ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರ ಪದ ಮಾಸ,
ಶುಕ್ಲ ಪಕ್ಷ ತೃತೀಯಾ ತಿಥಿ,
ಬುಧವಾರ, ಚಿತ್ತ ನಕ್ಷತ್ರ.
Advertisement
ರಾಹುಕಾಲ: ಮಧ್ಯಾಹ್ನ 12:19 ರಿಂದ 1:51
ಗುಳಿಕಕಾಲ: ಬೆಳಗ್ಗೆ 10:47 ರಿಂದ 12:19
ಯಮಗಂಡಕಾಲ: ಬೆಳಗ್ಗೆ 7:43 ರಿಂದ 9:15
Advertisement
ಮೇಷ: ಕೃಷಿಕರಿಗೆ ಅನುಕೂಲವಾದ ದಿನ, ಅನಿರೀಕ್ಷಿತ ಅಧಿಕ ಧನಾಗಮನ, ನೀವಾಡುವ ಮಾತಿನಲ್ಲಿ ಎಚ್ಚರಿಕೆ ಅಗತ್ಯ, ತಾಯಿಯ ಆರೋಗ್ಯದಲ್ಲಿ ಅಲ್ಪ ವ್ಯತ್ಯಾಸ, ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ,
Advertisement
ವೃಷಭ: ಸಾಲ ಮಾಡುವ ಪರಿಸ್ಥಿತಿ, ಭಾವನೆಗಳಿಗೆ ಮನ್ನಣೆ ನೀಡುವರು, ಕೆಲಸ ಕಾರ್ಯಗಳಲ್ಲಿ ಉತ್ತಮ ಬೆಳವಣಿಗೆ, ವ್ಯಾಪಾರ-ಉದ್ಯಮ ನಿಮಿತ್ತ ಪ್ರಯಾಣ, ಉದ್ಯೋಗದಲ್ಲಿ ಒತ್ತಡವಿದ್ರೂ ನೆಮ್ಮದಿ ಪ್ರಾಪ್ತಿ.
Advertisement
ಮಿಥುನ: ಕುಟುಂಬದಲ್ಲಿ ಅಧಿಕ ಖರ್ಚು, ವಸ್ತ್ರಾಭರಣ ಖರೀದಿಸುವ ಆಲೋಚನೆ, ಆಸ್ತಿ ವಿಚಾರದಲ್ಲಿ ತಗಾದೆ ನಿವಾರಣೆ, ಸ್ಥಿರಾಸ್ತಿ ವಿಚಾರದಲ್ಲಿ ಎಚ್ಚರಿಕೆ ನಡೆ ಅಗತ್ಯ, ಸ್ನೇಹಿತರಿಂದ ಧನಾಗಮನ.
ಕಟಕ: ಸ್ವಯಂಕೃತ ಅಪರಾಧಗಳಿಂದ ನಷ್ಟ, ಕುಟುಂಬ ಸಮೇತ ಪ್ರಯಾಣ ಮಾಡುವಿರಿ, ಸ್ನೇಹಿತರಿಗಾಗಿ ಹಣ ಖರ್ಚು, ಸ್ತ್ರೀಯರ ವಸ್ತ್ರಾಭರಣ ಖರೀದಿಗೆ ಖರ್ಚು, ಆರ್ಥಿಕ ಸಮಸ್ಯೆ, ಸಾಲ ಮಾಡುವ ಪರಿಸ್ಥಿತಿ.
ಸಿಂಹ: ಮಿತ್ರರಿಂದ ಉದ್ಯೋಗಾವಕಾಶ, ಮಕ್ಕಳಿಂದ ನಿಂದನೆ-ಅವಮಾನ, ಮಾನಸಿಕ ಚಿಂತೆಯಿಂದ ನಿದ್ರಾಭಂಗ, ಇಲ್ಲ ಸಲ್ಲದ ಅಪವಾದಕ್ಕೆ ಗುರಿಯಾಗುವಿರಿ, ನೆರೆಹೊರೆ ಬಂಧುಗಳೊಂದಿಗೆ ಕಲಹ.
