ಪಂಚಾಂಗ
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಶುಕ್ಲ ಪಕ್ಷ, ಅಷ್ಟಮಿ ತಿಥಿ,
ಬುಧವಾರ, ಆರಿದ್ರಾ ನಕ್ಷತ್ರ
Advertisement
ರಾಹುಕಾಲ: ಮಧ್ಯಾಹ್ನ 12:27 ರಿಂದ 1:59
ಗುಳಿಕಕಾಲ: ಬೆಳಗ್ಗೆ 10:55 ರಿಂದ 12:27
ಯಮಗಂಡಕಾಲ: ಬೆಳಗ್ಗೆ 7:51 ರಿಂದ 9:23
Advertisement
ಮೇಷ: ಸ್ವಂತ ಉದ್ಯಮವರಿಗೆ ಅಧಿಕ ಲಾಭ, ಶುಭ ಕಾರ್ಯಗಳಲ್ಲಿ ಭಾಗಿ, ಬಂಧುಗಳ ಆಗಮನ, ಸುಖ ಭೋಜನ.
Advertisement
ವೃಷಭ: ತಾಳ್ಮೆ, ಮೌನವಾಗಿರುವುದು ಉತ್ತಮ, ಹಿತ ಶತ್ರುಗಳಿಂದ ಕುತಂತ್ರ, ಸ್ಥಳ ಬದಲಾವಣೆ, ಸ್ಥಿರಾಸ್ತಿ ಗಳಿಕೆ, ಕೆಲಸ ಕಾರ್ಯಗಳಲ್ಲಿ ವಿಳಂಬ.
Advertisement
ಮಿಥುನ: ಹಿರಿಯರ ಮಾತಿಗೆ ಬೆಲೆಕೊಡಿ, ಮುಂಗೋಪ ಹೆಚ್ಚಾಗುವುದು, ವ್ಯವಹಾರದಲ್ಲಿ ಪಾಲುದಾರರ ವೈಮನಸ್ಸು, ಷೇರು ವಾಪಸ್ಸು ಪಡೆಯುವರು.
ಕಟಕ: ಕೈ ಹಾಕಿದ ಕೆಲಸಗಳಲ್ಲಿ ಪ್ರಗತಿ, ಹಣಕಾಸು ಲಾಭ, ಸ್ತ್ರೀಯರಿಗೆ ಅನುಕೂಲ, ಚಿನ್ನಾಭರಣ ವ್ಯಾಪಾರಿಗಳಿಗೆ ಲಾಭ, ಉತ್ತಮ ಶುಭ ಫಲ ಲಭಿಸುವುದು.
ಸಿಂಹ: ದ್ರವ್ಯ ಲಾಭ, ದುಃಖದಾಯಕ ಪ್ರಸಂಗ, ರೋಗ ಬಾಧೆ, ಪರರಿಗೆ ಸಹಾಯ ಮಾಡುವಿರಿ, ಮಾನಸಿಕ ನೆಮ್ಮದಿ.
ಕನ್ಯಾ: ಸಾಮಾಜಿಕ-ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಹೆಸರು, ಮಾನಸಿಕ ನೆಮ್ಮದಿ ಪ್ರಾಪ್ತಿ, ನೌಕರಿಯಲ್ಲಿ ಸಹಕಾರ, ಸಹೋದ್ಯೋಗಿಗಳಿಂದ ಬೆಂಬಲ. ವ್ಯವಹಾರಗಳಲ್ಲಿ ಮುನ್ನಡೆ.
ತುಲಾ: ಮಹಿಳೆಯರಿಗೆ ಉತ್ತಮ, ನಾನಾ ರೀತಿಯ ಸಂಪಾದನೆ, ಹಿತೈಷಿಗಳಿಂದ ಸಲಹೆ, ಕೆಲಸ ಕಾರ್ಯಗಳಲ್ಲಿ ಶ್ರದ್ಧೆ, ಶ್ರಮಕ್ಕೆ ತಕ್ಕ ಫಲ..
ವೃಶ್ಚಿಕ: ನೀವಾಡುವ ಮಾತಿನಿಂದ ಗೌರವ, ಸ್ನೇಹಿತರಿಂದ ಸಕಾರಾತ್ಮಕ ಸಲಹೆ, ನಿರ್ಧಾರಗಳಿಗೆ ಮನ್ನಣೆ, ಸುಖ ಭೋಜನ ಪ್ರಾಪ್ತಿ.
ಧನಸ್ಸು: ಮಾತಿನ ಮೇಲೆ ಹಿಡಿತ ಅಗತ್ಯ, ಅನ್ಯರಿಗೆ ಉಪಕಾರ ಮಾಡುವಿರಿ, ಅಧಿಕ ತಿರುಗಾಟ, ಋಣ ವಿಮೋಚನೆ.
ಮಕರ: ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ, ಸ್ತ್ರೀಯರಿಗೆ ಲಾಭ, ಮಾನಸಿಕ ನೆಮ್ಮದಿ, ಸ್ವಯಂಕೃತ ಅಪರಾಧ, ಹಣಕಾಸು ಮುಗ್ಗಟ್ಟು.
ಕುಂಭ: ಗೆಳೆಯರಿಂದ ಸಹಾಯ, ಅತಿಯಾದ ಕೋಪ, ಚೋರ ಭಯ, ತಾಳ್ಮೆ ಅತ್ಯಗತ್ಯ, ಹಣಕಾಸು ಮುಗ್ಗಟ್ಟು, ಅಲ್ಪ ಲಾಭ.
ಮೀನ: ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ಮಾನಸಿಕ ಕಿರಿಕಿರಿ, ಚಂಚಲ ಸ್ವಭಾವ, ಹೇಳಿಕೆ ಮಾತನ್ನು ಕೇಳಬೇಡಿ.