ಪಂಚಾಂಗ
ಶ್ರೀ ವಿಶ್ವಾವಸು ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ಚೈತ್ರ ಮಾಸ, ಶುಕ್ಲ ಪಕ್ಷ,
ಸಪ್ತಮಿ, ಶುಕ್ರವಾರ, ಆರಿದ್ರ ನಕ್ಷತ್ರ
ರಾಹುಕಾಲ: 10:55 ರಿಂದ 12:27
ಗುಳಿಕಕಾಲ: 07:51 ರಿಂದ 09:23
ಯಮಗಂಡಕಾಲ: 03:31 ರಿಂದ 05:03
ಮೇಷ: ಸರ್ಕಾರಿ ವ್ಯಕ್ತಿಗಳಿಂದ ತೊಂದರೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಅಪಘಾತಗಳು ಆರೋಗ್ಯದಲ್ಲಿ ವ್ಯತ್ಯಾಸ, ಆರ್ಥಿಕವಾಗಿ ನಷ್ಟ ಮತ್ತು ಮೋಸ.
ವೃಷಭ: ಅಹಂಭಾವದಿಂದ ಸಮಸ್ಯೆ, ಧನ ನಷ್ಟ, ಸಾಲ ಮಾಡುವ ಸಂದರ್ಭ, ತಂದೆ ಮಕ್ಕಳಲ್ಲಿ ಮನಸ್ತಾಪ, ಸ್ಥಿರಾಸ್ತಿ ಸಮಸ್ಯೆ.
ಮಿಥುನ: ಉದ್ಯೋಗ ಲಾಭ, ದೂರ ಪ್ರಯಾಣ, ಅಧಿಕ ಉತ್ಸಾಹ, ಸಾಲ ಮಾಡುವ ಸನ್ನಿವೇಶ.
ಕಟಕ: ಮಕ್ಕಳಿಂದ ಧನಾಗಮನ, ಉದ್ಯೋಗ ನಷ್ಟ, ಪ್ರೀತಿ ಪ್ರೇಮದಲ್ಲಿ ವಿರೋಧ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.
ಸಿಂಹ: ಅವಕಾಶ ವಂಚಿತರಾಗುವಿರಿ, ಉದ್ಯೋಗದ ಚಿಂತೆ, ದೂರ ಪ್ರದೇಶಕ್ಕೆ ತೆರಳುವ ಆಸೆ, ಪ್ರಯಾಣದಲ್ಲಿ ಸಮಸ್ಯೆ.
ಕನ್ಯಾ: ಮಿತ್ರರೊಂದಿಗೆ ಮನಸ್ತಾಪ, ಉದ್ಯೋಗ ಬದಲಾವಣೆಯಿಂದ ಸಮಸ್ಯೆ, ಅನಿರೀಕ್ಷಿತ ಪ್ರಯಾಣ, ಕೋರ್ಟ್ ಕೇಸ್ ಚಿಂತೆ.
ತುಲಾ: ಆತ್ಮ ಸಂಕಟ, ಆರೋಗ್ಯದಲ್ಲಿ ಏರುಪೇರು, ಅಪವಾದ ಮತ್ತು ಅಪನಿಂದನೆ, ಸಂಗಾತಿಯಿಂದ ನಷ್ಟ.
ವೃಶ್ಚಿಕ: ಪ್ರೀತಿ ಪ್ರೇಮದಲ್ಲಿ ತೊಂದರೆ, ಭಾವನಾತ್ಮಕ ಯೋಚನೆಯಿಂದ ನೋವು, ಮಕ್ಕಳಲ್ಲಿ ಮಂದತ್ವ ಮತ್ತು ಆಲಸ್ಯ, ಭೂಮಿ ಮತ್ತು ವಾಹನದ ಮೇಲೆ ಸಾಲ.
ಧನಸ್ಸು: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ಅನುಕೂಲ, ಬಂಧು ಬಾಂಧವರು ದೂರ, ಒತ್ತಡಗಳಿಂದ ನಿದ್ರಾಭಂಗ.
ಮಕರ: ಪ್ರೀತಿ ಪ್ರೇಮದಲ್ಲಿ ಸಂಶಯ, ಬಾಲಗ್ರಹ ದೋಷ, ಮಕ್ಕಳಲ್ಲಿ ಮೊಂಡತನ ಮತ್ತು ಕಲಹ, ವಿದ್ಯಾಭ್ಯಾಸದಲ್ಲಿ ತೊಂದರೆ.
ಕುಂಭ: ಭೂ ವ್ಯವಹಾರಗಳಿಂದ ತೊಂದರೆ, ಮಾತಿನಿಂದ ಸಮಸ್ಯೆ, ಕುಟುಂಬದಲ್ಲಿ ಅಂತಃ ಕಲಹಗಳು, ಸ್ತ್ರೀಯರಿಂದ ತೊಂದರೆ.
ಮೀನ: ಸ್ವಯಂಕೃತಾಪರಾಧ, ಆರ್ಥಿಕ ಚೇತರಿಕೆ, ಪ್ರಯಾಣದಲ್ಲಿ ಅನುಕೂಲ, ತಂದೆಯಿಂದ ಸಹಕಾರ.