ಕನ್ಯಾ: ತಂದೆಯಿಂದ ಅನುಕೂಲ, ಆತ್ಮೀಯರೊಂದಿಗೆ ವೈಮನಸ್ಸು, ಹಿತ ಶತ್ರುಗಳಿಂದ ಎಚ್ಚರಿಕೆ, ಯಾರನ್ನೂ ನಂಬಿ ಕೆಲಸ ಮಾಡಬೇಡಿ, ದಾಯಾದಿಗಳೊಂದಿಗೆ ಕಲಹ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಾನಸಿಕವಾದ ನೆಮ್ಮದಿ ಪ್ರಾಪ್ತಿ.
ತುಲಾ: ಉದ್ಯೋಗದಲ್ಲಿ ಪ್ರಗತಿ, ನಾನಾ ಕ್ಷೇತ್ರಗಳಲ್ಲಿ ಅವಕಾಶ ಪ್ರಾಪ್ತಿ, ಕೋರ್ಟ್ ಕೇಸ್ಗಳಲ್ಲಿ ಯಶಸ್ಸು, ವಿಚ್ಛೇದನ ಕೇಸ್ ಬಗೆಹರಿಯುವುದು, ಹಣಕಾಸು ಸಮಸ್ಯೆ, ಪ್ರಯಾಣ ರದ್ದಾಗುವ ಸಾಧ್ಯತೆ.
ವೃಶ್ಚಿಕ: ದಾಂಪತ್ಯದಲ್ಲಿ ವಿರಸ, ಮನಸ್ಸಿನಲ್ಲಿ ನಾನಾ ಅಲೋಚನೆ, ಮಕ್ಕಳ ಬಗ್ಗೆ ಅಧಿಕ ಚಿಂತೆ, ಹಳೆ ವಸ್ತುಗಳಿಂದ ಲಾಭ, ಸ್ಥಿರಾಸ್ತಿಯಿಂದ ಅನುಕೂಲಕರ ವಾತಾವರಣ.
ಧನಸ್ಸು: ವಿಪರೀತ ರಾಜಯೋಗ ದಿವಸ, ಆಕಸ್ಮಿಕ ಅದೃಷ್ಟ ಒಲಿಯವುದು, ಹಣಕಾಸು ಲಾಭವಾಗುವುದು, ಆಕಸ್ಮಿಕ ಸಂಪತ್ತು ಲಭಿಸುವುದು, ಉದ್ಯೋಗ ನಿಮಿತ್ತ ದೂರ ಪ್ರಯಾಣ.
ಮಕರ: ಸಂಗಾತಿಯಿಂದ ಆರ್ಥಿಕ ಸಹಾಯ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಆಕಸ್ಮಿಕ ಲಾಭ ಪ್ರಮಾಣ ಹೆಚ್ಚು, ಮಕ್ಕಳಿಗೆ ಉತ್ತಮ ಅವಕಾಶ, ಆರೋಗ್ಯದಲ್ಲಿ ಚೇತರಿಕೆ. ದೂರ ಪ್ರಯಾಣಕ್ಕೆ ಮನಸ್ಸು.
ಕುಂಭ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಕೆಲಸದಲ್ಲಿ ಒತ್ತಡ ಹೆಚ್ಚಾಗುವುದು, ಹಣಕಾಸು ಸಮಸ್ಯೆ, ಸಾಲ ಮಾಡುವ ಸಾಧ್ಯತೆ, ಇಲ್ಲ ಸಲ್ಲದ ಅಪವಾದಕ್ಕೆ ಗುರಿಯಾಗುವಿರಿ, ಸ್ಥಿರಾಸ್ತಿ-ವಾಹನ ಸಾಲಕ್ಕೆ ಬೇಡಿಕೆ.
ಮೀನ: ಕಲ್ಪನಾ ಲೋಕದಲ್ಲಿ ವಿಹರಿಸುವಿರಿ, ಪತ್ರ ವ್ಯವಹಾರಗಳಿಂದ ಅನುಕೂಲ, ಮಕ್ಕಳಿಗೆ ಉದ್ಯೋಗ ಮಾಡುವಾಸೆ, ಆರೋಗ್ಯದಲ್ಲಿ ಸಮಸ್ಯೆಯಾದ್ರೂ ಚೇತರಿಕೆ. ನೆಮ್ಮದಿಯ ವಾತಾವರಣಕ್ಕೆ ಮನಸ್ಸು.