ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ತ್ರಯೋದಶಿ ತಿಥಿ,
ಮಂಗಳವಾರ, ಹಸ್ತ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:29 ರಿಂದ 5:04
ಗುಳಿಕಕಾಲ: ಮಧ್ಯಾಹ್ನ 12:20 ರಿಂದ 1:55
ಯಮಗಂಡಕಾಲ: ಬೆಳಗ್ಗೆ 9:11 ರಿಂದ 10:46
Advertisement
ಮೇಷ: ವಿದ್ಯಾರ್ಥಿಗಳಿಗೆ ಪ್ರತಿಭೆ, ಅಧಿಕ ತಿರುಗಾಟ, ಋಣ ವಿಮೋಚನೆ, ಅನ್ಯರಿಗೆ ಉಪಕಾರ ಮಾಡುವಿರಿ, ಶತ್ರುಗಳ ಭಯ.
Advertisement
ವೃಷಭ: ಸ್ತ್ರೀಯರಿಗೆ ಲಾಭ, ಅವಿವಾಹಿತರಿಗೆ ವಿವಾಹ ಯೋಗ, ವಾಹನ ಯೋಗ, ನಿಮ್ಮ ಪ್ರಯತ್ನದಿಂದ ಕಾರ್ಯ ಸಿದ್ಧಿ, ಯಂತ್ರೋಪಕರಣಗಳಿಂದ ಲಾಭ, ಸುಖ ಭೋಜನ ಪ್ರಾಪ್ತಿ.
Advertisement
ಮಿಥುನ: ನೂತನ ಕೆಲಸ ಕಾರ್ಯಗಳಲ್ಲಿ ಭಾಗಿ, ಮನಸ್ಸಿನಲ್ಲಿ ಭಯ ಭೀತಿ, ವೃತ್ತಿ ಕ್ಷೇತ್ರದಲ್ಲಿ ಯಶಸ್ಸು, ಕೆಲಸ ಕಾರ್ಯಗಲ್ಲಿ ಮುನ್ನಡೆ, ಉತ್ತಮ ಬುದ್ಧಿಶಕ್ತಿ, ಶುಭ ಫಲ ಯೋಗ.
Advertisement
ಕಟಕ: ಆತ್ಮೀಯ ಮಿತ್ರರ ಭೇಟಿ, ವಾಹನ ರಿಪೇರಿಗೆ ಖರ್ಚು, ಕೆಲಸ ಕಾರ್ಯಗಳಲ್ಲಿ ವಿಘ್ನ, ಕೃಷಿಯಲ್ಲಿ ನಷ್ಟ, ದಾನ-ಧರ್ಮದಲ್ಲಿ ಆಸಕ್ತಿ, ಮಾನಸಿಕ ನೆಮ್ಮದಿ ಲಭಿಸುವುದು.
ಸಿಂಹ: ಯತ್ನ ಕಾರ್ಯದಲ್ಲಿ ಜಯ, ಸ್ನೇಹಿತರಿಂದ ಸಹಾಯ ಕೇಳುವಿರಿ, ಕುತಂತ್ರಗಳಿಗೆ ಬಲಿಯಾಗುವಿರಿ, ಶತ್ರುಗಳ ಬಾಧೆ, ಗೌರವಕ್ಕೆ ಧಕ್ಕೆ, ನಿಂದನೆ, ಮಾತಿನ ಮೇಲೆ ಹಿಡಿತವಿರಲಿ.
ಕನ್ಯಾ: ಪ್ರತಿಭೆಗೆ ತಕ್ಕ ಫಲ, ಪರಿಶ್ರಮಕ್ಕೆ ತಕ್ಕ ಆದಾಯ, ವಾಗ್ವಾದಗಳಿಂದ ದೂರವಿರಿ, ಪರರಿಗೆ ಸಹಾಯ ಮಾಡುವಿರಿ, ವೈಯಕ್ತಿಕ ವಿಚಾರಗಳಲ್ಲಿ ಬೇಜವಾಬ್ದಾರಿ, ಅಕಾಲ ಭೋಜನ, ಹೊಗಳಿಗೆ ಮಾತಿಗೆ ಮರುಳಾಗಬೇಡಿ.
ತುಲಾ: ಆಕಸ್ಮಿಕ ಧನ ಲಾಭ, ಶತ್ರುಗಳ ಬಾಧೆ, ದಂಡ ಕಟ್ಟುವ ಸಾಧ್ಯತೆ, ಮಾನಸಿಕ ವ್ಯಥೆ, ನಾನಾ ರೀತಿಯ ಆಲೋಚನೆ, ಪರಸ್ಥಳ ವಾಸ, ದಿನಾಂತ್ಯದಲ್ಲಿ ಕುಟುಂಬದಲ್ಲಿ ನೆಮ್ಮದಿ ವಾತಾವರಣ.
ವೃಶ್ಚಿಕ: ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ, ನಂಬಿದ ಜನರಿಂದ ಮೋಸ ಹೋಗುವ ಸಾಧ್ಯತೆ, ಚಿನ್ನಾಭರಣ, ಹಣ ಲಾಭ, ಸ್ನೇಹಿತರಿಂದಲೇ ವಂಚನೆ.
ಧನಸ್ಸು: ವ್ಯಾಪಾರ ವ್ಯವಹಾರದಲ್ಲಿ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ, ವಿಪರೀತ ವ್ಯಸನ, ವ್ಯರ್ಥ ಧನಹಾನಿ, ನಂಬಿಕಸ್ಥರಿಂದ ದ್ರೋಹ.
ಮಕರ: ಉತ್ತಮ ಪ್ರಗತಿ, ಕ್ರಯ-ವಿಕ್ರಯಗಳಲ್ಲಿ ಲಾಭ, ಸ್ತ್ರೀಯರಿಗೆ ಲಾಭ, ಕಾರ್ಯ ಕ್ಷೇತ್ರದಲ್ಲಿ ಪ್ರಗತಿ, ಋಣ ವಿಮೋಚನೆ.
ಕುಂಭ: ಆದಾಯಕ್ಕಿಂತ ಖರ್ಚು ಹೆಚ್ಚು, ದೂರ ಪ್ರಯಾಣ, ಆರೋಗ್ಯ ಬಗ್ಗೆ ಕಾಳಜಿವಹಿಸಿ, ಸಾಲ ಮಾಡುವ ಪರಿಸ್ಥಿತಿ, ವಿಪರೀತ ದುಶ್ಚಟಗಳು, ಯೋಚಿಸಿ ನಿರ್ಧಾರ ಕೈಗೊಳ್ಳಿ.
ಮೀನ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಉಳಿತಾಯದ ಬಗ್ಗೆ ಗಮನಹರಿಸಿ, ಮಾನಸಿಕ ನೆಮ್ಮದಿ, ತೀರ್ಥಯಾತ್ರೆ ದರ್ಶನಕ್ಕೆ ತಯಾರಿ, ಗಣ್ಯ ವ್ಯಕ್ತಿಗಳ ಭೇಟಿ.