ಪಂಚಾಂಗ:
ಶ್ರೀವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ಚತುರ್ಥಿ ತಿಥಿ,
ಶನಿವಾರ, ಮಖ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:16 ರಿಂದ 10:52
ಗುಳಿಕಕಾಲ: ಬೆಳಗ್ಗೆ 6:03 ರಿಂದ 7:40
ಯಮಗಂಡಕಾಲ: ಮಧ್ಯಾಹ್ನ 2:04 ರಿಂದ 3:40
Advertisement
ಮೇಷ: ಆರೋಗ್ಯದಲ್ಲಿ ಸಮಸ್ಯೆ, ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ, ಮಕ್ಕಳು ತೊಂದರೆಗೆ ಸಿಲುಕುವರು, ಹಿರಿಯರ ಶಾಪದಿಂದ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣ.
Advertisement
ವೃಷಭ: ಋಣ ರೋಗ ಬಾಧೆಗಳಿಂದ ಮುಕ್ತಿ ಸಾಧ್ಯತೆ, ಅನಗತ್ಯ ಮಾತಿನಿಂದ ಕಲಹ, ಕುಟುಂಬದಲ್ಲಿ ವಾಗ್ವಾದ, ಪಾಲುದಾರಿಕೆ ವ್ಯವಹಾರದಲ್ಲಿ ಮನಃಸ್ತಾಪ, ಆರ್ಥಿಕ ಸಂಕಷ್ಟ.
Advertisement
ಮಿಥುನ: ಕರಾರು-ಒಪ್ಪಂದಗಳಲ್ಲಿ ಎಚ್ಚರ, ಪತ್ರ ವ್ಯವಹಾರಗಳಿಂದ ನಷ್ಟ, ಗೃಹ ಬದಲಾವಣೆಯಿಂದ ತೊಂದರೆ, ಕಂಕಣ ಭಾಗ್ಯ ರದ್ದಾಗುವುದು, ರಕ್ತ ದೋಷ, ಹೃದಯ ಸಂಬಂಧಿತ ಸಮಸ್ಯೆ, ಆರೋಗ್ಯದಲ್ಲಿ ಬಗ್ಗೆ ಕಾಳಜಿವಹಿಸಿ.
Advertisement
ಕಟಕ: ಪ್ರಯಾಣದಲ್ಲಿ ಮಾನಸಿಕ ಕಿರಿಕಿರಿ, ಆರ್ಥಿಕ ಸಂಕಷ್ಟ ನಿವಾರಣೆ ಪರಿಹಾರ ಲಭಿಸುವುದು, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲ, ಈ ದಿನ ಮಿಶ್ರ ಫಲ.
ಸಿಂಹ: ಮಕ್ಕಳಿಂದ ಕಿರಿಕಿರಿ, ದೀರ್ಘಕಾಲದ ಅನಾರೋಗ್ಯ ಬಾಧೆ, ಯತ್ನ ಕಾರ್ಯಗಳಲ್ಲಿ ಅಡೆತಡೆ, ವಿಘ್ನಗಳು ಎದುರಾಗುವುದು.
ಕನ್ಯಾ: ಉದ್ಯೋಗ ಲಾಭ, ಸಾಲಗಾರರಿಂದ ಮುಕ್ತಿ ಹೊಂದುವ ಸಂದರ್ಭ, ಶತ್ರುಗಳ ದಮನ, ಮಾಟ-ಮಂತ್ರದ ದೋಷ ಮುಕ್ತಿಗಾಗಿ ಪರಿಹಾರ ಪ್ರಾಪ್ತಿ.
ತುಲಾ: ದಾಂಪತ್ಯದಲ್ಲಿ ಕಿರಿಕಿರಿ, ಪಾಲುದಾರಿಕೆ ವ್ಯವಹಾರದಲ್ಲಿ ವ್ಯತ್ಯಾಸ, ಆಲೋಚನೆಗಳಿಂದ ನಿದ್ರಾಭಂಗ, ಉದ್ಯೋಗದಲ್ಲಿ ಒತ್ತಡ, ಚಂಚಲ ಮನಸ್ಸು, ವೈರಾಗ್ಯದ ಮನಸ್ಥಿತಿ ಅಧಿಕ.
ವೃಶ್ಚಿಕ: ಅನಗತ್ಯ ವಿಚಾರಗಳಿಂದ ಆಕಸ್ಮಿಕ ಅವಘಢ, ಅಧಿಕವಾದ ಖರ್ಚು, ಸ್ಥಿರಾಸ್ತಿ-ವಾಹನ ಖರೀದಿಯಲ್ಲಿ ಮೋಸ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಆಲಸ್ಯ, ಸೋಮಾರಿತನ ಹೆಚ್ಚಾಗುವುದು.
ಧನಸ್ಸು: ತಂದೆಯಿಂದ ಕುಟುಂಬದಲ್ಲಿ ಕಿರಿಕಿರಿ, ಪ್ರಯಾಣಕ್ಕೆ ಅಡೆತಡೆ, ಗೌರವಕ್ಕೆ ಧಕ್ಕೆಯಾಗುವ ಪರಿಸ್ಥಿತಿ ನಿರ್ಮಾಣ, ಈ ಅಶುಭ ಫಲ.
ಮಕರ: ಉದ್ಯೋಗದಲ್ಲಿ ಕಿರಿಕಿರಿ, ವ್ಯಾಪಾರ-ವ್ಯವಹಾರದಲ್ಲಿ ಅನಾನುಕೂಲ, ನೆರೆಹೊರೆ-ಬಂಧುಗಳಿಂದ ಆರ್ಥಿಕ ಸಹಾಯ, ದಾಯಾದಿಗಳ ಕಲಹ, ಕೋರ್ಟ್ ಕೇಸ್‍ಗಳಲ್ಲಿ ಜಯದ ಮುನ್ಸೂಚನೆ.
ಕುಂಭ: ಪಿತ್ರಾರ್ಜಿತ ಆಸ್ತಿಯಿಂದ ಲಾಭ, ಸಹೋದರನಿಂದ ಅನುಕೂಲ, ಪತ್ರ ವ್ಯವಹಾರಳಲ್ಲಿ ಎಚ್ಚರ, ಗೃಹ-ಉದ್ಯೋಗ ಬದಲಾವಣೆಗೆ ಅಡೆತಡೆ, ಸ್ನೇಹಿತರಿಂದ ಕಿರಿಕಿರಿ, ದಾಂಪತ್ಯದಲ್ಲಿ ವಿರಸ.
ಮೀನ: ಉದ್ಯೋಗ ಸ್ಥಳದಲ್ಲಿ ಅವಘಡ, ಮಾನಸಿಕ ಕಿರಿಕಿರಿ, ವಾಹನ ಚಾಲನೆಯಲ್ಲಿ ಎಚ್ಚರ, ಪೆಟ್ಟಾಗುವ ಸಾಧ್ಯತೆ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಮಾನಸಿಕ ನೆಮ್ಮದಿಗೆ ಭಂಗ, ಆಲೋಚನೆಗಳಿಂದ ನಿದ್ರಾಭಂಗ.