಾಲದ ಸಹಾಯ ಲಭಿಸುವುದು.
Advertisement
ಮಿಥುನ: ಕುಟುಂಬದ ಹಿತ ಶತ್ರುಗಳು ನಾಶ, ಅನಿರೀಕ್ಷಿತ ಉತ್ತಮ ಅವಕಾಶ, ಸಾಲ ತೀರಿಸಲು ಮಕ್ಕಳಿಂದ ಸಹಾಯ, ಆರ್ಥಿಕ ಪರಿಸ್ಥಿತಿ ಚೇತರಿಕೆ.
Advertisement
ಕಟಕ: ತಾಯಿಯ ಆರೋಗ್ಯದಲ್ಲಿ ಏರುಪೇರು, ಮನಸ್ಸಿನಲ್ಲಿ ಆತಂಕ, ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮ, ಅಧಿಕಾರಿಗಳಿಂದ ಸಮಸ್ಯೆಗೆ ಸಿಲುಕುವಿರಿ,
ಸಿಂಹ: ಅನಗತ್ಯ ತಿರುಗಾಟ, ವಾಹನ ರಿಪೇರಿಗಾಗಿ ಖರ್ಚು, ದೀರ್ಘಕಾಲದ ರೋಗಬಾಧೆ, ಮಾನಸಿಕ ಒತ್ತಡ, ದಾಂಪತ್ಯ ಜೀವನದಲ್ಲಿ ಅಸಮಾಧಾನ.
ಕನ್ಯಾ: ಆಕಸ್ಮಿಕ ಉದ್ಯೋಗ ಬದಲಾವಣೆ, ಶತ್ರುಗಳ ಕಾಟ, ನೆರೆ ಹೊರೆಯವರ ಕಿರಿಕಿರಿ, ಸ್ಥಳ ಬದಲಾವಣೆಗೆ ಮನಸ್ಸು, ಸ್ತ್ರೀಯರಿಂದ ಧನಾಗಮನ.
ತುಲಾ: ಉದ್ಯೋಗ ಸ್ಥಳದಲ್ಲಿ ನಿಷ್ಠೂರ, ಸ್ವಯಂಕೃತ್ಯಗಳಿಂದ ವಾಗ್ವಾದ, ಸ್ತಿರಾಸ್ತಿ-ವಾಹನ ಖರೀದಿಗೆ ಮಾತುಕತೆ, ಮಕ್ಕಳ ವಿವಾಹದ ಚಿಂತೆ, ಕುಟುಂಬದಲ್ಲಿ ಆತಂಕದ ವಾತಾವರಣ.
ವೃಶ್ಚಿಕ: ನೆರೆಹೊರೆಯವರೊಂದಿಗೆ ಕಿರಿಕಿರಿ, ಸಾಲಗಾರರಿಂದ ನಿಂದನೆ, ಕೆಲಸಗಳಲ್ಲಿ ಅಡೆತಡೆ, ವ್ಯಾಪಾರ-ಉದ್ಯೋಗದಲ್ಲಿ ನಿರುತ್ಸಾಹ, ಜೀವನ ಜಿಗುಪ್ಸೆ ಅನ್ನಿಸುವುದು.
ಧನಸ್ಸು: ಪ್ರೇಮ ವಿಚಾರಗಳಿಂದ ಸಮಸ್ಯೆ, ಭಾವನೆಗಳಿಗೆ ಧಕ್ಕೆ, ಆರ್ಥಿಕ ಸಂಕಷ್ಟಗಳು, ಮಾನಸಿಕ ಚಿಂತೆ, ಯೋಚನೆಯಿಂದ ನಿದ್ರಾಭಂಗ.
ಮಕರ: ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ಸಂಗಾತಿಯಲ್ಲಿ ದುರ್ನಡತೆ, ಮನಸ್ಸಿನಲ್ಲಿ ಬೇಸರ, ಮಿತ್ರರಿಂದ ಅನುಕೂಲ, ಹಣಕಾಸು ನೆರವು.
ಕುಂಭ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಶತ್ರುಗಳ ಕಾಟ, ಪ್ರಯಾಣದಲ್ಲಿ ವಸ್ತುಗಳ ಕಳೆಯುವಿರಿ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ.
ಮೀನ: ಪ್ರೇಮ ವಿಚಾರದಲ್ಲಿ ಸಮಸ್ಯೆ, ಉದಾಸೀನತೆಯಿಂದ ನಷ್ಟ, ಪ್ರಯಾಣ ರದ್ದಾಗುವ ಸಾಧ್ಯತೆ, ಬಂಡವಾಳ ಹೂಡಿಕೆಯಲ್ಲಿ ನಷ್ಟ, ಅನಿರೀಕ್ಷಿತ ಸಮಸ್ಯೆಗಳು.