ವಾರ : ಮಂಗಳವಾರ, ತಿಥಿ : ದ್ವಿತೀಯ, ನಕ್ಷತ್ರ : ಮಖ
ಶ್ರೀ ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು
ಮಾಘ ಮಾಸ, ಕೃಷ್ಣ ಪಕ್ಷ
ರಾಹುಕಾಲ – 3:31 ರಿಂದ 4:58
ಗುಳಿಕಕಾಲ – 12:37 ರಿಂದ 2:04
ಯಮಗಂಡಕಾಲ – 9:43 ರಿಂದ 11:10
ಮೇಷ: ಈ ದಿನ ವಿನಾಕಾರಣ ದ್ವೇಷ, ಸ್ವಂತ ಪರಿಶ್ರಮದಿಂದ ಯಶಸ್ಸು ಕಾಣುವಿರಿ, ಗುರುಗಳಿಂದ ಬೋಧನೆ, ಅವಿವಾಹಿತರಿಗೆ ವಿವಾಹ ಯೋಗ.
ವೃಷಭ: ರಾಜಕೀಯ ವ್ಯಕ್ತಿಗಳಿಗೆ ತೊಂದರೆ, ಅಧಿಕ ಕೋಪ, ವ್ಯಾಪಾರಿಗಳಿಗೆ ಲಾಭ, ಅನಾವಶ್ಯಕ ಮಾತುಗಳಿಂದ ದೂರವಿರಿ.
ಮಿಥುನ: ದ್ರವರೂಪದ ವಸ್ತುಗಳಿಂದ ಧನ ಲಾಭ, ಕಾರ್ಯ ಸಾಧನೆಗಾಗಿ ತಿರುಗಾಟ,ಸಾಲ ಮಾಡುವ ಸಾಧ್ಯತೆ, ದಾಯಾದಿ ಕಲಹ.
ಕಟಕ: ಈ ದಿನ ದುಷ್ಟರಿಂದ ದೂರವಿರಿ, ಅಲ್ಪ ಕಾರ್ಯಸಿದ್ಧಿ, ಸಾಧಾರಣ ಪ್ರಗತಿ, ಮನಸ್ತಾಪ, ಉದ್ಯೋಗ ಅಭಿವೃದ್ಧಿ, ನಾನಾ ರೀತಿಯ ತೊಂದರೆ.
ಸಿಂಹ: ಈ ದಿನ ಸ್ನೇಹಿತರ ನೆರವು, ಆತ್ಮೀಯರಲ್ಲಿ ಕಲಹ, ಗುರು ಹಿರಿಯರ ದರ್ಶನ, ಸುಖ ಭೋಜನ.
ಕನ್ಯಾ: ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ವಿಪರೀತ ವ್ಯಾಸನ, ವಾಹನ ರಿಪೇರಿ, ನೀಚ ಜನರಿಂದ ದೂರವಿರಿ, ಗುಪ್ತ ವಿದ್ಯೆಗಳಲ್ಲಿ ಆಸಕ್ತಿ.
ತುಲಾ: ಈ ದಿನ ಸಲ್ಲದ ಅಪವಾದ, ಮಾನಹಾನಿ, ಮಾತಾ ಪಿತ್ರರಲ್ಲಿ ಪ್ರೀತಿ, ಸತ್ಕಾರ್ಯಾಸಕ್ತಿ, ಥಳುಕಿನ ಮಾತಿಗೆ ಮರುಳಾಗದಿರಿ.
ವೃಶ್ಚಿಕ: ವಿಧೇಯತೆಯೇ ಯಶಸ್ಸಿನ ಮೆಟ್ಟಿಲು, ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ದುರಭ್ಯಾಸಕ್ಕೆ ಹಣವ್ಯಯ.
ಧನಸ್ಸು: ಈ ದಿನ ಮಾತಿನ ಚಕಮಕಿ, ಅತಿಯಾದ ನಿದ್ರೆ, ಮಕ್ಕಳಿಂದ ನೋವು, ನಾನ ವಿಚಾರಗಳಲ್ಲಿ ಆಸಕ್ತಿ.
ಮಕರ: ದಿನಸಿ ವ್ಯಾಪಾರಿಗಳಿಗೆ ಲಾಭ, ಹಿತೈಷಿಗಳಿಂದ ಪ್ರಶಂಸೆ, ಶತ್ರು ನಾಶ, ಎಲೆಕ್ಟ್ರಾನಿಕ್ ಉಪಕರಣಗಳಿಂದ ಲಾಭ.
ಕುಂಭ: ಷೇರು ವ್ಯವಹಾರಗಳಿಂದ ಲಾಭ, ಶೀತಸಂಬಂಧ ರೋಗ, ನಿಮ್ಮ ಪ್ರಯತ್ನದಿಂದ ಕಾರ್ಯಸಿದ್ಧಿ, ಮಾನಸಿಕ ನೆಮ್ಮದಿ.
ಮೀನ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಪ್ರತಿಭೆಗೆ ತಕ್ಕ ಫಲ, ವಿಪರೀತ ಖರ್ಚು, ಉತ್ತಮ ವಹಿವಾಟು.

