ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ಭರಣಿ ನಕ್ಷತ್ರ,
ಸೋಮವಾರ, ಚತುರ್ದಶಿ ಉಪರಿ ಹುಣ್ಣಿಮೆ,
ರಾಹುಕಾಲ: ಬೆಳಗ್ಗೆ 7:46 ರಿಂದ 9:13
ಗುಳಿಕಕಾಲ: ಮಧ್ಯಾಹ್ನ 1:34 ರಿಂದ 3:01
ಯಮಗಂಡಕಾಲ: ಬೆಳಗ್ಗೆ 10:40 ರಿಂದ 12:07
Advertisement
ಮೇಷ: ಸ್ವಪ್ರಯತ್ನದಿಂದ ಯಶಸ್ಸು ಲಭಿಸುವುದು, ಶತ್ರುಗಳ ಬಾಧೆ, ಸಣ್ಣ ಪುಟ್ಟ ಸಮಸ್ಯೆಗಳು, ಈ ದಿನ ಮಿಶ್ರ ಫಲ ಯೋಗ.
Advertisement
ವೃಷಭ: ವೃತ್ತಿ ಜೀವನದಲ್ಲಿ ಪ್ರಗತಿ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಅನಗತ್ಯ ವೆಚ್ಚ ನಿಯಂತ್ರಿಸಿ, ಹೊಸ ವ್ಯವಹಾರಗಳಿಂದ ಧನ ಲಾಭ.
Advertisement
ಮಿಥುನ: ನಿರೀಕ್ಷೆಗೆ ತಕ್ಕ ಆದಾಯ, ದೂರ ಪ್ರಯಾಣ, ಅಕಾಲ ಭೋಜನ ಪ್ರಾಪ್ತಿ, ಉತ್ತಮ ಅವಕಾಶ ಸಾಧ್ಯತೆ.
Advertisement
ಕಟಕ: ಯತ್ನ ಕಾರ್ಯದಲ್ಲಿ ಸ್ವಲ್ಪ ವಿಳಂಬ, ನಾನಾ ರೀತಿಯ ಧನ ಲಾಭ, ಮಾನಸಿಕ ನೆಮ್ಮದಿ, ವಿದೇಶ ಪ್ರಯಾಣ, ಇಚ್ಛಿತ ಕಾರ್ಯ ಕೈಗೂಡುವುದು.
ಸಿಂಹ: ನಿಮ್ಮ ಜಾಣ್ಮೆಯಿಂದ ಧನ ಲಾಭ, ಸಂಪಾದನೆಗೆ ಅವಕಾಶ ಲಭಿಸುವುದು, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಈ ದಿನ ಶುಭ ಫಲ ಪ್ರಾಪ್ತಿ.
ಕನ್ಯಾ: ಅಧಿಕವಾದ ಒತ್ತಡ, ಮನಸ್ಸಿಗೆ ಅಶಾಂತಿ, ತಾಳ್ಮೆ ಪರೀಕ್ಷಿಸುತ್ತಿರುವಿರಿ, ಮಾನಸಿಕ ವ್ಯಥೆ, ಅನ್ಯರೊಂದಿಗೆ ವೈಮನಸ್ಸು.
ತುಲಾ: ಸಂಕಷ್ಟಗಳು ಎದುರಿಸುತ್ತಿರುವಿರಿ, ಎಲ್ಲವನ್ನು ನಗುತ್ತಾ ನಿಭಾಯಿಸುವಿರಿ, ಮನೆಯವರ ಜೊತೆ ಕಲಹ, ಇಂದು ಅಶುಭ ಫಲ.
ವೃಶ್ಚಿಕ: ಆಕಸ್ಮಿಕ ಸಮಸ್ಯೆ ಎದುರಾಗುವುದು, ಅಕಾಲ ಭೋಜನ, ಮನೆಯವರ ಜೊತೆ ಸಂತಸ, ದೂರ ಪ್ರಯಾಣ.
ಧನಸ್ಸು: ಕೆಲಸ ಮುಗಿಸಲು ಪರಿಶ್ರಮ, ಹಣಕಾಸು ಪರಿಸ್ಥಿತಿ ಉತ್ತಮ, ಬೇಡದ ವಿಚಾರಗಳಿಂದ ದೂರವಿರಿ, ಮನಸ್ಸಿಗೆ ಅಲ್ಪ ಸಮಾಧಾನಕರ.
ಮಕರ: ವಿಶ್ರಾಂತಿ ಇಲ್ಲದೇ ಅಧಿಕ ಓಡಾಟ, ದೃಷ್ಠಿ ದೋಷದಿಂದ ತೊಂದರೆ, ದಾಂಪತ್ಯದಲ್ಲಿ ಬಿರುಕು, ಆರೋಗ್ಯದಲ್ಲಿ ವ್ಯತ್ಯಾಸ.
ಕುಂಭ: ಕುಟುಂಬದ ಬಗ್ಗೆ ಕಾಳಜಿವಹಿಸಿ, ಪ್ರೀತಿಯ ಕನಸು ನನಸಾಗುವುದು, ಮಾನಸಿಕ ವೇದನೆ, ಸಾಲ ಬಾಧೆ.
ಮೀನ: ಜಾಣ್ಮೆಯಿಂದ ಕಾರ್ಯ ಪ್ರಗತಿ, ಕುಟುಂಬದಲ್ಲಿ ಜವಾಬ್ದಾರಿ, ಕೃಷಿಕರಿಗೆ ಲಾಭ, ಪುಣ್ಯಕ್ಷೇತ್ರ ದರ್ಶನ, ಹಿತ ಶತ್ರುಗಳಿಂದ ತೊಂದರೆ.