ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಕೃಷ್ಣ ಪಕ್ಷ, ಪಂಚಮಿ ತಿಥಿ,
ಶನಿವಾರ, ರೇವತಿ ನಕ್ಷತ್ರ
ಶುಭ ಘಳಿಗೆ: ಮಧ್ಯಾಹ್ನ 12:28 ರಿಂದ 2:09
ಅಶುಭ ಘಳಿಗೆ: ಬೆಳಗ್ಗೆ 9:05 ರಿಂದ 10:47
Advertisement
ರಾಹುಕಾಲ: ಬೆಳಗ್ಗೆ 9:20 ರಿಂದ 10:54
ಗುಳಿಕಕಾಲ: ಬೆಳಗ್ಗೆ 6:11 ರಿಂದ 7:46
ಯಮಗಂಡಕಾಲ: ಮಧ್ಯಾಹ್ನ 2:02 ರಿಂದ 3:36
Advertisement
ಮೇಷ: ಬಂಧುಗಳಿಂದ ನೋವು ಅವಮಾನ, ಮಕ್ಕಳ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ತಲೆ ನೋವು, ಉಷ್ಣಬಾಧೆ, ನರದೌರ್ಬಲ್ಯ, ಕುತ್ತಿಗೆ ನೋವು, ಆರೋಗ್ಯದಲ್ಲಿ ಏರುಪೇರು.
Advertisement
ವೃಷಭ: ಪ್ರಯಾಣಕ್ಕಾಗಿ ಅಧಿಕ ಖರ್ಚು, ಮಿತ್ರರೊಂದಿಗೆ ಮೋಜು-ಮಸ್ತಿ, ಉದ್ಯೋಗ ಸ್ಥಳದಲ್ಲಿ ಅನಗತ್ಯ ಮಾತುಕತೆ, ಇಲ್ಲ ಸಲ್ಲದ ಅಪವಾದ.
Advertisement
ಮಿಥುನ: ಆರ್ಥಿಕ ಸಮಸ್ಯೆ ನಿವಾರಣೆ, ಪ್ರಯಾಣದಲ್ಲಿ ಕಿರಿಕಿರಿ, ಸೇವಕರಿಂದ ತೊಂದರೆ, ಅಧಿಕಾರಿಗಳಿಂದ ಉದ್ಯೋಗದಲ್ಲಿ ಸಮಸ್ಯೆ, ನೆರೆಹೊರೆಯವರಿಂದ ಸಂಕಷ್ಟ.
ಕಟಕ: ಗರ್ಭಿಣಿಯರು ಎಚ್ಚರಿಕೆ ವಹಿಸಿ, ಅತೀ ಬುದ್ಧಿವಂತಿಕೆಯಿಂದ ಸಮಸ್ಯೆ, ವೃತ್ತಿ ಕ್ಷೇತ್ರದವರ ಭೇಟಿ ಸಾಧ್ಯತೆ, ಕೆಲಸಗಳಲ್ಲಿ ಒತ್ತಡ, ಹಣಕಾಸು ವ್ಯತ್ಯಾಸದಿಂದ ನಿದ್ರಾಭಂಗ.
ಸಿಂಹ: ಮಿತ್ರರೊಂದಿಗೆ ದೂರ ಪ್ರಯಾಣ, ಅನಿರೀಕ್ಷಿತ ಧನಾಗಮನ, ಆರೋಗ್ಯದಲ್ಲಿ ಏರುಪೇರು, ಮಾನಸಿಕ ಅಸ್ಥಿರತೆ.
ಕನ್ಯಾ: ಮಕ್ಕಳಿಗೆ ಉತ್ತಮ ಅವಕಾಶ, ಸ್ವಯಂಕೃತ್ಯಗಳಿಂದ ನಷ್ಟ, ಸಂಸಾರದಲ್ಲಿ ಕಲಹ, ಆಕಸ್ಮಿಕ ಸ್ನೇಹಿತರಿಂದ ಅನುಕೂಲ.
ತುಲಾ: ಕಾರ್ಯ ನಿಮಿತ್ತ ಪ್ರಯಾಣ, ದೂರ ಪ್ರಯಾಣ, ಸೋಲು, ನಷ್ಟ, ನಿರಾಸೆ, ಕೆಟ್ಟ ತೀರ್ಮಾನ ತೆಗೆದುಕೊಳ್ಳುವಿರಿ, ಅಹಂಭಾವದಿಂದ ಕಿರಿಕಿರಿ, ದಾಂಪತ್ಯದಲ್ಲಿ ವೈಮನಸ್ಸು, ನಿದ್ರಾಭಂಗ.
ವೃಶ್ಚಿಕ: ಹಳೇ ವಸ್ತುಗಳಿಂದ ಲಾಭ, ಪ್ರಯಾಣದಲ್ಲಿ ನಿರಾಸಕ್ತಿ, ಸ್ಥಿರಾಸ್ತಿಯಿಂದ ಅನುಕೂಲ, ವಿದ್ಯಾರ್ಥಿಗಳಲ್ಲಿ ಆಲಸ್ಯ, ಉದ್ಯೋಗದಲ್ಲಿ ಒತ್ತಡ.
ಧನಸ್ಸು: ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಇಲ್ಲ ಸಲ್ಲದ ಅಪವಾದ, ವಿದ್ಯಾರ್ಥಿಗಳಲ್ಲಿ ಆಸಕ್ತಿ, ಸಂಗಾತಿಯ ನಡವಳಿಕೆಯಿಂದ ಬೇಸರ, ಬಂಧುಗಳಿಂದ ದೂರವಾಗುವಿರಿ.
ಮಕರ: ಅದೃಷ್ಟ ಒಲಿಯುವುದು, ಪುಣ್ಯಕ್ಷೇತ್ರಗಳ ದರ್ಶನ ಭಾಗ್ಯ, ಮಾಟ-ಮಂತ್ರದ ಭೀತಿ, ಉದ್ಯೋಗ ಬದಲಾವಣೆ, ಸ್ಥಳ ಬದಲಾವಣೆಯಿಂದ ಸಮಸ್ಯೆ.
ಕುಂಭ: ಆದಾಯ ತೆರಿಗೆ ಇಲಾಖೆಯವರಿಂದ ಸಮಸ್ಯೆ, ಎಲೆಕ್ಟ್ರಾನಿಕ್ ವಸ್ತುಗಳಿಂದ ತೊಂದರೆ, ಮಕ್ಕಳಲ್ಲಿ ಅನಗತ್ಯ ತಿರುಗಾಟ, ಪ್ರೇಮ ವಿಚಾರಗಳಲ್ಲಿ ಸಮಸ್ಯೆ.
ಮೀನ: ಪ್ರಯಾಣದಲ್ಲಿ ಸಮಸ್ಯೆ, ವಾಹನ ಚಾಲನೆಯಲ್ಲಿ ಎಚ್ಚರ, ಮಹಿಳೆಯರಿಗೆ ಐಷಾರಾಮಿ ಒಲವು, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ದೂರ ಪ್ರದೇಶಕ್ಕೆ ಪ್ರಯಾಣ.