ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಕೃಷ್ಣ ಪಕ್ಷ, ಷಷ್ಠಿ ತಿಥಿ,
ಶುಕ್ರವಾರ, ಜ್ಯೇಷ್ಠ ನಕ್ಷತ್ರ,
ಬೆಳಗ್ಗೆ 11:42 ನಂತರ ಮೂಲಾ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 10:54 ರಿಂದ 12:26
ಗುಳಿಕಕಾಲ: ಬೆಳಗ್ಗೆ 7:50 ರಿಂದ 9:22
ಯಮಗಂಡಕಾಲ: ಮಧ್ಯಾಹ್ನ 3:30 ರಿಂದ 5:02
Advertisement
ಮೇಷ: ಸ್ಥಿರಾಸ್ತಿ ವ್ಯವಹಾರಗಳಲ್ಲಿ ತೊಡಗುವಿರಿ, ಮನಸ್ಸಿನಲ್ಲಿ ಆತಂಕ, ಸಂಕಷ್ಟ-ನೋವು ಬಾಧಿಸುವುದು, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ.
Advertisement
ವೃಷಭ: ಕೆಲಸ ಕಾರ್ಯಗಳಲ್ಲಿ ನಷ್ಟ, ಉದ್ಯೋಗ-ವ್ಯಾಪಾರದಲ್ಲಿ ನಿರಾಸಕ್ತಿ, ಹಣಕಾಸು ವಿಚಾರವಾಗಿ ಅನುಕೂಲ, ಆಕಸ್ಮಿಕ ಬಂಧುಗಳ ಆಗಮನ
Advertisement
ಮಿಥುನ: ಮಾಡಿದ ತಪ್ಪಿನಿಂದ ಸಂಕಷ್ಟಕ್ಕೆ ಸಿಲುಕುವಿರಿ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಆತಂಕದ ವಾತಾವರಣ ನಿರ್ಮಾಣ, ಮಾನಸಿಕ ವ್ಯಥೆ.
ಕಟಕ: ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಉದ್ಯೋಗ-ವ್ಯಾಪಾರದಲ್ಲಿ ಅಡೆತಡೆ, ಆಸಕ್ತಿ ಕಡಿಮೆಯಾಗುವುದು, ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ, ತಂದೆಯಿಂದ ಅನುಕೂಲ.
ಸಿಂಹ: ಶೃಂಗಾರದ ಮಾತುಗಳನ್ನಾಡುವಿರಿ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ನಿದ್ರಾಭಂಗ, ಸ್ನೇಹಿತರಲ್ಲಿ ವೈಮನಸ್ಸು.
ಕನ್ಯಾ: ಶತ್ರುಗಳ ದಮನ, ಸ್ಥಿರಾಸ್ತಿ-ವಾಹನ ಯೋಗ, ಮಿತ್ರರಿಂದ ತಪ್ಪು ದಾರಿ ತುಳಿಯುವಿರಿ, ಅಕ್ರಮ ಸಂಪಾದನೆಗೆ ಮುಂದಾಗುವಿರಿ.
ತುಲಾ: ಉದ್ಯೋಗಕ್ಕಾಗಿ ಪರಸ್ಥಳ ವಾಸ, ಮಕ್ಕಳಿಂದ ನಿರಾಸೆ, ವಿದ್ಯಾಭ್ಯಾಸ ಮೊಟಕು, ವಾಹನ ಚಾಲನೆಯಲ್ಲಿ ಎಚ್ಚರ.
ವೃಶ್ಚಿಕ: ಶುಭ ಕಾರ್ಯಗಳಿಗೆ ಸಕಾಲ, ಅಧಿಕ ಸಿಟ್ಟು ಮಾಡಿಕೊಳ್ಳುವಿರಿ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಶತ್ರುಗಳ ಕಾಟ.
ಧನಸ್ಸು: ಸಂಗಾತಿಯಿಂದ ಸಹಕಾರ, ಮಾನಸಿಕ ನೆಮ್ಮದಿ, ಸ್ವಯಂಕೃತ್ಯಗಳಿಂದ ಸಂಕಷ್ಟಕ್ಕೆ ಸಿಲುಕುವಿರಿ, ಮಿತ್ರರಿಂದ ಅಸಭ್ಯ ವರ್ತನೆ.
ಮಕರ: ಉನ್ನತ ಹುದ್ದೆಗಾಗಿ ಪರಿಶ್ರಮ, ಸ್ಥಳ ಬದಲಾವಣೆ, ಭೂಮಿ ಋಣ ಇಲ್ಲವೆಂಬ ಚಿಂತೆ, ಸಂಗಾತಿಯ ನಡವಳಿಕೆಗಳು ವಿಚಿತ್ರ.
ಕುಂಭ: ಸ್ಥಿರಾಸ್ತಿ-ವಾಹನ ಸಾಲ ಪಡೆಯುವ ಚಿಂತೆ, ಕಾರಣವಿಲ್ಲದೇ ನೆರೆಹೊರೆಯವರೊಂದಿಗೆ ವೈಮನಸ್ಸು, ಶೀತ ಬಾಧೆಯಿಂದ ಅನಾರೋಗ್ಯ.
ಮೀನ: ಹೊಸ ವಸ್ತುಗಳ ಖರೀದಿಗೆ ಮನಸ್ಸು, ಬರಹಗಳಲ್ಲಿ ವ್ಯತ್ಯಾಸ, ಮಕ್ಕಳಲ್ಲಿ ಮೊಂಡುತನ, ಅನಗತ್ಯ ನಿರ್ಧಾರಗಳಿಂದ ಸಂಕಷ್ಟ, ಕುಟುಂಬದಲ್ಲಿ ಆತಂಕ.