ದಿನ ಭವಿಷ್ಯ: 09-11-2021

Public TV
1 Min Read
DINA BHAVISHYA

ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು,
ಕಾರ್ತಿಕ ಮಾಸ, ಶುಕ್ಲ ಪಕ್ಷ,
ವಾರ: ಮಂಗಳವಾರ,
ತಿಥಿ: ಪಂಚಮಿ,
ನಕ್ಷತ್ರ: ಪೂರ್ವಾಷಾಡ,
ರಾಹುಕಾಲ: 3.01 ರಿಂದ 4.28
ಗುಳಿಕಕಾಲ: 12.07 ರಿಂದ 1.34
ಯಮಗಂಡಕಾಲ: 9.13 ರಿಂದ 10.40

ಮೇಷ: ನೂತನ ಉದ್ಯೋಗ ಪ್ರಾಪ್ತಿ, ತೀರ್ಥಯಾತ್ರಾ ದರ್ಶನ, ಶ್ರಮಕ್ಕೆ ತಕ್ಕ ಫಲ, ಆರ್ಥಿಕ ಪರಿಸ್ಥಿತಿ ಅಭಿವೃದ್ಧಿ.

ವೃಷಭ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಋಣಭಾದೆ, ಯತ್ನ ಕಾರ್ಯಗಳಲ್ಲಿ ಜಯ, ರೋಗಭಾದೆ, ಹಿತಶತ್ರುಗಳಿಂದ ತೊಂದರೆ.

ಮಿಥುನ: ವೈಯಕ್ತಿಕ ಕೆಲಸಗಳಲ್ಲಿ ಭಾಗಿ, ಹಣಕಾಸಿನ ವಿಷಯಗಳಲ್ಲಿ ಎಚ್ಚರ, ಹಿರಿಯರ ಆಗಮನ, ಆರೋಗ್ಯದಲ್ಲಿ ಏರುಪೇರು.

ಕಟಕ: ಮನಸ್ಸಿನಲ್ಲಿ ನಾನಾ ರೀತಿಯ ಚಿಂತೆ, ಕಳೆದುಹೋದ ವಸ್ತುಗಳು ಕೈಸೇರುವುದು, ಆಪ್ತರಿಂದ ಮಗನ ವಿದ್ಯಾಭ್ಯಾಸಕ್ಕೆ ನೆರವು.

ಸಿಂಹ: ವಾಹನ ಲಾಭ, ಆಲೋಚಿಸಿ ಮುಂದುವರೆಯಿರಿ, ಶರೀರದಲ್ಲಿ ತಳಮಳ.

ಕನ್ಯಾ: ಈ ದಿನ ನಡೆದ ಘಟನೆಗಳನ್ನ ಅವಲೋಕಿಸಿ, ಅಧಿಕ ಖರ್ಚು, ದುಷ್ಟ ಜನರ ಸಹವಾಸದಿಂದ ತೊಂದರೆ.

ತುಲಾ: ಹೊಸ ಕೆಲಸಗಳನ್ನು ಹುಡುಕುವವರಿಗೆ ಅವಕಾಶ, ದೇವರ ಕೃಪೆಯಿಂದ ಶುಭ ಫಲ, ಮನಃಶಾಂತಿ.

ವೃಶ್ಚಿಕ: ಕುಟುಂಬ ಸದಸ್ಯರ ಸಹವಾಸ, ಸುಖ ಭೋಜನ, ವ್ಯಾಪಾರದಲ್ಲಿ ಲಾಭ, ಶತ್ರು ನಾಶ, ರೋಗಭಾದೆ.

ಧನಸ್ಸು: ದೇವತಾ ಕಾರ್ಯಗಳಲ್ಲಿ ಭಾಗಿ, ಸಂಪಾದನೆಯಿಂದ ದಾನ ಮಾಡುವಿರಿ.

ಮಕರ: ಮಕ್ಕಳ ಪ್ರಗತಿಯಿಂದ ಸಂತೋಷ, ಇಷ್ಟದಂತೆ ಕಾರ್ಯಗಳು ನೆರವೇರುತ್ತವೆ, ಸುಖ ಭೋಜನ, ಉದ್ಯೋಗದಲ್ಲಿ ಬಡ್ತಿ.

ಕುಂಭ: ವಿದ್ಯಾರ್ಥಿಗಳಲ್ಲಿ ಗೊಂದಲ, ಮಾತನಾಡುವಾಗ ಎಚ್ಚರ, ಮನೋವ್ಯಥೆ, ವಿವಿಧ ಮೂಲಗಳಿಂದ ಹಣಕಾಸು ಬರಲಿದೆ.

ಮೀನ: ಸ್ತ್ರೀ ಲಾಭ, ಹಣದ ವಿಚಾರಗಳಲ್ಲಿ ಆಸಕ್ತಿ, ಅನ್ಯರಲ್ಲಿ ದ್ವೇಷ, ಅನಾರೋಗ್ಯ, ಸದಾ ತಿರುಗಾಟ, ಹೊಸ ಪ್ರಯತ್ನದಲ್ಲಿ ಜಯ.

Share This Article
Leave a Comment

Leave a Reply

Your email address will not be published. Required fields are marked *