ಪಂಚಾಂಗ
ಶ್ರೀ ವಿಶ್ವಾವಸುನಾಮ ಸಂವತ್ಸರ,
ದಕ್ಷಿಣಾಯಣ, ಶರದೃತು,
ಕಾರ್ತಿಕ ಮಾಸ, ಕೃಷ್ಣ ಪಕ್ಷ,
ಪ್ರಥಮಿ / ದ್ವಿತೀಯ, ಗುರುವಾರ,
ಭರಣಿ ನಕ್ಷತ್ರ / ಉಪರಿ ಕೃತಿಕಾ ನಕ್ಷತ್ರ
ರಾಹುಕಾಲ: 01:34 ರಿಂದ 03:01
ಗುಳಿಕಕಾಲ: 09:13 ರಿಂದ 10:40
ಯಮಗಂಡಕಾಲ: 06:18 ರಿಂದ 07:46
ಮೇಷ: ಕೆಲಸ ಕಾರ್ಯಗಳಲ್ಲಿ ಅನುಕೂಲ, ಸ್ಥಿರಾಸ್ತಿ ಮತ್ತು ವಾಹನ ನೋಂದಣಿ, ಆರ್ಥಿಕ ಸಂಕಷ್ಟಗಳು ಬಗೆಹರಿಯುವುದು.
ವೃಷಭ: ಆಸ್ತಿ ವಿಚಾರದಲ್ಲಿ ಕಿರಿಕಿರಿಗಳು, ಸಾಲದ ಸುಳಿಗೆ ಸಿಲುಕುವ ಸನ್ನಿವೇಶ, ರೋಗ ಬಾಧೆಗಳಿಂದ ನೋವು, ಮಾನಸಿಕ ನೆಮ್ಮದಿ ಭಂಗ.
ಮಿಥುನ: ಅಧಿಕ ಧನವ್ಯಯ, ರಾಜಕೀಯ ವ್ಯಕ್ತಿಯಿಂದ ಆರ್ಥಿಕ ನಷ್ಟ, ಅನಾರೋಗ್ಯ ಸಮಸ್ಯೆಗಳು ಭಾದಿಸುವುದು.
ಕಟಕ: ಅಧಿಕ ಲಾಭ, ಕಷ್ಟದಿಂದಂ ಮುಕ್ತಿ, ಅಹಂಭಾವದ ಮಾತು, ಮಿತ್ರರಿಗೆ ನೋವು.
ಸಿಂಹ: ಉದ್ಯೋಗ ಲಾಭವಾಗುವುದು, ಆರೋಗ್ಯ ವ್ಯತ್ಯಾಸಗಳಿಂದ ಅಧಿಕ ಖರ್ಚು, ಉದ್ಯೋಗ ನಿಮಿತ್ತ ದೂರ ಪ್ರಯಾಣ.
ಕನ್ಯಾ: ಪರಸ್ಥಳದಲ್ಲಿ ಉದ್ಯೋಗ ಲಾಭ, ನಷ್ಟ ಆತಂಕ ಮತ್ತು ನಿದ್ರಾಭಂಗ, ತಂದೆಯ ಮಿತ್ರರಿಂದ ಅನುಕೂಲ.
ತುಲಾ: ಉದ್ಯೋಗದಲ್ಲಿ ತೊಂದರೆ, ಉದ್ಯೋಗ ಬದಲಾವಣೆ ಮಾಡುವ ಸ್ಥಿತಿ, ಆತ್ಮಗೌರವಕ್ಕೆ ಅದೃಷ್ಟ ಒಲಿದು ಬರುವುದು.
ವೃಶ್ಚಿಕ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಮಿತ್ರರೊಂದಿಗೆ ಪ್ರಯಾಣ, ಅಡೆತಡೆಗಳ ನಿವಾರಣೆ, ಮನಸ್ಸಿನಲ್ಲಿ ಮಂದಹಾಸ.
ಧನಸ್ಸು: ರಾಜಕೀಯ ವ್ಯಕ್ತಿಗಳ ಭೇಟಿ, ಸಾಲಗಾರರಿಂದ ಶತ್ರುಗಳಿಂದ ತೊಂದರೆ, ಪುಣ್ಯಕ್ಷೇತ್ರಗಳಿಗೆ ಪ್ರಯಾಣ.
ಮಕರ: ಮಕ್ಕಳಿಂದ ಆಕಸ್ಮಿಕವಾಗಿ ಅವಘಡಗಳು, ಪೊಲೀಸ್ ಸ್ಟೇಷನ್ ಕೋರ್ಟ್‌ಗೆ ಅಲೆದಾಟ, ರಾಜಕೀಯ ವ್ಯಕ್ತಿಗಳ ಭೇಟಿ, ಕಲ್ಪನೆ ಭಾವನೆಗಳಲ್ಲಿ ವಿಹರಿಸುವಿರಿ.
ಕುಂಭ: ವಾಹನ ಮಾರಾಟ ಮಾಡುವ ಆಲೋಚನೆ, ಪ್ರಯಾಣದಲ್ಲಿ ವಸ್ತುಗಳು ಕಳವು, ಶತ್ರುಗಳು ಅಧಿಕ.
ಮೀನ: ವಿದ್ಯಾಭ್ಯಾಸ ನಿಮಿತ್ತ ಪ್ರಯಾಣ, ಆರೋಗ್ಯ ಸಮಸ್ಯೆ, ಕೆಲಸಕಾರ್ಯಗಳಲ್ಲಿ ಸುಲಲಿತವಾದ ಜಯ.

