ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಶುಕ್ಲ ಪಕ್ಷ, ದ್ವಿತೀಯಾ ತಿಥಿ,
ಶುಕ್ರವಾರ, ಉತ್ತರ ಭಾದ್ರಪದ ನಕ್ಷತ್ರ
ರಾಹುಕಾಲ: ಬೆಳಗ್ಗೆ 11:04 ರಿಂದ 12:34
ಗುಳಿಕಕಾಲ: ಬೆಳಗ್ಗೆ 9:04 ರಿಂದ 9:34
ಯಮಗಂಡಕಾಲ: ಮಧ್ಯಾಹ್ನ 3:34 ರಿಂದ 5:04
Advertisement
ಮೇಷ: ಪ್ರಯಾಣದಲ್ಲಿ ಅನುಕೂಲ, ತಂದೆಯಿಂದ ಸಹಕಾರ, ದೂರ ಪ್ರಯಾಣ, ಸ್ಥಿರಾಸ್ತಿ-ವಾಹನದಿಂದ ನಷ್ಟ, ಉದ್ಯೋಗ ಒತ್ತಡದಿಂದ ನಿದ್ರಾಭಂಗ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಮಂದತ್ವ, ದೇವರಿಗೆ ಅಪಚಾರ ಮಾಡಿದ್ದರಿಂದ ಸಂಕಷ್ಟ.
Advertisement
ವೃಷಭ: ನೆರೆಹೊರೆಯವರಿಂದ ಲಾಭ, ಬಂಧುಗಳಿಂದ ಅನುಕೂಲ, ಕಂಕಣ ಭಾಗ್ಯ ಯೋಗ, ಹಿರಿಯ ಸಹೋದರನಿಂದ ಸಂಕಟ, ಉದ್ಯೋಗದಲ್ಲಿ ಸೋಲು, ನಷ್ಟ-ನಿರಾಸೆಗಳು ಹೆಚ್ಚು, ಶತ್ರುಗಳ ಕಾಟ, ಸ್ವಂತ ಕೆಲಸ ಕಾರ್ಯಗಳಲ್ಲಿ ಪ್ರಗತಿ, ತಂದೆಯೊಂದಿಗೆ ಕಿರಿಕಿರಿ, ಪ್ರಯಾಣ ರದ್ದಾಗುವ ಸಾಧ್ಯತೆ.
Advertisement
ಮಿಥುನ: ಅನಿರೀಕ್ಷಿತ ಪ್ರೇಮದ ಬಲೆಗೆ ಸಿಲುಕುವಿರಿ, ಉದ್ಯೋಗದಲ್ಲಿ ಒತ್ತಡ, ಅಕ್ರಮ ಸಂಪಾದನೆಗೆ ಆಲೋಚನೆ, ಐಷಾರಾಮಿ ಜೀವನದ ಕನಸು, ಅಲಂಕಾರಿಕ ವಸ್ತುಗಳಿಗಾಗಿ ಖರ್ಚು, ಸಿಹಿ ಭೋಜನಕ್ಕಾಗಿ ವೆಚ್ಚ, ಶತ್ರುಗಳಿಂದ ತೊಂದರೆ, ದೈವ ಪೂಜೆಯಲ್ಲಿ ಅಪಚಾರ.
Advertisement
ಕಟಕ: ಸ್ವಂತ ಉದ್ಯಮದಲ್ಲಿ ನಿಧಾನಗತಿ, ವ್ಯಾಪಾರ-ವ್ಯವಹಾರದಲ್ಲಿ ಮಂದತ್ವ, ಸ್ತ್ರೀಯರಿಂದ ಶಾಪ-ಬೈಗುಳ ಪ್ರಾಪ್ತಿ, ಶಕ್ತಿ ದೇವತಾ ಪೂಜೆಯಲ್ಲಿ ಲೋಪ, ಸ್ಥಿರಾಸ್ತಿ ವಿಷಯದಲ್ಲಿ ಗೊಂದಲ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಶತ್ರುಗಳ ನಾಶ.
ಸಿಂಹ: ಅನಿರೀಕ್ಷಿತ ಖರ್ಚು ಹೆಚ್ಚಾಗುವುದು, ಮೋಸ, ಅಪಮಾನವಾಗುವುದು, ಕೋರ್ಟ್ ಕೇಸ್‍ಗಳಲ್ಲಿ ಹಿನ್ನಡೆ, ಆಕಸ್ಮಿಕ ಅವಘಡ, ಅಪಘಾತವಾಗುವ ಸಾಧ್ಯತೆ, ಶತ್ರುಗಳ ಕಾಟ, ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳಿಂದ ನೋವು, ದುಶ್ಚಟಗಳು ಅಧಿಕವಾಗುವುದು, ದೈವಾರಾಧನೆಯಿಂದ ಸಂಕಷ್ಟ ಬಗೆಹರಿಯುವುದು.
ಕನ್ಯಾ: ಮಾನಸಿಕ ಒತ್ತಡ, ಹೆಣ್ಣು ಮಕ್ಕಳಿಂದ ಅನುಕೂಲ, ವಿದೇಶ ಪ್ರಯಾಣಕ್ಕೆ ಯೋಚನೆ, ಶೀತ ಕಫ ಬಾಧೆ, ಕಾಲು ನೋವು-ಸೆಳೆತ, ಉಷ್ಣ ಬಾಧೆ, ಹೊಟ್ಟೆ ಸೋಂಕು, ತಂದೆಯಿಂದ ಅನುಕೂಲ, ಸಂಗಾತಿಯಿಂದ ಲಾಭ, ಪಾಲುದಾರಿಕೆಯಲ್ಲಿ ಯಶಸ್ಸು, ಶುಭ ಸಮಾರಂಭಗಳಲ್ಲಿ ಭಾಗಿ, ದೈವ-ಗುರು ನಿಂದನೆ ಮಾಡುವಿರಿ.
