ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಶುಕ್ಲ ಪಕ್ಷ, ತೃತೀಯಾ ತಿಥಿ,
ಶನಿವಾರ, ರೇವತಿ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:34 ರಿಂದ 11:04
ಗುಳಿಕಕಾಲ: ಬೆಳಗ್ಗೆ 6:34 ರಿಂದ 8:04
ಯಮಗಂಡಕಾಲ: ಮಧ್ಯಾಹ್ನ 2:04 ರಿಂದ 3:34
Advertisement
ಮೇಷ: ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಬಂಧುಗಳಿಂದ ಕಿರಿಕಿರಿ, ನೆರೆಹೊರೆಯವರೊಂದಿಗೆ ಮನಃಸ್ತಾಪ, ಸೇವಕರಿಂದ ನಷ್ಟ, ಮಾನಸಿಕ ವ್ಯಥೆಯಿಂದ ನಿದ್ರಾಭಂಗ, ಅಧಿಕವಾದ ಆಯಾಸ, ಗ್ಯಾಸ್ಟ್ರಿಕ್ ಸಮಸ್ಯೆ, ಕಾಲು-ಬೆನ್ನು ನೋವು, ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸಕ್ಕೆ ಅಡೆತಡೆ, ಸಾಲ ಬಾಧೆ, ಶತ್ರು ಕಾಟ.
Advertisement
ವೃಷಭ: ಮಿತ್ರರಿಂದ ನೋವು, ಲಾಭ ಪ್ರಮಾಣ ಕುಂಠಿತ, ದೀರ್ಘಕಾಲದ ಹಣ ಮರುಪಾವತಿ, ಬಾಯಿ ಹುಣ್ಣು, ರೋಗ ಬಾಧೆ, ಬಾಲಾಗ್ರಹ ದೋಷ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಪ್ರಯಾಣದಲ್ಲಿ ವಸ್ತು ಕಳವು ಸಾಧ್ಯತೆ.
Advertisement
ಮಿಥುನ: ಆರೋಗ್ಯದಲ್ಲಿ ಏರುಪೇರು, ಗರ್ಭ ದೋಷ, ಸ್ಥಿರಾಸ್ತಿ-ವಾಹನದಿಂದ ತೊಂದರೆ, ಪಿತ್ರಾರ್ಜಿತ ಆಸ್ತಿಯಲ್ಲಿ ಅನುಕೂಲ, ಉದ್ಯೋಗದಲ್ಲಿ ಪ್ರಗತಿ, ಸ್ವಂತ ಉದ್ಯಮ-ವ್ಯಾಪಾರದಲ್ಲಿ ಎಚ್ಚರ, ತಪ್ಪು ನಿರ್ಧಾರಗಳಿಂದ ಸಂಕಷ್ಟಕ್ಕೆ ಸಿಲುಕುವಿರಿ.
Advertisement
ಕಟಕ: ಬಂಧುಗಳಿಂದ ಸೋಲು, ನಷ್ಟ-ನಿರಾಸೆ ಅಪವಾದ ಹೆಚ್ಚಾಗುವುದು, ದೇಹದಲ್ಲಿ ವಿಪರೀತ ಸೋಮಾರಿತನ, ಹಿರಿಯರು-ಆರೋಗ್ಯಕ್ಕಾಗಿ ಖರ್ಚು, ಅಶುಭ ಸುದ್ದಿ ಕೇಳುವಿರಿ,
ಸ್ವಯಂಕೃತ ಅಪರಾಧಗಳಿಂದ ನಷ್ಟ, ಅತಿಯಾದ ಬುದ್ಧಿವಂತಿಕೆಯಿಂದ ತೊಂದರೆ, ಗುರುವಿನ ಆಶೀರ್ವಾದದಿಂದ ಅನುಕೂಲ.
ಸಿಂಹ: ಸಾಲ ಮರುಪಾವತಿ, ಸೇವಕರಿಂದ ಅನುಕೂಲ, ಆಕಸ್ಮಿಕ ಧನಾಗಮನ, ಸಂಗಾತಿಯಿಂದ ಆರ್ಥಿಕ ಸಹಾಯ, ಪಾಲುದಾರಿಕೆಯಲ್ಲಿ ಅಸಮಾಧಾನ, ಸೋಲು-ನಿರಾಸೆಗಳಿಂದ ಮಾನಸಿಕ ವ್ಯಥೆ.
ಕನ್ಯಾ: ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆ ಮುರಿದು ಬೀಳುವ ಸಾಧ್ಯತೆ, ಸೋದರ ಮಾವನಿಂದ ಸಂಕಟ, ಹಳೇ ವಸ್ತುಗಳು ಕಳವಾಗುವುದು, ಉದ್ಯೋಗ ಸ್ಥಳದಲ್ಲಿ ಎಡವಟ್ಟು, ಗರ್ಭದೋಷ, ಕುತ್ತಿಗೆ ನೋವು, ನರ ದೌರ್ಬಲ್ಯ, ಚರ್ಮ ರೋಗ ಬಾಧೆ.
