ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರೇ,
ಉತ್ತರಾಯಣೇ. ಶಿಶಿರಋತು,
ಫಾಲ್ಗುಣ ಮಾಸ, ಶುಕ್ಲ ಪಕ್ಷ
ದ್ವಾದಶಿ ಬೆಳಗ್ಗೆ 9.30ರ ನಂತರ
ಉಪರಿ ತ್ರಯೋದಶಿ
ಶನಿವಾರ ಪುಷ್ಯ ನಕ್ಷತ್ರ
ಬೆಳಗ್ಗೆ 9.05 ನಂತರ ಆಶ್ಲೇಷ ನಕ್ಷತ್ರ
ರಾಹುಕಾಲ: 9.34 ರಿಂದ 11.04
ಗುಳಿಕಕಾಲ: 6.35 ರಿಂದ 8.04
ಯಮಗಂಡಕಾಲ: 2.04 ರಿಂದ 3.34
Advertisement
ಮೇಷ: ಬಂಧು-ನೆರೆಹೊರೆಯವರಿಂದ ಅನುಕೂಲ, ಅನಾರೋಗ್ಯ ಸಮಸ್ಯೆ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಾಟ-ಮಂತ್ರದ ಭೀತಿ, ಸ್ಥಿರಾಸ್ಥಿಗಾಗಿ ಸಾಲ, ವಾಹನ ನಷ್ಟ, ತಾಯಿಯೊಂದಿಗೆ ಶತ್ರುತ್ವ, ಬುದ್ಧಿ ಚಂಚಲ.
Advertisement
ವೃಷಭ: ಮಕ್ಕಳಿಂದ ಧನಾಗಮನ, ಭಾವನೆಗಳಿಗೆ ಪೆಟ್ಟು, ಪೂರ್ವದಲ್ಲಿ ಮಾಡಿದ ತಪ್ಪು ಕಾಡುವುದು, ಕುಟುಂದೊಂದಿಗೆ ವಾಗ್ವಾದ, ಪ್ರಯಾಣದಲ್ಲಿ ಕಿರಿಕಿರಿ.
Advertisement
ಮಿಥುನ: ಸ್ವಂತ ವ್ಯವಹಾರದಲ್ಲಿ ಆರ್ಥಿಕ ಬೆಳವಣಿಗೆ, ಆಲಸ್ಯದಿಂದ ನೆಮ್ಮದಿ ಭಂಗ, ಉಷ್ಣ, ಸುಸ್ತು, ಸ್ಥಿರಾಸ್ತಿ ಕಳೆದು ಕೊಳ್ಳುವ ಭೀತಿ, ಸ್ವಯಂ ಅಪರಾಧಗಳಿಂದ ಅವಕಾಶ ವಂಚಿತರಾಗುವಿರಿ.
Advertisement
ಕಟಕ: ಕುಟುಂಬಕ್ಕಾಗಿ ಖರ್ಚು, ನಷ್ಟ ನಿರಾಸೆಗಳು, ಹಿತಶತ್ರು ದಮನ, ಗುಪ್ತ ವಿಷಯಗಳಿಂದ ಬೇಸರ, ಬಂಧುಗಳು ದೂರ, ಮಾತಿಂದ ಸಮಸ್ಯೆ, ದುಃಸ್ವಪ್ನಗಳು, ಅನಾರೋಗ್ಯ ಸಮಸ್ಯೆಗಳು.
ಸಿಂಹ: ಪ್ರೇಮ ಭಾವನೆಗಳಿಗೆ ಆಘಾತ, ದುಶ್ಚಟಗಳಿಂದ ತೊಂದರೆ, ಗುಪ್ತ ಧನಾಗಮನ, ದೂರದ ವ್ಯಕ್ತಿಗಳಿಂದ ಅನುಕೂಲ, ಮಕ್ಕಳಿಂದ ಕಿರಿಕಿರಿ, ತಾಂತ್ರಿಕ ಕ್ಷೇತ್ರದವರಿಗೆ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಕನ್ಯಾ: ಸ್ವಯಂ ಅಪರಾಧಗಳಿಂದ ತೊಂದರೆ, ಮಿತ್ರ, ಹಿರಿಯ ಸೋದರಿಯಿಂದ ಲಾಭ, ಉದ್ಯೋಗದಲ್ಲಿ ಪ್ರಶಂಸೆ, ದೂರ ಪ್ರದೇಶದಲ್ಲಿ, ಅನುಕೂಲ, ಮಾಟ-ಮಂತ್ರ ಭೀತಿ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಕಫ, ಸುಸ್ತು, ಹೊಟ್ಟೆನೋವು.