ತುಲಾ: ಸ್ಥಿರಾಸ್ತಿ ಖರೀದಿಸಿ ಗೃಹ ನಿರ್ಮಾಣದ ಕನಸು, ಹೊಸ ವಸ್ತು-ವಾಹನ ಖರೀದಿ ಯೋಗ, ಸೇವಕರು-ಅಧಿಕಾರಿಗಳಿಂದ ಸಹಕಾರ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳ ನಡವಳಿಕೆಯಿಂದ ನೋವು, ಅಲಂಕಾರಿಕ ವಸ್ತುಗಳಿಂದ ತೊಂದರೆ, ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ಗ್ಯಾಸ್ಟ್ರಿಕ್-ಉದರ ಸಂಬಂಧಿತ ಸಮಸ್ಯೆ.
ವೃಶ್ಚಿಕ: ತಂದೆಯಿಂದ ಧನಾಗಮನ, ಮಕ್ಕಳಿಗೆ ಅದೃಷ್ಟದ ಶುಭ ಯೋಗ, ವಿದ್ಯಾಭ್ಯಾಸದಲ್ಲಿ ಪ್ರಗತಿ, ದುಶ್ಚಟಗಳು ಅಧಿಕ, ಐಷಾರಾಮಿ ಜೀವನದ ವ್ಯಾಮೋಹ, ಸ್ಥಿರಾಸ್ತಿ ವಿಚಾರದಲ್ಲಿ ತೊಂದರೆ, ಸಂಗಾತಿಯಿಂದ ಅನುಕೂಲ, ಅನಗತ್ಯ ತಿರುಗಾಟ.
ಧನಸ್ಸು: ಮಾನಸಿಕ ವೇದನೆ, ಆರ್ಥಿಕ ಮುಗ್ಗಟ್ಟು, ಕುಟುಂಬದಲ್ಲಿ ಶತ್ರುತ್ವ, ಡಯಾಬಿಟಿಸ್, ಬಿಪಿ ಹೆಚ್ಚಾಗುವುದು, ಚರ್ಮ ಸಮಸ್ಯೆ, ರೋಗ ಬಾಧೆ, ಪತ್ರ ವ್ಯವಹಾರಗಳಲ್ಲಿ ತೊಂದರೆ, ಹಣಕಾಸು-ಸ್ಥಿರಾಸ್ತಿ ನಷ್ಟ, ಸೇವಕರು-ಕೂಲಿ ಕಾರ್ಮಿಕರ ಕೊರತೆ.
ಮಕರ: ಕಲ್ಪನಾ ಲೋಕದಲ್ಲಿ ವಿಹಾರ, ಕನಸುಗಳಿಂದ ನಿದ್ರಾಭಂಗ, ಪ್ರೇಮ ನಿವೇದನೆ, ಪಾಲುದಾರಿಕೆಯಲ್ಲಿ ಲಾಭ, ನೆರೆಹೊರೆಯವರ ಜೊತೆ ಉತ್ತಮ ಬಾಂಧವ್ಯ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ನಿದ್ರೆಯಲ್ಲಿ ದುಸ್ವಪ್ನಗಳು, ವ್ಯಾಪಾರ-ವ್ಯವಹಾರದಲ್ಲಿ ಒತ್ತಡವಿದ್ರೂ ಲಾಭ.
ಕುಂಭ: ಸಾಲ ಲಭಿಸುವುದು, ಕೆಲಸಗಾರರೊಂದಿಗೆ ಕಿರಿಕಿರಿ, ಸ್ಥಿರಾಸ್ತಿ-ವಾಹನಕ್ಕೆ ಖರ್ಚು, ಹೇಳಿಕೊಳ್ಳಲಾಗದ ಸಂಕಟ, ಸ್ವಂತ ಉದ್ಯಮದಲ್ಲಿ ಅನುಕೂಲ, ವ್ಯಾಪಾರ-ವ್ಯವಹಾರದಲ್ಲಿ ಲಾಭ, ಆರ್ಥಿಕ ಪ್ರಗತಿ, ವಿಶ್ರಾಂತಿ ವೇತನ ಲಭಿಸುವುದು, ರತ್ನಾಭರಣ ಖರೀದಿ.
ಮೀನ: ಮಕ್ಕಳ ನಡವಳಿಕೆಯಿಂದ ಬೇಸರ, ವಿದ್ಯಾಭ್ಯಾಸದಲ್ಲಿ ಮಂದಗತಿ, ಆರೋಗ್ಯದಲ್ಲಿ ಸಮಸ್ಯೆ, ಸ್ತ್ರೀಯರಿಂದ ಆಕಸ್ಮಿಕ ಸಹಾಯ ಪ್ರಾಪ್ತಿ, ಪತ್ರ ವ್ಯವಹಾರಗಳಲ್ಲಿ ಜಯ, ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಉದ್ಯೋಗ ಸ್ಥಳದಲ್ಲಿ ನಿರಾಸಕ್ತಿ, ಅನ್ಯರೊಂದಿಗೆ ಸ್ನೇಹ ಬಯಸುವಿರಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv