ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ತೃತೀಯಾ ತಿಥಿ,
ಮಂಗಳವಾರ, ಪುಬ್ಬ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:34 ರಿಂದ 5:02
ಗುಳಿಕಕಾಲ: ಮಧ್ಯಾಹ್ನ 12:38 ರಿಂದ 2:06
ಯಮಗಂಡಕಾಲ: ಬೆಳಗ್ಗೆ 9:42 ರಿಂದ 11:10
Advertisement
ಮೇಷ: ನಿಷ್ಠೂರದ ಮಾತುಗಳನ್ನಾಡುವಿರಿ, ಆತ್ಮೀಯರಿಗೆ ನೋವುಂಟು ಮಾಡುವಿರಿ, ವಾಹನ ರಿಪೇರಿಯಿಂದ ಖರ್ಚು,
ಹಿತ ಶತ್ರುಗಳ ಬಾಧೆ.
Advertisement
ವೃಷಭ: ಕುಟುಂಬ ಸೌಖ್ಯ, ಕೃಷಿಕರಿಗೆ ಲಾಭ, ಯತ್ನ ಕಾರ್ಯದಲ್ಲಿ ಜಯ, ವಿದ್ಯಾರ್ಥಿಗಳಲ್ಲಿ ಗೊಂದಲ, ದಾಂಪತ್ಯದಲ್ಲಿ ವಿರಸ.
Advertisement
ಮಿಥುನ: ಋಣ ಬಾಧೆಯಿಂದ ಮುಕ್ತಿ, ಮಿತ್ರರಿಂದ ದ್ರೋಹ, ಮನಃಕ್ಲೇಷ, ಅಕಾಲ ಭೋಜನ, ವಾದ-ವಿವಾದಗಳಿಂದ ದೂರವಿರಿ.
Advertisement
ಕಟಕ: ಗುರು ಹಿರಿಯರಲ್ಲಿ ಭಕ್ತಿ, ಮಂಗಳ ಕಾರ್ಯಗಳಲ್ಲಿ ಭಾಗಿ, ಶತ್ರುಗಳ ಭಯ, ಅಧಿಕವಾದ ಖರ್ಚು, ಆತುರ ಸ್ವಭಾವ.
ಸಿಂಹ: ನಿರ್ಧಾರ ಕೈಗೊಳ್ಳುವ ಮುನ್ನ ಯೋಚಿಸಿ, ತಾಳ್ಮೆಯಿಂದ ಕಾರ್ಯ ನಿರ್ವಹಿಸುವುದು ಉತ್ತಮ, ಮಾನಸಿಕ ಒತ್ತಡ,
ವ್ಯವಹಾರಗಳಲ್ಲಿ ಎಚ್ಚರ.
ಕನ್ಯಾ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಅನಗತ್ಯ ದ್ವೇಷ ಮಾಡುವಿರಿ, ಅತಿಯಾದ ನಿದ್ರೆ, ಕೆಲಸ ಕಾರ್ಯಗಳಲ್ಲಿ ತಾಳ್ಮೆ ಅಗತ್ಯ, ದುಡುಕು ಸ್ವಭಾವ.
ತುಲಾ: ಅಮೂಲ್ಯ ವಸ್ತುಗಳ ಖರೀದಿ, ಅಲ್ಪ ಆದಾಯ, ಉದ್ಯೋಗದಲ್ಲಿ ಕಿರಿಕಿರಿ, ಸಣ್ಣ ಪುಟ್ಟ ವಿಚಾರಗಳಿಂದ ಕಲಹ.
ವೃಶ್ಚಿಕ: ರಾಜಕೀಯ ಕ್ಷೇತ್ರದಲ್ಲಿ ಗೊಂದಲ, ಮೃತ್ಯು ಭಯ, ಕಾರ್ಯದಲ್ಲಿ ವಿಳಂಬ, ನಂಬಿಕಸ್ಥರಿಂದ ಮೋಸ, ವ್ಯವಹಾರದಲ್ಲಿ ಎಚ್ಚರಿಕೆವಹಿಸಿ.
ಧನಸ್ಸು: ಮಾನಸಿಕ ನೆಮ್ಮದಿ, ಪ್ರತಿಭೆಗೆ ತಕ್ಕ ಫಲ, ಸ್ತ್ರೀ ಸಮಾನ ವ್ಯಕ್ತಿಯಿಂದ ಶುಭ, ವಾಹನ ಖರೀದಿ ಯೋಗ.
ಮಕರ: ಯತ್ನ ಕಾರ್ಯದಲ್ಲಿ ವಿಳಂಬ, ಹಿತ ಶತ್ರುಗಳಿಂದ ಸಲಹೆ, ಗೌರವ ಸನ್ಮಾನ ಪ್ರಾಪ್ತಿ, ಈ ದಿನ ಮಿಶ್ರ ಫಲ ಯೋಗ.
ಕುಂಭ: ಚಂಚಲ ಮನಸ್ಸು, ಮನಸ್ಸಿನಲ್ಲಿ ಕೆಟ್ಟಾಲೋಚನೆ, ಆರೋಗ್ಯದಲ್ಲಿ ತೊಂದರೆ, ವಿವಾಹ ಯೋಗ, ಅಲ್ಪ ಲಾಭ, ಅಧಿಕ ಖರ್ಚು.
ಮೀನ: ಕೀರ್ತಿ ಲಾಭ, ವ್ಯಾಪಾರ-ವ್ಯವಹಾರದಲ್ಲಿ ಲಾಭ, ದೂರ ಪ್ರಯಾಣ, ಮಹಿಳೆಯರಿಗೆ ಶುಭ ಫಲ, ದ್ರವ್ಯ ಲಾಭ.