ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಕೃಷ್ಣ ಪಕ್ಷ, ಪ್ರಥಮಿ ತಿಥಿ,
ಶನಿವಾರ, ಪುನರ್ವಸು ನಕ್ಷತ್ರ,
ಮಧ್ಯಾಹ್ನ 1:30 ನಂತರ ಪುಷ್ಯ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:39 ರಿಂದ 11:05
ಗುಳಿಕಕಾಲ: ಬೆಳಗ್ಗೆ 6:47 ರಿಂದ 8:13
ಯಮಗಂಡಕಾಲ: ಮಧ್ಯಾಹ್ನ 1:57 ರಿಂದ 3:23
Advertisement
ಮೇಷ: ಎಲೆಕ್ಟ್ರಾನಿಕ್-ಮೆಕ್ಯಾನಿಕ್ ಕ್ಷೇತ್ರದವರಿಗೆ ಲಾಭ, ಮಾತೃವಿನಿಂದ ಹಣಕಾಸು ನೆರವು, ಮಾನಸಿಕ ವ್ಯಥೆ, ದೇಹದಲ್ಲಿ ಆಲಸ್ಯ, ದುಃಖ ಬೇಸರ ಅಧಿಕವಾಗುವುದು.
Advertisement
ವೃಷಭ: ಸಾಹಿತ್ಯ-ಪತ್ರಿಕೋದ್ಯಮ ಕ್ಷೇತ್ರದವರಿಗೆ ಲಾಭ, ವ್ಯವಹಾರದಲ್ಲಿ ಅನುಕೂಲ, ಸ್ವಯಂಕೃತ ಅಪರಾಧಗಳಿಂದ ನಷ್ಟ, ದಾಂಪತ್ಯದಲ್ಲಿ ವಿರಸ, ಉದ್ಯೋಗ ಸ್ಥಳದಲ್ಲಿ ವ್ಯಥೆ.
Advertisement
ಮಿಥುನ: ಆರ್ಥಿಕ ಸಮೃದ್ಧಿಯ ದಿನ, ಸಿಹಿಯಾದ ಮಾತುಗಳನ್ನಾಡುವಿರಿ, ಕೌಟುಂಬಿಕ ಕಲಹ, ಕೋರ್ಟ್ ಕೇಸ್‍ಗಳಲ್ಲಿ ಜಯ.
Advertisement
ಕಟಕ: ಕೃಷಿಕರಿಗೆ ಅನುಕೂಲ, ವ್ಯಾಪಾರಿಗಳಿಗೆ ಲಾಭ, ಹೊಟ್ಟೆ ನೋವು, ಗ್ಯಾಸ್ಟ್ರಿಕ್ ಸಮಸ್ಯೆ, ಕೀಲು ನೋವು, ಕಾಲು ನೋವು, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ.
ಸಿಂಹ: ಆಕಸ್ಮಿಕ ಧನ ನಷ್ಟ, ಸೋಮಾರಿತನ, ಆಲಸ್ಯ, ಅಧಿಕವಾದ ನಿದ್ರೆ, ಸೇವಕರಿಂದ ತೊಂದರೆ, ಸಾಲಗಾರರು-ಶತ್ರುಗಳ ಬಾಧೆ, ಮಾನಸಿಕ ವ್ಯಥೆ.
ಕನ್ಯಾ: ಪಾಲುದಾರಿಕೆ ವ್ಯವಹಾರದಲ್ಲಿ ಅಧಿಕ ಲಾಭ, ಸಂಬಂಧಿಕರಿಂದ ಕಿರಿಕಿರಿ, ಆತ್ಮೀಯರಲ್ಲಿ ವೈಮನಸ್ಸು, ಭೂಮಿ-ವಾಹನ ಖರೀದಿ ಯೋಗ, ಹಿರಿಯ ಸಹೋದರನಿಂದ ಅನುಕೂಲ.
ತುಲಾ: ಹಣಕಾಸು ಸಮಸ್ಯೆ ಎದುರಾಗುವುದು, ಉದ್ಯೋಗ ಸ್ಥಳದಲ್ಲಿ ವಾಗ್ವಾದ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ವ್ಯಾಪಾರ-ವ್ಯವಹಾರದಲ್ಲಿ ಎಚ್ಚರ, ಈ ದಿನ ಎಚ್ಚರಿಕೆಯ ನಡೆ ಅಗತ್ಯ.
ವೃಶ್ಚಿಕ: ಉನ್ನತ ವಿದ್ಯಾಭ್ಯಾಸದ ಯೋಗ, ಭಾಗ್ಯೋದಯದ ದಿವಸ, ಮಕ್ಕಳಿಗೆ ಉತ್ತಮ ಅವಕಾಶ, ಈ ದಿನ ಶುಭ ಫಲ ಯೋಗ.
ಧನಸ್ಸು; ವಿಪರೀತ ರಾಜಯೋಗದ ದಿವಸ, ಸ್ಥಿರಾಸ್ತಿ ತಗಾದೆ ನಿವಾರಣೆ ಸಾಧ್ಯತೆ, ಕೋರ್ಟ್ ಕೇಸ್‍ಗಳಲ್ಲಿ ಜಯ, ಯತ್ನ ಕಾರ್ಯಗಳಲ್ಲಿ ಮುನ್ನಡೆ, ಈ ದಿನ ಅದೃಷ್ಟದ ಶುಭ ಫಲ.
ಮಕರ: ಬಡ್ಡಿ ವ್ಯವಹಾರ ಮಾಡುವಿರಿ, ಷೇರು ವ್ಯವಹಾರದಲ್ಲಿ ಹೂಡಿಕೆ, ದಾಂಪತ್ಯ ಸಮಸ್ಯೆಗಳಿಂದ ಮುಕ್ತಿ, ಪಾಲುದಾರಿಕೆ ವ್ಯವಹಾರಕ್ಕೆ ಒಪ್ಪಂದ, ವ್ಯಾಪಾರ ಮಾಡಲು ತೀರ್ಮಾನ.
ಕುಂಭ: ಶೀತ, ಕಫ ಬಾಧೆ, ಹೊಟ್ಟೆ ನೋವು, ಅಜೀರ್ಣ ಸಮಸ್ಯೆ, ಆರ್ಥಿಕ ಸಂಕಷ್ಟ, ಸಾಲ ಮಾಡುವ ಪರಿಸ್ಥಿತಿ, ಪ್ರಯಾಣದಲ್ಲಿ ಚಿನ್ನಾಭರಣ ಕಳವು ಸಾಧ್ಯತೆ.
ಮೀನ: ಉನ್ನತ ಹಂತದ ಉದ್ಯೋಗ ಪ್ರಾಪ್ತಿ, ಆರೋಗ್ಯದಲ್ಲಿ ಸುಧಾರಣೆ, ದುಶ್ಚಟಗಳಿಂದ ಮುಕ್ತಿ, ಪೂರ್ವ ಜನ್ಮದ ಪುಣ್ಯ ಪ್ರಾಪ್ತಿ.