ಪಂಚಾಂಗ
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರಮಾಸ,
ಶುಕ್ಲ ಪಕ್ಷ, ದಶಮಿ ತಿಥಿ,
ಶುಕ್ರವಾರ, ಪುಷ್ಯ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 10:55 ರಿಂದ 12:27
ಗುಳಿಕಕಾಲ: ಬೆಳಗ್ಗೆ 7:51 ರಿಂದ 9:23
ಯಮಗಂಡಕಾಲ: ಮಧ್ಯಾಹ್ನ 3:31 ರಿಂದ 5:03
Advertisement
ಮೇಷ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಬಂಧುಗಳಲ್ಲಿ ಕಲಹ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ವ್ಯಥೆ.
Advertisement
ವೃಷಭ: ನೆರೆಹೊರೆಯವರಿಂದ ಕಿರಿಕಿರಿ, ಸ್ವಯಂಕೃತ್ಯಗಳಿಂದ ಸಂಕಷ್ಟ, ದಾಂಪತ್ಯದಲ್ಲಿ ಕಲಹ, ಮಕ್ಕಳ ಭವಿಷ್ಯದ ಚಿಂತೆ, ದುರ್ನಡತೆಗಳಿಂದ ಹಿಂಸೆ, ತಲೆ ತಗ್ಗಿಸುವ ಸಂದರ್ಭ.
Advertisement
ಮಿಥುನ: ದೀರ್ಘಕಾಲದ ಸಾಲ ಬಾಧೆ, ಆಕಸ್ಮಿಕ ಸಾಲ ಮರುಪಾವತಿ, ಅಧಿಕ ಉಷ್ಣ, ಸುಸ್ತು, ಹೊಟ್ಟೆ-ಕಾಲು ನೋವು, ಆರೋಗ್ಯದಲ್ಲಿ ವ್ಯತ್ಯಾಸ,
ಕಟಕ: ವಿದ್ಯಾರ್ಥಿಗಳಲ್ಲಿ ಮಂದತ್ವ, ಅವಮಾನಕ್ಕೆ ಗುರಿಯಾಗುವಿರಿ, ಪ್ರೇಮ ವಿಚಾರದಲ್ಲಿ ಎಡವಟ್ಟು, ಮಕ್ಕಳಿಂದ ಮನಃಸ್ತಾಪ.
ಸಿಂಹ: ಮಕ್ಕಳ ದುಸ್ಥಿತಿಯಿಂದ ಚಿಂತೆ, ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮ, ಅನಗತ್ಯ ಮಾತುಗಳಿಂದ ದಾಂಪತ್ಯ ಕಲಹ, ಸ್ಥಿರಾಸ್ತಿ ವಿಚಾರದಲ್ಲಿ ತಗಾದೆ, ಶತ್ರುಗಳ ಕಾಟ, ಸ್ವಯಂಕೃತ ಅಪರಾಧದಿಂದ ಸಂಕಷ್ಟ. ಸೇವಾವೃತ್ತಿಯು ಉದ್ಯೋಗ ಪ್ರಾಪ್ತಿ.
ಕನ್ಯಾ: ಮಿತ್ರರಿಂದ ಕಾರ್ಯ ಹಿನ್ನಡೆ, ವಿದ್ಯಾಭ್ಯಾಸದಲ್ಲಿ ಅಡೆತಡೆ, ಧೈರ್ಯದಿಂದ ಕಾರ್ಯ ಪ್ರಗತಿ, ಆರೋಗ್ಯ ಸಮಸ್ಯೆ, ಪ್ರಯಾಣದಲ್ಲಿ ಅಡೆತಡೆ.
ತುಲಾ: ಉದ್ಯೋಗದಲ್ಲಿ ನಿರಾಸಕ್ತಿ, ಹಣಕಾಸು ಸಂಕಷ್ಟ, ಮಾನಸಿಕ ವ್ಯಥೆ, ಮಕ್ಕಳೊಂದಿಗೆ ಕಲಹ, ಹಣಕಾಸು ವಿಚಾರದಲ್ಲಿ ವಾಗ್ವಾದ.
ವೃಶ್ಚಿಕ: ಕಾಲು ನೋವು, ದೇಹಾಲಸ್ಯ, ಗ್ಯಾಸ್ಟ್ರಿಕ್ ಸಮಸ್ಯೆ, ವಿದ್ಯಾರ್ಥಿಗಳಲ್ಲಿ ನಿರಾಸಕ್ತಿ, ಪ್ರಯಾಣದಲ್ಲಿ ವಸ್ತು ಕಳವು, ಕಬ್ಬಿಣದಿಂದ ಪೆಟ್ಟಾಗುವ ಸಾಧ್ಯತೆ, ಉದ್ಯೋಗದಲ್ಲಿ ಪ್ರಗತಿ, ಸರ್ಕಾರಿ-ರಾಜಕೀಯ ಕ್ಷೇತ್ರವರಿಗೆ ಅನುಕೂಲ, ಗುತ್ತಿಗೆದಾರರಿಗೆ ಲಾಭ.
ಧನಸ್ಸು: ವಿಪರೀತ ರಾಜಯೋಗ, ತಂದೆಯಿಂದ ಧನಾಗಮನ, ಉದ್ಯೋಗದಲ್ಲಿ ಒತ್ತಡ, ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಗೊಂದಲ, ಮರೆವಿನ ಸಮಸ್ಯೆ, ನೀವಾಡುವ ಮಾತಿನಿಂದ ಸಮಸ್ಯೆ.
ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಕಲಹ, ಆತ್ಮೀಯರೊಂದಿಗೆ ವೈಮನಸ್ಸು, ಮಿತ್ರರಿಂದ ಬೇಸರ, ವಿದ್ಯಾಭ್ಯಾಸದಲ್ಲಿ ಅನುಕೂಲ, ಸಂಗಾತಿಗೆ ಆಲಸ್ಯ-ಬೇಜವಾಬ್ದಾರಿ, ಆತುರ ಸ್ವಭಾವದಿಂದ ಸಮಸ್ಯೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ.
ಕುಂಭ: ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ಕೆಲಸದವರ ಜೊತೆ ಮನಃಸ್ತಾಪ, ಉದ್ಯೋಗಕ್ಕಾಗಿ ಆಕಸ್ಮಿಕ ಸಾಲ, ಮಕ್ಕಳ ವಿದ್ಯಾಭ್ಯಾಸದ ಚಿಂತೆ, ಸಂಗಾತಿಯ ಆರೋಗ್ಯದಲ್ಲಿ ಏರುಪೇರು, ಒತ್ತಡದಿಂದ ನಿದ್ರಾಭಂಗ.
ಮೀನ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣದಲ್ಲಿ ಸಂಕಷ್ಟ, ಭಾವನೆಗಳಿಗೆ ಧಕ್ಕೆ, ಲಾಭ ಪ್ರಮಾಣ ಅಧಿಕ, ಸೇವಕರಿಂದ ಅನುಕೂಲ, ಉದ್ಯೋಗದಲ್ಲಿ ಬಡ್ತಿ, ಮಿತ್ರರಿಂದ ಸಹಾಯ, ಬಂಧುಗಳಿಂದ ಅನುಕೂಲ.