ತುಲಾ: ತಂದೆಯ ನಡುವಳಿಕೆಯಿಂದ ಬೇಸರ, ಪಿತ್ರಾರ್ಜಿತ ಆಸ್ತಿ ಸಮಸ್ಯೆ ಬಗೆಹರಿಯುವುದು, ಅಧಿಕ ಖರ್ಚು, ದ್ವೇಷ ನಿಂದನೆಗಳು, ಒಂಟಿತನ ಇಷ್ಟಪಡುವಿರಿ, ದು:ಸ್ವಪ್ನಗಳು ಉದ್ಯೋಗ ಕಳೆದುಕೊಳ್ಳುವ ಭೀತಿ.
ವೃಶ್ಚಿಕ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಕೋರ್ಟ ಅಲೆದಾಟ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಅನಿರೀಕ್ಷಿತ ಅವಕಾಶಗಳು, ಮಿತ್ರರಿಂದ ಉದ್ಯೋಗ ಭರವಸೆ, ನರಗಳಿಗೆ ಪೆಟ್ಟು, ಉಸಿರಾಟ ತೊಂದರೆ.
ಧನಸ್ಸು: ಸಂಗಾತಿಯಿಂದ ಬೇಸರ, ಪಾಲುದಾರಿಕೆಯಲ್ಲಿ ಸಮಸ್ಯೆ ಮತ್ತು ನಷ್ಟ, ಉದ್ಯೋಗ ಕಳೆದುಕೊಳ್ಳುವಿರಿ, ಅನಿರೀಕ್ಷಿತ ಸೋಲು, ಸ್ತ್ರೀಯರಿಂದ ಭಾದೆ.
ಮಕರ: ಶತ್ರುಗಳಿಂದ ತೊಂದರೆ, ಪ್ರಯಾಣದಲ್ಲಿ ಹಿನ್ನಡೆ, ಸಂಗಾತಿಗಳೇ ಶತ್ರುಗಳಾಗುವರು, ನರದೌರ್ಬಲ್ಯ, ಗರ್ಭದೋಷ, ಕೋರ್ಟ ಅಲೆದಾಟ, ಕೇಳಿದ ಸಾಲ ಸಿಗುವುದಿಲ್ಲ, ಕೊಟ್ಟ ಸಾಲ ಹಿಂದಿರುಗಲ್ಲ.
ಕುಂಭ: ಮಕ್ಕಳಿಂದ ಅನುಕೂಲ, ಮಕ್ಕಳ ವಿದ್ಯಾಭ್ಯಾಸ ಹಿನ್ನಡೆ, ಆಕಸ್ಮಿಕ ಲಾಭ, ದಾಂಪತ್ಯ ಕಿರಿಕಿರಿ, ವಿಕೃತ ಭಾವನೆಗಳು, ಧೀರ್ಘಕಾಲದ ಸಮಸ್ಯೆಗಳು ಬಗೆಹರಿಯುವುದು.
ಮೀನ: ಸಂಗಾತಿಯಲ್ಲಿ ಉಡಾಫೆತನ, ಬೇಸರ, ಪಾಲುದಾರಿಕೆಯಲ್ಲಿ ಹಿನ್ನಡೆ, ತಲೆನೋವು, ಬೆನ್ನು ನೋವು, ಅಜೀರ್ಣ, ಸ್ಥಿರಾಸ್ಥಿ ನಷ್ಟ, ಮಕ್ಕಳಿಂದ ಭಾಧೆ, ಮಕ್ಕಳಲ್ಲಿ ವಿದೇಶ ಕನಸು ವಾಹನ ಚಾಲನೆಯಲ್ಲಿ ಜಾಗೃತೆ.