ದಿನ ಭವಿಷ್ಯ 1-10-2019

Public TV
1 Min Read
DINA BHAVISHYA 5 5 1 1

ಪಂಚಾಂಗ

ಶ್ರೀವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ತೃತೀಯಾ ತಿಥಿ,
ಮಂಗಳವಾರ, ಸ್ವಾತಿ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:13 ರಿಂದ 4:13
ಗುಳಿಕಕಾಲ: ಮಧ್ಯಾಹ್ನ 12:13 ರಿಂದ 1:43
ಯಮಗಂಡಕಾಲ: ಬೆಳಗ್ಗೆ 9:13 ರಿಂದ 10:43

ಮೇಷ: ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ, ಆರೋಗ್ಯದಲ್ಲಿ ಏರುಪೇರು, ಬಂಧು ಮಿತ್ರರಿಂದ ಸಹಕಾರ, ಯೋಚಿಸಿ ನಿರ್ಧಾರ ಕೈಗೊಳ್ಳಿ, ಈ ದಿನ ತಾಳ್ಮೆ ಅತ್ಯಗತ್ಯ.

ವೃಷಭ: ವ್ಯವಹಾರದಲ್ಲಿ ಎಚ್ಚರ, ಯತ್ನ ಕಾರ್ಯದಲ್ಲಿ ಜಯ, ಕೃಷಿಯಲ್ಲಿ ಉತ್ತಮ ಫಲ, ವಾಹನ-ವಸ್ತ್ರ ಖರೀದಿ ಯೋಗ.

ಮಿಥುನ: ವಾಹನ ಖರೀದಿಸುವ ಆಲೋಚನೆ, ಭೂ ಲಾಭ, ಆಕಸ್ಮಿಕ ಧನ ಲಾಭ, ಇಲ್ಲ ಸಲ್ಲದ ಅಪವಾದ, ಅಕಾಲ ಭೋಜನ, ಈ ದಿನ ಮಿಶ್ರಫಲ.

ಕಟಕ: ಆದಾಯಕ್ಕಿಂತ ಖರ್ಚು ಹೆಚ್ಚು, ಹಿತ ಶತ್ರುಗಳಿಂದ ತೊಂದರೆ, ಕುಟುಂಬದಲ್ಲಿ ಪ್ರೀತಿ, ಮಾನಸಿಕ ನೆಮ್ಮದಿ ಪ್ರಾಪ್ತಿ.

ಸಿಂಹ: ಅಧಿಕವಾದ ತಿರುಗಾಟ, ಮಾನಸಿಕ ಚಿಂತೆ, ವಿವಾಹ ಯೋಗ, ವಿದ್ಯಾಭ್ಯಾಸದಲ್ಲಿ ಮುನ್ನಡೆ.

ಕನ್ಯಾ: ಪರರಿಗೆ ಸಹಾಯ ಮಾಡುವಿರಿ, ಉತ್ತಮ ಬುದ್ಧಿಶಕ್ತಿ, ಅನ್ಯ ಜನರಲ್ಲಿ ವೈಮನಸ್ಸು, ನಂಬಿದ ಜನರಿಂದ ಮೋಸ.

ತುಲಾ: ಯತ್ನ ಕಾರ್ಯದಲ್ಲಿ ಜಯ, ದ್ರವ್ಯ ಲಾಭ, ನಾನಾ ರೀತಿಯ ಸಂಪಾದನೆ, ಕುಟುಂಬ ಸೌಖ್ಯ, ಹಿತ ಶತ್ರುಗಳಿಂದ ದೂರವಿರಿ.

ವೃಶ್ಚಿಕ: ಮಾನಸಿಕ ಒತ್ತಡ, ಆರೋಗ್ಯದಲ್ಲಿ ವ್ಯತ್ಯಾಸ, ಕೆಲಸದಲ್ಲಿ ವಿಳಂಬ, ಉದರ ಬಾಧೆ, ದಾಂಪತ್ಯದಲ್ಲಿ ಪ್ರೀತಿ.

ಧನಸ್ಸು: ಆತ್ಮೀಯರಲ್ಲಿ ಪ್ರೀತಿ ಅನ್ಯೋನ್ಯತೆ, ಯತ್ನ ಕಾರ್ಯದಲ್ಲಿ ವಿಳಂಬ, ದುಡುಕು ಸ್ವಭಾವ, ವಾದ-ವಿವಾದಗಳಿಂದ ಅಶಾಂತಿ.

ಮಕರ: ಖರ್ಚಿನ ಬಗ್ಗೆ ನಿಗಾವಿರಲಿ, ರಾಜಕಾರಣಿಗಳಿಗೆ ಗೊಂದಲ, ವಾಹನ ಚಾಲನೆಯಲ್ಲಿ ಎಚ್ಚರ, ಆರ್ಥಿಕ ಸಂಕಷ್ಟ, ಈ ದಿನ ಅಶುಭ ಫಲ.

ಕುಂಭ: ಸಹೋದರನಿಂದ ಸಹಾಯ, ವ್ಯಾಪಾರ-ವ್ಯವಹಾರದಲ್ಲಿ ಮೋಸ, ತಾಳ್ಮೆ ಅತ್ಯಗತ್ಯ, ಇಲ್ಲ ಸಲ್ಲದ ತಕರಾರು.

ಮೀನ: ಸಮಾಜದಲ್ಲಿ ಉತ್ತಮ ಗೌರವ, ಇಷ್ಟಾರ್ಥ ಸಿದ್ಧಿ, ಮಹಿಳೆಯರಿಗೆ ಶುಭ ಫಲ, ನೀಚ ಜನರಿಂದ ದೂರವಿರಿ.

Share This Article
Leave a Comment

Leave a Reply

Your email address will not be published. Required fields are marked *