ಪಂಚಾಂಗ
ಶ್ರೀ ವಿಶ್ವಾವಸು ನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ಭಾದ್ರಪದಮಾಸ, ಶುಕ್ಲ ಪಕ್ಷ,
ದ್ವಾದಶಿ, ಗುರುವಾರ,
ಉತ್ತರಾಷಾಡ ನಕ್ಷತ್ರ
ರಾಹುಕಾಲ: 01:54 ರಿಂದ 03:26
ಗುಳಿಕಕಾಲ: 09:17 ರಿಂದ 10:49
ಯಮಗಂಡಕಾಲ: 06:12 ರಿಂದ 07:45
ಮೇಷ: ಮಕ್ಕಳಿಂದ ಧನಾಗಮನ, ಪಾಲುದಾರಿಕೆ ವ್ಯವಹಾರದಿಂದ ಅನುಕೂಲ, ಉದ್ಯೋಗದಲ್ಲಿ ಬಡ್ತಿ, ಆಸ್ತಿ ಸಮಸ್ಯೆ ಬಗೆಹರಿಯುವುದು.
ವೃಷಭ: ವಾಹನ ಅಪಘಾತಗಳಾಗುವ ಎಚ್ಚರಿಕೆ, ಸ್ಥಿರಾಸ್ತಿ ವಿಷಯದಲ್ಲಿ ವಿವಾದ, ಉದ್ಯೋಗ ಸ್ಥಳದಲ್ಲಿ ಸಾಲ ಮಾಡುವ ಪರಿಸ್ಥಿತಿ.
ಮಿಥುನ: ಆತ್ಮಾಭಿಮಾನದಿಂದ ದಾಂಪತ್ಯದಲ್ಲಿ ಸಮಸ್ಯೆ, ಆರ್ಥಿಕ ಸಹಾಯ ನಿಮಿತ್ತ ಪ್ರಯಾಣ, ಪ್ರೀತಿ ಪ್ರೇಮ ವಿಷಯಗಳಲ್ಲಿ ಸಮಸ್ಯೆ.
ಕಟಕ: ಸರ್ಕಾರದಿಂದ ಅನುಕೂಲ, ಅನಾರೋಗ್ಯ ಸಮಸ್ಯೆ, ಆತ್ಮಾಭಿಮಾನದಿಂದ ಬದುಕುವ ಆಲೋಚನೆ, ಆಸ್ತಿ ವಿಷಯಗಳಲ್ಲಿ ತೊಂದರೆ.
ಸಿಂಹ: ಅಧಿಕ ಖರ್ಚು, ಆರೋಗ್ಯ ಸಮಸ್ಯೆಗಳು, ಸಂಗಾತಿ ನಡವಳಿಕೆಯಲ್ಲಿ ಸಂಶಯ.
ಕನ್ಯಾ: ಆಸ್ತಿಯಿಂದ ನಷ್ಟ, ಮಿತ್ರರಿಂದ ಒತ್ತಡಗಳು ಹೆಚ್ಚು, ಹೆಣ್ಣು ಮಕ್ಕಳಿಂದ ಅನುಕೂಲ, ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ.
ತುಲಾ: ಬಂಧು ಬಾಂಧವರಿಂದ ಬಾಧೆ, ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ಲಾಭ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ, ಸರ್ಕಾರಿ ಉದ್ಯೋಗಸ್ಥರಿಗೆ ಅನುಕೂಲ.
ವೃಶ್ಚಿಕ: ಉದ್ಯೋಗದಲ್ಲಿ ನಷ್ಟ, ವೃತ್ತಿಪರರಿಗೆ ಅನುಕೂಲ, ಕೃಷಿಕರಿಗೆ ಉತ್ತಮ ವಾತಾವರಣ, ಪ್ರಶಂಸೆಗೆ ಪಾತ್ರರಾಗುವಿರಿ.
ಧನಸ್ಸು: ತಂದೆಯೊಡನೆ ಮನಸ್ತಾಪ, ಪ್ರಯಾಣದಲ್ಲಿ ಅಡೆತಡೆ, ಪೂರ್ವಿಕರು ಮಾಡಿದ ಸಾಲದ ಚಿಂತೆ.
ಮಕರ: ಪ್ರೀತಿ ಪ್ರೇಮದಲ್ಲಿ ನಿರಾಸೆ, ಅಪಘಾತಗಳಾಗುವ ಸನ್ನಿವೇಶ, ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆಗಳು, ಮಕ್ಕಳಿಂದ ಸಮಸ್ಯೆ.
ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯಿಂದ ಲಾಭ, ತಂದೆಯಿಂದ ಲಾಭ, ಉತ್ತಮ ಗೌರವ ಪ್ರಶಂಸೆ ಕೀರ್ತಿ.
ಮೀನ: ಅನಾರೋಗ್ಯ ಸಮಸ್ಯೆ, ಮಹಿಳಾ ಶತ್ರು ಕಾಟಗಳು, ನೋವು ಮತ್ತು ನಿದ್ರಾಭಂಗ, ಹೆಣ್ಣುಮಕ್ಕಳಿಂದ ಲಾಭ.