ವಾರ : ಬುಧವಾರ, ತಿಥಿ: ಅಷ್ಟಮಿ, ನಕ್ಷತ್ರ : ಜೇಷ್ಠ,
ಶ್ರೀ ವಿಶ್ವಾವಸು ನಾಮ ಸಂವತ್ಸರ
ಉತ್ತರಾಯಣ, ಶಿಶಿರ ಋತು
ಪಾಲ್ಗುಣ ಮಾಸ, ಕೃಷ್ಣ ಪಕ್ಷ
ರಾಹುಕಾಲ – 12:34 ರಿಂದ 2:04
ಗುಳಿಕಕಾಲ – 11: 04 ರಿಂದ 12:34
ಯಮಗಂಡಕಾಲ – 8:04 ರಿಂದ 9:34
ಮೇಷ: ಈ ದಿನ ಆಕಸ್ಮಿಕ ಧನ ಲಾಭ, ದಾಂಪತ್ಯದಲ್ಲಿ ಪ್ರೀತಿ, ತಾಳ್ಮೆ ಕಳೆದುಕೊಳ್ಳದೆ ಕೆಲಸ ಮಾಡಿ, ಆದಾಯದ ಮೂಲ ಹೆಚ್ಚಾಗುವುದು.
ವೃಷಭ: ಮುಂದೂಡುತ್ತಾ ಬಂದಿದ್ದ ಒಪ್ಪಂದ ಇತ್ಯರ್ಥ,ಗುರಿ ಸಾಧನೆಗೆ ಒಳ್ಳೆಯ ಕಾಲ, ವಿದ್ಯಾರ್ಥಿಗಳಿಗೆ ಯಶಸ್ಸು.
ಮಿಥುನ: ಷೇರು ವ್ಯವಹಾರಗಳಿಂದ ಲಾಭ, ಹೆಚ್ಚು ಶ್ರಮ ಅಲ್ಪ ಗಳಿಕೆ, ದೂರ ಪ್ರಯಾಣ, ರೈತರಿಗೆ ಕೃಷಿಯಲ್ಲಿ ಲಾಭ.
ಕಟಕ: ಉದ್ಯೋಗದಲ್ಲಿ ಬಡ್ತಿ, ಸ್ನೇಹಿತರ ಭೇಟಿ, ಮನೆಗೆ ಹಿರಿಯರ ಆಗಮನ, ಭೂ ಲಾಭ, ಮೃಷ್ಟಾನ್ನ ಭೋಜನ.
ಸಿಂಹ: ಅನಗತ್ಯ ಸ್ವಾಭಿಮಾನದಿಂದ ಸ್ವಲ್ಪ ವಿರಸ, ಮನೆಯಲ್ಲಿ ಅಶಾಂತಿ, ಸಣ್ಣಪುಟ್ಟ ಆಶ್ಚರ್ಯಕರ ಬದಲಾವಣೆ.
ಕನ್ಯಾ: ಮಾನಸಿಕ ಅಸ್ಥಿರತೆ, ನಿರ್ಧಾರಗಳಿಗೆ ಹಿನ್ನಡೆ, ಸ್ವಂತ ಉದ್ಯಮಿಗಳಿಗೆ ಪ್ರಗತಿ, ಸ್ತ್ರೀಯರಿಂದ ಮನಸ್ಸಿಗೆ ಬೇಸರ.
ತುಲಾ: ಈ ದಿನ ಕಾರ್ಯ ವಿಘಾತ, ಸ್ಥಳ ಬದಲಾವಣೆ, ದಾಯಾದಿ ಕಲಹ, ವಿಪರೀತ ಖರ್ಚು , ಸೇವಕರಿಂದ ಸಹಾಯ.
ವೃಶ್ಚಿಕ: ಅಧಿಕಾರಿಗಳಿಂದ ಪ್ರಶಂಸೆ, ನಿರುದ್ಯೋಗಿಗಳಿಗೆ ಉದ್ಯೋಗ ಲಭ್ಯ, ಪುಣ್ಯಕ್ಷೇತ್ರ ದರ್ಶನ, ತಾಳ್ಮೆಯಿಂದ ವರ್ತಿಸಿ.
ಧನಸ್ಸು: ವಿದ್ಯಾಭ್ಯಾಸದಲ್ಲಿ ಪ್ರಗತಿ, ಸಮಾಜದಲ್ಲಿ ಗೌರವ, ಮನೆಯಲ್ಲಿ ಶಾಂತಿ, ಉದ್ಯೋಗದಲ್ಲಿ ಉನ್ನತ ಸ್ಥಾನಮಾನ.
ಮಕರ: ಈ ದಿನ ಶತ್ರುನಾಶ, ಹಣ ಬಂದರೂ ಉಳಿಯುವುದಿಲ್ಲ, ಉತ್ತಮ ಬುದ್ಧಿಶಕ್ತಿ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ಪರರ ಧನಪ್ರಾಪ್ತಿ.
ಕುಂಭ: ಈ ದಿನ ಸಾಲಭಾದೆ, ಅನಾವಶ್ಯಕ ಮಾತುಗಳಿಂದ ದೂರವಿರಿ, ಧನವ್ಯಯ, ಭಾಗ್ಯ ವೃದ್ಧಿ, ವಿವಾಹ ಯೋಗ.
ಮೀನ: ಅಶಾಂತಿ, ಭಯ ಭೀತಿ, ಶತ್ರು ಭಾದೆ, ಕೆಲಸ ಕಾರ್ಯಗಳಲ್ಲಿ ಜಯ, ರಾಜ ಸನ್ಮಾನ.

