ರಾಹುಕಾಲ : 3:21 ರಿಂದ 4:47
ಗುಳಿಕಕಾಲ : 12:29 ರಿಂದ 1:55
ಯಮಗಂಡಕಾಲ : 9:37 ರಿಂದ 11:03
ಮಂಗಳವಾರ, ಅಷ್ಟಮಿ ತಿಥಿ , ರೇವತಿ ನಕ್ಷತ್ರ
ಶ್ರೀ ಕ್ರೋಧಿ ನಾಮ ಸಂವತ್ಸರ,
ದಕ್ಷಿಣಾಯನ, ಹಿಮಂತ ಋತು
ಪುಷ್ಯ ಮಾಸ, ಶುಕ್ಲ ಪಕ್ಷ,
Advertisement
ಮೇಷ: ಇಷ್ಟ ವಸ್ತುಗಳ ಖರೀದಿ, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ,ಕೈಗಾರಿಕಾ ಉದ್ಯಮಿಗಳಿಗೆ ಲಾಭ.
Advertisement
ವೃಷಭ: ವಿವೇಚನೆ ಕಳೆದುಕೊಳ್ಳಬೇಡಿ, ಅನಾರೋಗ್ಯ, ಸಣ್ಣ ಪುಟ್ಟ ವಿಷಯಗಳಲ್ಲಿ ಭಿನ್ನಾಭಿಪ್ರಾಯ.
Advertisement
ಮಿಥುನ: ವಿಧೇಯತೆ ಯಶಸ್ಸಿನ ಮೆಟ್ಟಿಲು, ಅನಾವಶ್ಯಕ ದುಂದು ವೆಚ್ಚ, ಹೊಸ ವ್ಯವಹಾರದಿಂದ ನಷ್ಟ.
Advertisement
ಕಟಕ: ಶರೀರದಲ್ಲಿ ಆತಂಕ, ಸುಳ್ಳು ಮಾತನಾಡುವಿರಿ,ಅನಗತ್ಯ ತಿರುಗಾಟ, ಕುತಂತ್ರದಿಂದ ಹಣ ಸಂಪಾದನೆ.
ಸಿಂಹ:ಮಾತೃವಿನಿಂದ ಶುಭ ಆರೈಕೆ, ವಾದ ವಿವಾದಗಳಿಂದ ದೂರವಿರಿ, ಕುಟುಂಬದಲ್ಲಿ ಪ್ರೀತಿ, ಸುಖ ಭೋಜನ.
ಕನ್ಯಾ: ಮಾನಸಿಕ ಒತ್ತಡ, ಪಾಲುದಾರಿಕೆಯ ಮಾತುಕತೆ, ವೈಯುಕ್ತಿಕ ವಿಷಯಗಳಲ್ಲಿ ಗೊಂದಲ, ವಿದ್ಯಾರ್ಥಿಗಳಿಗೆ ಆತಂಕ.
ತುಲಾ: ಬೇಜವಾಬ್ದಾರಿತನದಿಂದ ಸಂಕಷ್ಟ, ಮಿತ್ರರಿಂದ ಧನ ನಷ್ಟ, ದಂಪತ್ಯದಲ್ಲಿ ಕಿರಿಕಿರಿ, ನಿದ್ರಾ ಭಂಗ.
ವೃಶ್ಚಿಕ: ಹಿರಿಯರ ಆದೇಶದಂತೆ ನಡೆಯುವಿರಿ, ನೀಚ ಜನರಿಂದ ದೂರವಿರಿ, ಹಣಕಾಸಿನ ತೊಂದರೆ.
ಧನಸ್ಸು: ಕೆಲಸವನ್ನು ಆಸಕ್ತಿಯಿಂದ ಮಾಡಿ, ಯಾರನ್ನು ಹೆಚ್ಚಾಗಿ ನಂಬಬೇಡಿ, ಮೋಸ ವಂಚನೆಗಳ ಕಡೆ ಗಮನವಿರಲಿ.
ಮಕರ: ಭೂ ಸಂಬಂಧ ವ್ಯವಹಾರಗಳಲ್ಲಿ ಲಾಭ, ಖರ್ಚು ವೆಚ್ಚಗಳು ವಿಪರೀತ, ಕೋಪ ಜಾಸ್ತಿ, ಮಾತಿಗೆ ಮರುಳಾಗದಿರಿ.
ಕುಂಭ: ಬಹು ಸೌಖ್ಯ, ತೀರ್ಥಕ್ಷೇತ್ರ ದರ್ಶನ, ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ, ಚೋರ ಭಯ, ಚಂಚಲ ಮನಸ್ಸು.
ಮೀನ: ವೈರಿಗಳಿಂದ ದೂರವಿರಿ, ಇತರರ ಭಾವನೆಗೆ ಸ್ಪಂದಿಸುವಿರಿ, ಸಲ್ಲದ ಅಪವಾದ, ನಿಂದನೆ.