ರಾಹುಕಾಲ: ಸಂಜೆ 5:04 ರಿಂದ 6:34
ಗುಳಿಕಕಾಲ: ಮಧ್ಯಾಹ್ನ 3:34 ರಿಂದ 5:04
ಯಮಗಂಡಕಾಲ: ಮಧ್ಯಾಹ್ನ 12:34 ರಿಂದ 2:04
ಭಾನುವಾರ, ಅಮಾವಾಸ್ಯೆ ,ಪೂರ್ವಭದ್ರ ನಕ್ಷತ್ರ
ಶ್ರೀ ಶೋಭಕೃತ ನಾಮ ಸಂವತ್ಸರ, ಉತ್ತರಾಯಣ,
ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ.
Advertisement
ಮೇಷ: ಮಕ್ಕಳ ಅಗತ್ಯಕ್ಕೆ ಖರ್ಚು ಹೆಚ್ಚಾಗುವುದು, ಪ್ರಭಾವಿ ವ್ಯಕ್ತಿಗಳ ಭೇಟಿ, ವಿರೋಧಿಗಳ ಮೇಲೆ ಒಂದು ಕಣ್ಣೀರಲಿ, ಕೆಲಸದಲ್ಲಿ ಒತ್ತಡ ಜಾಸ್ತಿ, ಅಕಾಲ ಭೋಜನ.
Advertisement
ವೃಷಭ: ಪರಸ್ತ್ರಿಯಿಂದ ತೊಂದರೆ, ಅಧಿಕ ತಿರುಗಾಟ, ಆಪ್ತರನ್ನು ದ್ವೇಷಿಸುವಿರಿ, ಪುಣ್ಯಕ್ಷೇತ್ರ ದರ್ಶನ, ವಿವಾಹಕ್ಕೆ ಅಡಚಣೆ, ನೆಮ್ಮದಿ ಇಲ್ಲದ ಜೀವನ, ಪಾಪ ಬುದ್ಧಿ.
Advertisement
ಮಿಥುನ: ಹಣಕಾಸಿನ ಮುಗ್ಗಟ್ಟು, ದಾಂಪತ್ಯದಲ್ಲಿ ಕಲಹ, ಸ್ತ್ರೀಯರು ತಾಳ್ಮೆಯಿಂದ ಇದ್ದಷ್ಟು ಒಳ್ಳೆಯದು, ವಿದ್ಯಾಭ್ಯಾಸದಲ್ಲಿ ಮುನ್ನಡೆ, ಧಾರ್ಮಿಕ ಕ್ಷೇತ್ರದಲ್ಲಿ ಭಾಗಿ, ವಿಪರೀತ ವ್ಯಾಸನ.
Advertisement
ಕಟಕ: ಪರಿಶ್ರಮಕ್ಕೆ ತಕ್ಕ ಫಲ, ಮುಖ್ಯ ಕೆಲಸಗಳು ನೆರವೇರುವುದು, ಮನಸ್ಸಿಗೆ ಸಂತಸ, ವೃತ್ತಿರಂಗದಲ್ಲಿ ಸ್ಥಾನಮಾನ ಗೌರವ ಸಿಗಲಿದೆ, ಇತರರ ಮಾತಿಗೆ ಮರುಳಾಗಬೇಡಿ.
ಸಿಂಹ: ವಿಧೇಯತೆಯೇ ಯಶಸ್ಸಿನ ಮೆಟ್ಟಿಲು, ಹಿರಿಯರ ಮಾತಿಗೆ ಗೌರವ ಕೊಡಿ, ಸರಿ-ತಪ್ಪುಗಳ ಬಗ್ಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ, ಅನಾರೋಗ್ಯ, ವಾಹನ ಖರೀದಿ.
ಕನ್ಯಾ: ಭೋಗವಸ್ತು ಪ್ರಾಪ್ತಿ, ಮಿತ್ರರಿಂದ ಸಹಾಯ, ಅನಗತ್ಯ ಖರ್ಚು, ಆರೋಗ್ಯದ ಬಗ್ಗೆ ಕಾಳಜಿ, ದುಷ್ಟ ಚಿಂತನೆ, ಸಂತಾನ ಪ್ರಾಪ್ತಿ, ಮನಶಾಂತಿ.
ತುಲಾ: ಮಾತಿನ ವೈಖರಿ, ಹಿಡಿದ ಕೆಲಸ ಸಾಧಿಸುವಿರಿ, ಕೋಪ ಜಾಸ್ತಿ, ಚಂಚಲ ಬುದ್ಧಿ, ಯಾರಿಗೂ ಹೆದರುವುದಿಲ್ಲ, ಮೋಸ ವಂಚನೆಗಳ ಕಡೆ ಗಮನವಿರಲಿ.
ವೃಶ್ಚಿಕ: ಸಂದರ್ಭಕ್ಕೆ ತಕ್ಕಂತೆ ಮಾತನಾಡುವಿರಿ, ಇತರರನ್ನು ನಿಂದಿಸುವಿರಿ, ದಾಂಪತ್ಯದಲ್ಲಿ ಪ್ರೀತಿ, ಉದ್ಯೋಗದಲ್ಲಿ ಬದಲಾವಣೆ, ಪರರಿಗೆ ಸಹಾನುಭೂತಿ ತೋರಿಸುವಿರಿ.
ಧನಸ್ಸು: ನಿಮ್ಮ ಒಳ್ಳೆಯ ಗುಣ ಎಲ್ಲರನ್ನೂ ಆಕರ್ಷಿಸುತ್ತದೆ, ವಿಪರೀತ ಖರ್ಚು, ಸುಖ ಭೋಜನ, ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ, ಆರೋಗ್ಯದಲ್ಲಿ ಚೇತರಿಕೆ, ಮನಃಶಾಂತಿ.
ಮಕರ: ವಿರೋಧಿಗಳಿಂದ ತೊಂದರೆ, ಪರಸ್ಥಳ ವಾಸ, ಸ್ನೇಹಿತ ಜನರ ಸಹವಾಸ, ಅನ್ಯ ಜನರಲ್ಲಿ ದ್ವೇಷ, ತೀರ್ಥಯಾತ್ರಾ ದರ್ಶನ, ಸ್ತ್ರೀಯರಿಗೆ ಲಾಭ,ಚಂಚಲ ಮನಸ್ಸು.
ಕುಂಭ: ಕುಟುಂಬ ಸೌಖ್ಯ, ವಾದ ವಿವಾದಗಳಿಂದ ದೂರವಿರಿ, ಅಲ್ಪ ಆದಾಯ ಅಧಿಕ ಖರ್ಚು, ಕೆಲಸ ಕಾರ್ಯಗಳಲ್ಲಿ ಜಯ, ವಿದ್ಯಾರ್ಥಿಗಳಲ್ಲಿ ಗೊಂದಲ, ದೇವತಾ ಕಾರ್ಯಗಳಲ್ಲಿ ಭಾಗಿ.
ಮೀನ: ಪ್ರಭಾವಿ ವ್ಯಕ್ತಿಗಳ ಭೇಟಿ, ಸಹೋದರರಿಂದ ಸಹಾಯ, ದ್ರವ್ಯ ನಷ್ಟ, ನಿಮ್ಮ ಹಣ ಕಳ್ಳರ ಪಾಲಾಗುವ ಸಾಧ್ಯತೆ, ಇತರರ ಮಾತಿಗೆ ಮರುಳಾಗಬೇಡಿ.