ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ದ್ವಿತೀಯಾ ತಿಥಿ,
ಬೆಳಗ್ಗೆ 7:08 ನಂತರ ತೃತೀಯಾ ತಿಥಿ,
ಗುರುವಾರ, ಶತಭಿಷ ನಕ್ಷತ್ರ
ಮಧ್ಯಾಹ್ನ 12:09 ನಂತರ ಪೂರ್ವಭಾದ್ರಪದ ನಕ್ಷತ್ರ
Advertisement
ರಾಹುಕಾಲ: ಮಧ್ಯಾಹ್ನ 2:05 ರಿಂದ 3:32
ಗುಳಿಕಕಾಲ: ಬೆಳಗ್ಗೆ 9:42 ರಿಂದ 11:10
ಯಮಗಂಡಕಾಲ: ಬೆಳಗ್ಗೆ 6:47 ರಿಂದ 8:15
Advertisement
ಮೇಷ: ಸ್ಥಿರಾಸ್ತಿ-ವಾಹನದಿಂದ ಲಾಭ, ಉದ್ಯೋಗದಲ್ಲಿ ಬಡ್ತಿ, ವೇತನ ಹೆಚ್ಚಳ ಸಾಧ್ಯತೆ, ಸಹೋದರಿಯಿಂದ ಶತ್ರುಗಳಾಧಿಕ, ಸಾಲದ ಸುಳಿಗೆ ಸಿಲುಕುವಿರಿ.
Advertisement
ವೃಷಭ: ಮಕ್ಕಳಿಂದ ನೆರೆಹೊರೆಯವರಿಂದ ಅವಮಾನ, ಉದ್ಯೋಗದಲ್ಲಿ ಒತ್ತಡ, ಮನಸ್ಸಿನಲ್ಲಿ ಆತಂಕ-ಗಾಬರಿ, ಆತ್ಮ ಸಂಕಟಗಳು ಬಾಧಿಸುವುದು.
Advertisement
ಮಿಥುನ: ತಂದೆಯಿಂದ ಅನುಕೂಲ, ಆಕಸ್ಮಿಕ ಧನಾಗಮನ, ಪಿತ್ರಾರ್ಜಿತ ಆಸ್ತಿಯಲ್ಲಿ ಗೊಂದಲ, ಕೋರ್ಟ್ ಕೇಸ್ಗಳಲ್ಲಿ ಜಯ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ.
ಕಟಕ: ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ಸರ್ಕಾರಿ ಅಧಿಕಾರಿಗಳಿಂದ ನೋಟಿಸ್ ಜಾರಿ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಅನಗತ್ಯ ತಿರುಗಾಟ, ಮಕ್ಕಳಿಂದ ಮಾನಹಾನಿ ಸಾಧ್ಯತೆ.
ಸಿಂಹ: ಸ್ನೇಹಿತರಿಂದ ಮೋಸ ಹೋಗುವಿರಿ, ಆಹಾರ-ನೀರು ವ್ಯತ್ಯಾಸದಿಂದ ಅನಾರೋಗ್ಯ, ದಾಂಪತ್ಯದಲ್ಲಿ ಸಂಶಯ, ಆತ್ಮಗೌರವಕ್ಕೆ ಚ್ಯುತಿ.
ಕನ್ಯಾ: ಮಿತ್ರರಿಂದ ಅಧಿಕ ಬಡ್ಡಿಗೆ ಸಾಲ ಕೇಳುವಿರಿ, ಆರೋಗ್ಯ ಸಮಸ್ಯೆ, ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ, ಕೆಲಸ ಕಾರ್ಯಗಳಲ್ಲಿ ಸೇವಕರ ಕೊರತೆ, ಉದ್ಯೋಗದಲ್ಲಿ ಸಮಸ್ಯೆ ಬಗೆಹರಿಯುವುದು.
ತುಲಾ: ಉದ್ಯೋಗದಲ್ಲಿ ಬಡ್ತಿ, ಉದ್ಯೋಗ ನಿಮಿತ್ತ ದೂರ ಪ್ರಯಾಣ, ಭವಿಷ್ಯದ ಚಿಂತನೆಯಿಂದ ನಿದ್ರಾಭಂಗ, ಮಾಟ-ಮಂತ್ರ ತಂತ್ರಗಾರರಿಂದ ಮೋಸ ಹೋಗುವಿರಿ.
ವೃಶ್ಚಿಕ: ಮಾನಸಿಕ ವ್ಯಥೆ, ನೆಮ್ಮದಿ ಇಲ್ಲದ ಜೀವನ, ಮಿತ್ರರು-ಸಹೋದರನಿಂದ ಉದ್ಯೋಗ ಲಾಭ, ಚೀಟಿ ವ್ಯವಹಾರಸ್ಥರಿಗೆ ಲಾಭ, ಹೊಸ ವಸ್ತು ಖರೀದಿಯಲ್ಲಿ ತೊಡಗುವಿರಿ.
ಧನಸ್ಸು: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮಿತ್ರರೊಂದಿಗೆ ಅನಗತ್ಯ ಕಲಹ, ಕೆಲಸ ಕಾರ್ಯಗಳಲ್ಲಿ ವ್ಯರ್ಥ ಪ್ರಯತ್ನ ಮಾಡುವಿರಿ, ದೂರ ಪ್ರಯಾಣದಿಂದ ನಷ್ಟ, ಉದ್ಯೋಗ ಬದಲಾವಣೆಯಿಂದ ತೊಂದರೆ.
ಮಕರ: ಕುಟುಂಬದಲ್ಲಿ ಆತಂಕದ ವಾತಾವರಣ, ಕೆಟ್ಟ ಸುದ್ದಿ ಕೇಳುವಿರಿ, ಅನಗತ್ಯ ಮಾತುಗಳಿಂದ ನೋವು, ಸಂಗಾತಿ-ಸ್ನೇಹಿತರಲ್ಲಿ ವೈಮನಸ್ಸು, ಸ್ಥಿರಾಸ್ತಿ ವಿಚಾರವಾಗಿ ತಗಾದೆ, ಕೋರ್ಟ್ನಲ್ಲಿ ಕೇಸ್ ದಾಖಲಿಸಲು ಚಿಂತನೆ.
ಕುಂಭ: ಆರೋಗ್ಯದಲ್ಲಿ ಸಮಸ್ಯೆ, ಅನುಮಾನಗಳಿಂದ ದಾಂಪತ್ಯದಲ್ಲಿ ಕಲಹ, ಉದ್ಯೋಗದಲ್ಲಿ ಒತ್ತಡ, ಉದ್ಯೋಗ ಬದಲಾಯಿಸುವ ಆಲೋಚನೆ.
ಮೀನ: ಮಕ್ಕಳಿಗಾಗಿ ಅಧಿಕ ಖರ್ಚು, ವಿಪರೀತ ಸಾಲ ಬಾಧೆ, ನಾನಾ ಆಲೋಚನೆಗಳಿಂದ ನಿದ್ರಾಭಂಗ, ಆರೋಗ್ಯದಲ್ಲಿ ವ್ಯತ್ಯಾಸ.