ಪಂಚಾಂಗ
ರಾಹುಕಾಲ: 7:40 ರಿಂದ 9:16
ಗುಳಿಕಕಾಲ: 2:04 ರಿಂದ 3:40
ಯಮಗಂಡಕಾಲ: 10:52 ರಿಂದ 12:28
ವಾರ: ಸೋಮವಾರ, ತಿಥಿ: ದ್ವಾದಶಿ
ನಕ್ಷತ್ರ: ಅನುರಾಧ
ಶ್ರೀ ವಿಶ್ವಾವಸು ನಾಮ ಸಂವತ್ಸರ
ಉತ್ತರಾಯಣ, ಗ್ರೀಷ್ಮ ಋತು
ಆಷಾಡ ಮಾಸ, ಶುಕ್ಲ ಪಕ್ಷ
ಮೇಷ: ರಾಜ ವಿರೋಧ, ಯತ್ನ ಕಾರ್ಯಭಂಗ, ಕುಟುಂಬದಲ್ಲಿ ಅಸೌಖ್ಯ, ಹಣದ ಆಡಚಣೆ, ವಾಹನ ಅಪಘಾತ, ಅಗ್ನಿಯಿಂದ ಭೀತಿ.
ವೃಷಭ: ಸ್ತ್ರೀ ಸಂಬಂಧ ವ್ಯವಹಾರಗಳಿಂದ ಚಿಂತೆ, ಶತ್ರು ಭಾದೆ, ವ್ಯರ್ಥ, ಧನ ಹಾನಿ.
ಮಿಥುನ: ಪ್ರಿಯ ಜನರ ಭೇಟಿ, ಭ್ರಾತ್ರುಗಳಿಂದ ತೊಂದರೆ ಎಚ್ಚರ, ಸ್ಥಳ ಬದಲಾವಣೆ, ಮಂಗಳ ಕಾರ್ಯಗಳಲ್ಲಿ ಭಾಗಿ, ಸ್ಥಿರಾಸ್ತಿ ಮಾರಾಟ.
ಕಟಕ: ಆದಾಯಕ್ಕಿಂತ ಖರ್ಚು ಜಾಸ್ತಿ, ಅನಾರೋಗ್ಯ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಕಾರ್ಯ ವಿಘಾತ, ಸಂತಾನ ಪ್ರಾಪ್ತಿ.
ಸಿಂಹ: ಹೊಸ ವ್ಯವಹಾರಗಳಿಂದ ನಷ್ಟ, ಅಕಾಲ ಭೋಜನ, ಅನ್ಯ ಜನರಲ್ಲಿ ದ್ವೇಷ, ದುಃಖದಾಯಕ ಪ್ರಸಂಗಗಳು.
ಕನ್ಯಾ: ವ್ಯಾಸಂಗಕ್ಕೆ ತೊಂದರೆ, ದಾಯಾದಿ ಕಲಹ, ದುಷ್ಟಬುದ್ಧಿ, ಯತ್ನ ಕಾರ್ಯಗಳಲ್ಲಿ ಜಯ, ಸಲ್ಲದ ಅಪವಾದ ಎಚ್ಚರದಿಂದಿರಿ.
ತುಲಾ: ನಾನಾ ರೀತಿಯ ಸಂಪಾದನೆ, ಉದ್ಯೋಗದಲ್ಲಿ ಬಡ್ತಿ, ಸ್ನೇಹಿತರಿಂದ ಸಹಾಯ, ವಿವಾಹ ಯೋಗ, ಅಧಿಕ ತಿರುಗಾಟ, ಋಣ ವಿಮೋಚನೆ.
ವೃಶ್ಚಿಕ: ಸ್ಥಾನ ಬದಲಾವಣೆ, ಅತಿಯಾದ ಕೋಪ, ಋಣಭಾದೆ, ನಿಷ್ಠೂರ, ಕುಟುಂಬದಲ್ಲಿ ಅಹಿತಕರ ವಾತಾವರಣ.
ಧನಸ್ಸು: ಕೈ ಹಾಕಿದ ಕೆಲಸಗಳಲ್ಲಿ ಜಯ, ವ್ಯಾಪಾರ ವ್ಯವಹಾರದಲ್ಲಿ ಏರುಪೇರು, ಉದ್ಯೋಗದಲ್ಲಿ ಸ್ವಲ್ಪ ತೊಂದರೆ.
ಮಕರ: ವಿರೋಧಿಗಳಿಂದ ತೊಂದರೆ, ಅನಾರೋಗ್ಯ, ವಿವಾಹಕ್ಕೆ ಅಡಚಣೆ, ಮನಸ್ತಾಪ, ಪರಸ್ಥಳ ವಾಸ, ಷೇರು ವ್ಯವಹಾರಗಳಲ್ಲಿ ಲಾಭ.
ಕುಂಭ: ಕಾರ್ಯ ವಿಘಾತ, ಸ್ಥಳ ಬದಲಾವಣೆ, ಪಾಪ ಕಾರ್ಯಾಸಕ್ತಿ, ದಾಯಾದಿ ಕಲಹ, ವಿಪರೀತ ಖರ್ಚು, ತಾಯಿ ಕಡೆ ಬಂಧುಗಳಿಂದ ಕಿರಿಕಿರಿ.
ಮೀನ: ಬಹು ಸೌಖ್ಯ, ಐಶ್ವರ್ಯ ವೃದ್ಧಿ, ಸ್ವಗೃಹ ವಾಸ, ಸೇವಕರಿಂದ ಸಹಾಯ, ಕೀರ್ತಿ ಲಾಭ, ಶತ್ರುಗಳನ್ನು ಸದೆ ಬಡಿಯುವಿರಿ.