Connect with us

Dina Bhavishya

ದಿನಭವಿಷ್ಯ 05-10-2017

Published

on

ಪಂಚಾಂಗ
ಶ್ರೀ ದುರ್ಮುಖಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು ಋತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ಪೌರ್ಣಮಿ ತಿಥಿ,
ಗುರುವಾರ, ಉತ್ತರಭಾದ್ರಪದ ನಕ್ಷತ್ರ

ಶುಭ ಘಳಿಗೆ: ಮಧ್ಯಾಹ್ನ 12:00 ರಿಂದ 12:55
ಅಶುಭ ಘಳಿಗೆ: ಬೆಳಗ್ಗೆ 10:12 ರಿಂದ 11:06

ರಾಹುಕಾಲ: ಮಧ್ಯಾಹ್ನ 1:41 ರಿಂದ 3:11
ಗುಳಿಕಕಾಲ: ಬೆಳಗ್ಗೆ 9:11 ರಿಂದ 10:41
ಯಮಗಂಡಕಾಲ: ಬೆಳಗ್ಗೆ 6:12 ರಿಂದ 7:41
ದಿನ ವಿಶೇಷ: ಚಾಮುಂಡೇಶ್ವರಿ ರಥೋತ್ಸವ

ಮೇಷ: ಸ್ಥಿರಾಸ್ತಿಯಿಂದ ನಷ್ಟ, ವಾಹನ ಅಪಘಾತ, ತಾಯಿಗೆ ಅನಾರೋಗ್ಯ, ಪೆಟ್ಟು ಬೀಳುವ ಸಾಧ್ಯತೆ, ಸಾಲ-ಶತ್ರು ಬಾಧೆ, ಉದ್ಯೋಗದಲ್ಲಿ ಸಮಸ್ಯೆ, ಕೆಲಸಗಾರರಿಂದ ತೊಂದರೆ.

ವೃಷಭ: ದೂರ ಪ್ರಯಾಣ, ಸಹೋದರಿಯರಿಂದ ಸಮಸ್ಯೆ, ನೆರೆಹೊರೆಯವರಿಂದ ಅನುಕೂಲ, ಆಕಸ್ಮಿಕ ಉದ್ಯೋಗ ನಷ್ಟವಾಗುವ ಸಾಧ್ಯತೆ.

ಮಿಥುನ: ವಾಹನದಿಂದ ತೊಂದರೆ, ದೂರ ಸಂಪರ್ಕ ಕ್ಷೇತ್ರದವರಿಗೆ ಅನುಕೂಲ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ತಂದೆಯೊಂದಿಗೆ ವಾಗ್ವಾದ, ಅಧಿಕ ಸುಸ್ತು, ನರ ದೌರ್ಬಲ್ಯ, ಗ್ಯಾಸ್ಟ್ರಿಕ್ ಸಮಸ್ಯೆ.

ಕಟಕ: ಪ್ರಯಾಣದಲ್ಲಿ ನಿರಾಸಕ್ತಿ, ಮಕ್ಕಳಿಂದ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ಸಲ್ಲದ ಅಪವಾದ ನಿಂದನೆ, ನಿದ್ರಾಭಂಗ, ಉದ್ಯೋಗ ಬದಲಾವಣೆ, ಗೃಹ ಬದಲಾವಣೆಯಿಂದ ತೊಂದರೆ.

ಸಿಂಹ: ಸ್ಥಿರಾಸ್ತಿಯಿಂದ ಲಾಭ, ಸಾಲ ತೀರಿಸುವ ಯೋಗ, ಆರೋಗ್ಯ ಸಮಸ್ಯೆ, ಸೇವಕರಿಂದ ತೊಂದರೆ, ಮಾನಸಿಕ ಚಿಂತೆ.

ಕನ್ಯಾ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಉದ್ಯೋಗ ಪ್ರಾಪ್ತಿ, ಉತ್ತಮ ಅವಕಾಶಗಳು ಪ್ರಾಪ್ತಿ, ರೋಗ ಬಾಧೆ, ಕಾಲು ನೋವು, ಆರೋಗ್ಯದಲ್ಲಿ ಏರುಪೇರು.

ತುಲಾ: ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ನೆರೆಹೊರೆ ಬಂಧುಗಳಿಂದ ಆತಂಕ, ದುಶ್ಚಟಗಳಿಂದ ತೊಂದರೆ, ಪತ್ರ ವ್ಯವಹಾರಗಳಿಂದ ನಷ್ಟ, ಅನಗತ್ಯ ಮಾತುಗಳಿಂದ ಅನರ್ಥ.

ವೃಶ್ಚಿಕ: ಆರೋಗ್ಯದಲ್ಲಿ ಸಮಸ್ಯೆ, ನರ ದೌರ್ಬಲ್ಯ, ತೆರಿಗೆ ಇಲಾಖೆಯವರಿಂದ ಸಮಸ್ಯೆ, ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಕಲಹ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ.

ಧನಸ್ಸು: ಅನಗತ್ಯ ವಿಪರೀತ ಖರ್ಚು, ವಿಪರೀತ ತಿರುಗಾಟ, ನೆರೆಹೊರೆಯವರಿಂದ ಕಿರಿಕಿರಿ, ವಿದೇಶದಲ್ಲಿ ಉದ್ಯೋಗ ಪ್ರಾಪ್ತಿ, ಮನೆ ವಾತಾವರಣದಲ್ಲಿ ಅಶಾಂತಿ, ಆಲಸ್ಯ, ಜಿಗುಪ್ಸೆ, ಮಂದತ್ವ, ಉದ್ಯೋಗದಲ್ಲಿ ಅಸಮಾಧಾನ, ಭವಿಷ್ಯದ ಬಗ್ಗೆ ಚಿಂತೆ.

ಮಕರ: ಸ್ವಂತ ಉದ್ಯಮಸ್ಥರಿಗೆ ಸಹಕಾರ, ವ್ಯಾಪಾರದಲ್ಲಿ ವ್ಯವಹಾರಕ್ಕೆ ಸಾಲ, ಕಾರ್ಮಿಕರ ಕೊರತೆ ನಿವಾರಣೆ, ಬಾಡಿಗೆ ಮನೆ ಭರ್ತಿಯಾಗುವುದು, ಸಂಗಾತಿ-ಸ್ನೇಹಿತರೊಂದಿಗೆ ಶತ್ರುತ್ವ.

ಕುಂಭ: ಬರವಣಿಗೆಯಲ್ಲಿ ವ್ಯತ್ಯಾಸ, ಉದ್ಯೋಗದಲ್ಲಿ ಒತ್ತಡ, ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ಮಕ್ಕಳ ನಡವಳಿಕೆಯಿಂದ ಬೇಸರ, ಉದ್ಯಮಸ್ಥರಿಗೆ ಲಾಭ, ಉದ್ಯೋಗದಲ್ಲಿ ಅನುಕೂಲ.

ಮೀನ: ಮಕ್ಕಳಿಂದ ನೋವು, ನಿರಾಸೆ ನಷ್ಟಗಳು ಹೆಚ್ಚು, ಉದ್ಯೋಗದಲ್ಲಿ ಬಡ್ತಿ, ಪದವಿಗಳಿಗೆ ಹಿನ್ನಡೆ, ಆಸೆ ಆಕಾಂಕ್ಷೆ ಭಾವನೆಗಳಿಗೆ ಧಕ್ಕೆ, ನೆಮ್ಮದಿ ಇಲ್ಲದ ಜೀವನ.

Click to comment

Leave a Reply

Your email address will not be published. Required fields are marked *

www.publictv.in