ತುಲಾ: ತಂದೆಯಿಂದ ತೊಂದರೆ, ಪ್ರಯಾಣದಲ್ಲಿ ಹಿನ್ನಡೆ, ಮಕ್ಕಳಿಗಾಗಿ ಆಕಸ್ಮಿಕ ಖರ್ಚು, ಸ್ಥಿರಾಸ್ತಿ ವಿಚಾರದಲ್ಲಿ ತಪ್ಪು ನಿರ್ಧಾರ, ವಾಹನಗಳಿಂದ ತೊಂದರೆ, ಸ್ವಂತ ಉದ್ಯಮ-ವ್ಯವಹಾರ ಆರಂಭಕ್ಕೆ ಚಿಂತನೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ಮಂದತ್ವ.
ವೃಶ್ಚಿಕ: ಭಾವನೆ-ಆಸೆ ಆಕಾಂಕ್ಷೆಗಳಿಗೆ ಧಕ್ಕೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಭವಿಷ್ಯದ ಚಿಂತೆ ಹೆಚ್ಚಾಗಿ ಬಾಧಿಸುವುದು, ಕಂಪ್ಯೂಟರ್, ಯಂತ್ರೋಪಕರಣಗಳಿಂದ ನಷ್ಟ, ಹಳೇ ಸ್ನೇಹಿತರಿಂದ ಲಾಭ.
ಧನಸ್ಸು: ಸ್ಥಿರಾಸ್ತಿ ವಾಹನದಿಂದ ತೊಂದರೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ದೇವರ ಹರಕೆಗಳಿಂದ ತೊಂದರೆ, ಉದ್ಯೋಗ ನಷ್ಟ ಸಾಧ್ಯತೆ, ಸಂಗಾತಿ ಆರೋಗ್ಯದಲ್ಲಿ ಏರುಪೇರು, ಸಂಗಾತಿ ನಡವಳಿಕೆಯಿಂದ ಬೇಸರ, ಮಕ್ಕಳಿಗೆ ಪೆಟ್ಟಾಗುವ ಸಾಧ್ಯತೆ.
ಮಕರ: ಆತ್ಮೀಯರಿಂದ ಸಾಲ ಕೇಳುವ ಸಂದರ್ಭ, ರೋಗ ಬಾಧೆಗಳಿಂದ ನಿದ್ರಾಭಂಗ, ಕೆಲಸಕ್ಕೆ ಕಾರ್ಮಿಕರ ಕೊರತೆ, ಇಲ್ಲ ಸಲ್ಲದ ಅಪವಾದ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣದಲ್ಲಿ ಆಕಸ್ಮಿಕ ಅವಘಡ, ಸ್ವಂತ ಉದ್ಯಮಕ್ಕೆ ಬಂಡವಾಳ ವಿನಿಯೋಗ, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಕುಂಭ: ಮಕ್ಕಳಿಂದ ಧನಾಗಮನ, ಸ್ಥಿರಾಸ್ತಿ-ವಾಹನ ಯೋಗ, ಆಕಸ್ಮಿಕ ಧನ ಸಂಪತ್ತು, ಕುಟುಂಬದಲ್ಲಿ ಕಿರಿಕಿರಿ, ಮಾತಿನಿಂದ ಗೌರವಕ್ಕೆ ಧಕ್ಕೆ, ಯಂತ್ರೋಪಕರಣ ಖರೀದಿ, ಅಲಂಕಾರಿಕ ವಸ್ತು ಖರೀದಿಗಾಗಿ ಖರ್ಚು, ಹಲ್ಲು ನೋವು, ಕಣ್ಣು ಉರಿ, ಆರೋಗ್ಯದ ಬಗ್ಗೆ ಕಾಳಜಿವಹಿಸಿ.
ಮೀನ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಹೆಣ್ಣು ಮಕ್ಕಳಿಂದ ಅನುಕೂಲ, ವಿದೇಶ ಪ್ರಯಾಣ ಯೋಗ, ಸಂಗಾತಿಯೊಂದಿಗೆ ಮನಃಸ್ತಾಪ, ವಾಹನ ರಿಪೇರಿಗಾಗಿ ಖರ್ಚು, ವಿದ್ಯಾಭ್ಯಾಸದಲ್ಲಿ ಮಂದತ್ವ, ಅಧಿಕವಾದ ಮರೆವು-ನಿರಾಸಕ್ತಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv