ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಶುಕ್ಲ ಪಕ್ಷ, ಅಷ್ಟಮಿ ತಿಥಿ,
ಸೋಮವಾರ, ಶ್ರವಣ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:45 ರಿಂದ 9:12
ಗುಳಿಕಕಾಲ: ಮಧ್ಯಾಹ್ನ 1:35 ರಿಂದ 3:02
ಯಮಗಂಡಕಾಲ: ಬೆಳಗ್ಗೆ 10:40 ರಿಂದ 12:07
Advertisement
ಮೇಷ: ಭೂ ವ್ಯವಹಾರದಲ್ಲಿ ಲಾಭ, ಮಾತೃವಿನಿಂದ ಧನ ಸಹಾಯ, ಕೃಷಿಯಲ್ಲಿ ಲಾಭ, ಮಂಗಳ ಕಾರ್ಯಗಳಲ್ಲಿ ಭಾಗಿ, ಕುಟುಂಬ ಸೌಖ್ಯ.
Advertisement
ವೃಷಭ: ಯತ್ನ ಕಾರ್ಯಗಳಲ್ಲಿ ವಿಳಂಬ, ದಾಂಪತ್ಯದಲ್ಲಿ ವಿರಸ, ಹಣಕಾಸು ನಷ್ಟ, ದೂರ ಪ್ರಯಾಣ, ಆರೋಗ್ಯದಲ್ಲಿ ಏರುಪೇರು.
Advertisement
ಮಿಥುನ: ಆರ್ಥಿಕ ಪರಿಸ್ಥಿತಿ ಸುಧಾರಣೆ, ಉದ್ಯಮಿಗಳಿಗೆ ಧನ ಲಾಭ, ಪುಣ್ಯಕ್ಷೇತ್ರ ದರ್ಶನ, ಉತ್ತಮ ಫಲ ಲಭಿಸುವುದು.
Advertisement
ಕಟಕ: ಅನಾವಶ್ಯಕ ಖರ್ಚಿಗೆ ನೂರಾರು ದಾರಿ, ವಾಹನ ರಿಪೇರಿ ಸಾಧ್ಯತೆ, ಶತ್ರುಗಳ ಬಾಧೆ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ.
ಸಿಂಹ: ಮನಸ್ಸಿನ ಹತೋಟಿ ಕಳೆದುಕೊಳ್ಳುವಿರಿ, ದುಷ್ಟ ಪರಿಣಾಮ ಬೀರುವುದು, ದಂಡ ಕಟ್ಟುವ ಪರಿಸ್ಥಿತಿ, ಮಹಿಳೆಯರಿಗೆ ತೊಂದರೆ.
ಕನ್ಯಾ: ಕುಟುಂಬದಲ್ಲಿ ಸಂತೋಷ, ಎಲ್ಲರ ಮನಸ್ಸು ಗೆಲ್ಲುವಿರಿ, ಋಣ ಬಾಧೆ, ಅಗತ್ಯಕ್ಕೆ ತಕ್ಕ ಖರ್ಚು.
ತುಲಾ: ದೈವಾನುಗ್ರಹದಿಂದ ಅನುಕೂಲ, ಅಕಾಲ ಭೋಜನ, ಅತಿಯಾದ ಕೋಪ.
ವೃಶ್ಚಿಕ: ಮಾನಸಿಕ ನೆಮ್ಮದಿ, ಅಧಿಕಾರಿಗಳಲ್ಲಿ ಪ್ರಶಂಸೆ, ಆಕಸ್ಮಿಕ ಧನ ಲಾಭ, ವಿವಾದಗಳಿಂದ ದೂರವಿರಿ.
ಧನಸ್ಸು: ವ್ಯರ್ಥ ಧನ ಹಾನಿ, ಯತ್ನ ಕಾರ್ಯದಲ್ಲಿ ವಿಘ್ನ, ಮಾನಸಿಕ ವ್ಯಥೆ, ಪರರಿಗೆ ಉಪಕಾರ ಮಾಡುವಿರಿ.
ಮಕರ: ಹಿರಿಯರ ಸಹಾಯದಿಂದ ಶುಭ, ವ್ಯವಹಾರಗಳಲ್ಲಿ ಲಾಭ, ನಗದು ವ್ಯವಹಾರದಲ್ಲಿ ಎಚ್ಚರ, ನಂಬಿಕಸ್ಥರಿಂದ ಮೋಸ ಹೋಗುವ ಸಾಧ್ಯತೆ.
ಕುಂಭ: ರಫ್ತು ವ್ಯಾಪಾರದಿಂದ ಲಾಭ, ಶತ್ರುಗಳ ನಾಶ, ಸುಖ ಭೋಜನ ಪ್ರಾಪ್ತಿ, ದಾಂಪತ್ಯದಲ್ಲಿ ಪ್ರೀತಿ.
ಮೀನ: ಕೆಲಸದಲ್ಲಿ ಏಕಾಗ್ರತೆ, ಪರಿಶ್ರಮದಿಂದ ಕಾರ್ಯ ಸಾಧನೆ, ತಾಳ್ಮೆ ಅತ್ಯಗತ್ಯ, ಸಾಲ ಮರುಪಾವತಿ ಮಾಡುವಿರಿ.