ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಕೃಷ್ಣ ಪಕ್ಷ, ಪ್ರಥಮಿ ತಿಥಿ,
ಗುರುವಾರ, ಪೂರ್ವಭಾದ್ರಪದ ನಕ್ಷತ್ರ
ಶುಭ ಘಳಿಗೆ: ಮಧ್ಯಾಹ್ನ 12:00 ರಿಂದ 12:55
ಅಶುಭ ಘಳಿಗೆ: ಬೆಳಗ್ಗೆ 10:12 ರಿಂದ 11:06
Advertisement
ರಾಹುಕಾಲ: ಮಧ್ಯಾಹ್ನ 1:53 ರಿಂದ 3:25
ಗುಳಿಕಕಾಲ: ಬೆಳಗ್ಗೆ 9:17 ರಿಂದ 10:49
ಯಮಗಂಡಕಾಲ: ಬೆಳಗ್ಗೆ 6:12 ರಿಂದ 7:45
Advertisement
ಮೇಷ: ಆಧ್ಯಾತ್ಮಿಕ ವಿಚಾರಗಳಲ್ಲಿ ಬೇಸರ, ಭೂ ವ್ಯವಹಾರಗಳಲ್ಲಿ ಜಯ, ಸಹೋದರನಿಂದ ಕಿರಿಕಿರಿ, ಸಹೋದ್ಯೋಗಿಗಳಿಂದ ತೊಂದರೆಗೆ ಸಿಲುಕುವಿರಿ.
Advertisement
ವೃಷಭ: ಉದ್ಯೋಗ ಬದಲಾವಣೆ, ಆರ್ಥಿಕ ಸಂಕಷ್ಟಗಳಿಂದ ಮುಕ್ತಿ, ಪಾಲುದಾರಿಕೆ ವ್ಯವಹಾರ ಪ್ರಾರಂಭಕ್ಕೆ ಅನುಕೂಲ.
Advertisement
ಮಿಥುನ: ನೀವಾಡುವ ಮಾತಿನಿಂದ ಅನುಕೂಲ, ಬಂಧುಗಳಿಂದ ಕಿರಿಕಿರಿ, ದಾಯಾದಿಗಳ ಕಲಹ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ಉದ್ಯೋಗ ನಿಮಿತ್ತ ಪ್ರಯಾಣ.
ಕಟಕ: ಸ್ವಂತ ಆಲೋಚನೆ, ಪ್ರಯತ್ನಗಳನ್ನು ಮುಂದೂಡಿ, ಮಕ್ಕಳ ಬಗ್ಗೆ ಎಚ್ಚರಿಕೆ, ಆರೋಗ್ಯದ ಬಗ್ಗೆ ಕಾಳಜಿವಹಿಸಿ.
ಸಿಂಹ: ಮಾಡಿದ ಕೆಲಸಗಳಲ್ಲಿ ಜಯ, ಮನೆಯ ವಾತಾವರಣದಲ್ಲಿ ಅಶಾಂತಿ, ಆಲಸ್ಯ ಮನೋಭಾವ, ದಾಂಪತ್ಯದಲ್ಲಿ ಕಲಹ.
ಕನ್ಯಾ: ಕೆಲಸಗಾರರಿಂದ ಸಂಪಾದನೆ, ಸೇವಾ ವೃತ್ತಿಯ ಉದ್ಯೋಗ ಪ್ರಾಪ್ತಿ, ಕುಟುಂಬದಲ್ಲಿ ಶತ್ರುತ್ವ, ವಿಪರೀತ ಜಗಳ.
ತುಲಾ: ಕುಟುಂಬದ ಆಸೆಗಳು ನೆರವೇರುವುದು, ಸಾಲಗಾರರಿಂದ ಮುಕ್ತಿ ಸಾಧ್ಯತೆ, ಬಂಧುಗಳೊಂದಿಗೆ ಉತ್ತಮ ಬಾಂಧವ್ಯ.
ವೃಶ್ಚಿಕ: ಸಂಧಿವಾತ, ಹಲ್ಲು ನೋವು, ಶರೀರದಲ್ಲಿ ತಳಮಳ, ಕೀಳರಿಮೆ ಸ್ವಭಾವ, ಆಕಸ್ಮಿಕ ಸಂಕಷ್ಟಗಳು, ಮಾನಸಿಕ ಖಿನ್ನತೆ.
ಧನಸ್ಸು: ಅನಿರೀಕ್ಷಿತ ಪ್ರಯಾಣ, ಅಧಿಕ ನಿದ್ರೆ, ಬಂಧುಗಳು ದೂರವಾಗುವರು, ಸ್ವಯಂಕೃತ್ಯಗಳಿಂದ ನಷ್ಟ.
ಮಕರ: ಉದ್ಯಮದಲ್ಲಿ ಲಾಭ, ರೋಗ ಬಾಧೆ, ಪಾಲುದಾರಿಕೆ ವ್ಯವಹಾರಕ್ಕೆ ಸಹಕಾರ, ಆತ್ಮೀಯರಿಂದ ಸಹಾಯ ಕೇಳುವಿರಿ.
ಕುಂಭ: ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಗಂಡು ಮಕ್ಕಳಿಂದ ಲಾಭ, ಆಕಸ್ಮಿಕ ಧನಾಗಮನ, ಉದ್ಯೋಗ ಸ್ಥಳದಲ್ಲಿ ನಿರಾಸೆ.
ಮೀನ: ಕೀರ್ತಿ-ಪ್ರತಿಷ್ಠೆಗೆ ತೊಂದರೆ, ಪ್ರಯಾಣಕ್ಕೆ ಅಡೆತಡೆ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಮಾನಸಿಕ ನೆಮ್ಮದಿ.