ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ಹುಣ್ಣಿಮೆ,
ಮಂಗಳವಾರ, ಭರಣಿ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:01 ರಿಂದ 4:28
ಗುಳಿಕಕಾಲ: ಮಧ್ಯಾಹ್ನ 12:07 ರಿಂದ 1:34
ಯಮಗಂಡಕಾಲ: ಮಧ್ಯಾಹ್ನ 9:13 ರಿಂದ 10:40
Advertisement
ಮೇಷ: ಹಣಕಾಸು ವಿಚಾರದಲ್ಲಿ ಜಾಗ್ರತೆ, ಪರರಿಗೆ ಸಹಾಯ ಮಾಡುವಿರಿ, ಶತ್ರುಗಳ ಜೊತೆ ಬಾಂಧವ್ಯ ವೃದ್ಧಿ, ಪ್ರೀತಿ ವಾತ್ಸಲ್ಯ ಲಭಿಸುವುದು.
Advertisement
ವೃಷಭ: ಬಹುದಿನದ ನಿರೀಕ್ಷೆ ಫಲಿಸುವುದು, ಕನಸು ನನಸಾಗುವುದು, ಉನ್ನತ ಅಧಿಕಾರದ ಯೋಗ, ಮಾನಸಿಕ ನೆಮ್ಮದಿ.
Advertisement
ಮಿಥುನ: ಕೆಲಸ ಕಾರ್ಯಗಳಲ್ಲಿ ನಿರಾಸೆ, ಇಲ್ಲ ಸಲ್ಲದ ಅಪವಾದ, ಒತ್ತಡಗಳಿದ್ದರೂ ಕಾರ್ಯ ಮಾಡುವಿರಿ, ಕೆಲಸಗಳಲ್ಲಿ ಅಭಿವೃದ್ಧಿ.
Advertisement
ಕಟಕ: ವಿರೋಧಿಸುವವರ ಮನದಲ್ಲಿ ಸಂತಸ, ಅನ್ಯರ ಸಂತೋಷಕ್ಕೆ ಕಾರಣರಾಗುವಿರಿ, ಆರೋಗ್ಯದಲ್ಲಿ ವ್ಯತ್ಯಾಸ, ಈ ದಿನ ಸಮಾಧಾನಕಾರವಾದ ದಿನ.
ಸಿಂಹ: ಅನ್ಯಾಯದ ವಿರುದ್ಧ ಹೋರಾಡುವಿರಿ, ಆತ್ಮಸ್ಥೈರ್ಯದಿಂದ ಮುನ್ನಡೆ, ಯತ್ನ ಕಾರ್ಯದಲ್ಲಿ ಜಯ, ಅತೀ ಚಟುವಟಿಕೆಯ ದಿನ.
ಕನ್ಯಾ: ಈ ದಿನ ಸಹನೆಯಿಂದ ಯೋಚಿಸುವಿರಿ, ಕೆಲಸ ಕಾರ್ಯಗಳಲ್ಲಿ ಜನಪ್ರಿಯತೆ ಗಳಿಕೆ, ಶತ್ರುಗಳ ನಾಶ, ಶುಭ ಫಲಗಳು ಲಭಿಸುವುದು.
ತುಲಾ: ಬಾಕಿ ಹಣ ಕೈ ಸೇರುವುದು, ಉದ್ಯೋಗದಲ್ಲಿ ಕಿರಿಕಿರಿ, ವೃಥಾ ತಿರುಗಾಟ, ನೆಮ್ಮದಿಗಾಗಿ ತೀರ್ಥಯಾತ್ರೆ ದರ್ಶನ.
ವೃಶ್ಚಿಕ: ಹಳೇ ಗೆಳೆಯರ ಭೇಟಿ ಮಾಡುವಿರಿ, ಆಕಸ್ಮಿಕ ಧನ ಲಾಭ, ಅನಗತ್ಯ ನಿಂದನೆ, ಇಲ್ಲ ಸಲ್ಲದ ಅಪವಾದ, ಆರೋಗ್ಯದಲ್ಲಿ ವ್ಯತ್ಯಾಸ.
ಧನಸ್ಸು: ಅದೃಷ್ಟ ಕೈ ಕೊಡುವುದು, ಪರಿಶ್ರಮ ಪಟ್ಟರೂ ಆದಾಯ ಕಡಿಮೆ, ನಿಮ್ಮ ಆದಾಯ ಅನ್ಯರ ಪಾಲಾಗುವುದು, ಈ ದಿನ ಮಿಶ್ರವಾದ ಫಲ.
ಮಕರ: ಅತ್ಯುತ್ತಮ ಅವಕಾಶ ಲಭಿಸುವುದು, ಆಸ್ತಿ ಖರೀದಿ ಯೋಗ, ದಾಂಪತ್ಯದಲ್ಲಿ ಪ್ರೀತಿ, ಮಾರಾಟ-ಉತ್ಪಾದನಾ ಕ್ಷೇತ್ರದಲ್ಲಿ ಲಾಭ, ಈ ದಿನ ಶುಭ ಫಲ.
ಕುಂಭ: ಪ್ರೀತಿ ಪಾತ್ರರೊಂದಿಗೆ ಸುಖ ಭೋಜನ, ಅನಿರೀಕ್ಷಿತ ಪ್ರಯಾಣ, ಶತ್ರುಗಳ ಬಾಧೆ, ಉದ್ಯೋಗಸ್ಥ ಮಹಿಳೆಯರಿಗೆ ಜವಾಬ್ದಾರಿ.
ಮೀನ: ಮೇಲಾಧಿಕಾರಿಗಳಿಂದ ಪ್ರಶಂಸೆ, ವಿದೇಶಯಾನ ಯೋಗ, ಉತ್ತಮವಾದ ಪ್ರಗತಿ, ವಿವಾಹ ಯೋಗ, ವೃತ್ತಿಪರ ಬದುಕಿನಲ್ಲಿ ಮಹತ್ವದ ಬೆಳವಣಿಗೆ.