Connect with us

Dina Bhavishya

ದಿನ ಭವಿಷ್ಯ 02-12-2018

Published

on

ಪಂಚಾಂಗ

ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಕೃಷ್ಣ ಪಕ್ಷ, ದಶಮಿ ತಿಥಿ,
ಭಾನುವಾರ, ಹಸ್ತನಕ್ಷತ್ರ

ರಾಹುಕಾಲ: ಸಂಜೆ 4:30 ರಿಂದ 5:56
ಗುಳಿಕಕಾಲ: ಮಧ್ಯಾಹ್ನ 3:04 ರಿಂದ 4:30
ಯಮಗಂಡಕಾಲ: ಮಧ್ಯಾಹ್ನ 12:12 ರಿಂದ 1:38

ಮೇಷ: ನಿಮ್ಮ ಪ್ರಯತ್ನದಿಂದ ಕಾರ್ಯ ಸಿದ್ಧಿ, ಶತ್ರುಗಳು ನಾಶ, ಮಾನಸಿಕ ನೆಮ್ಮದಿ, ಆರೋಗ್ಯದಲ್ಲಿ ವ್ಯತ್ಯಾಸ, ಯಂತ್ರೋಪಕರಣಗಳಿಂದ ಲಾಭ, ಷೇರು ವ್ಯವಹಾರಗಳಲ್ಲಿ ಅನುಕೂಲ, ಸ್ತ್ರೀಯರಿಗೆ ಶುಭ ಫಲ.

ವೃಷಭ: ಮಂಗಳ ಕಾರ್ಯಗಳಲ್ಲಿ ಭಾಗಿ, ವಿರೋಧಿಗಳಿಂದ ಕುತಂತ್ರ, ಆರೋಗ್ಯದಲ್ಲಿ ಏರುಪೇರು, ಪುಣ್ಯಕ್ಷೇತ್ರ ದರ್ಶನ, ದಾಯಾದಿಗಳ ಭೇಟಿ, ಮನಸ್ಸಿನಲ್ಲಿ ಆತಂಕ, ಮಾನಸಿಕ ವ್ಯಥೆ.

ಮಿಥುನ: ವ್ಯಾಪಾರಿಗಳಿಗೆ ಲಾಭ, ದುಶ್ಚಟಗಳಿಗೆ ಹಣವ್ಯಯ, ತಾಳ್ಮೆ ಅತ್ಯಗತ್ಯ, ನಾನಾ ರೀತಿಯ ತೊಂದರೆ, ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ, ಮಕ್ಕಳಿಂದ ಸಹಾಯ, ಶತ್ರುಗಳ ಬಾಧೆ.

ಕಟಕ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಪರರಿಂದ ಮೋಸ ಹೋಗುವ ಸಾಧ್ಯತೆ, ಕಾರ್ಯದಲ್ಲಿ ಬದಲಾವಣೆ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಆರೋಗ್ಯದಲ್ಲಿ ಏರುಪೇರು, ಕುಟುಂಬ ಸೌಖ್ಯ.

ಸಿಂಹ: ಇಷ್ಟವಾದ ವಸ್ತುಗಳ ಖರೀದಿ, ಆತ್ಮೀಯರಲ್ಲಿ ಪ್ರೀತಿ, ಶರೀರದಲ್ಲಿ ಆಯಾಸ, ಭೂ ಲಾಭ, ವಾಹನ ರಿಪೇರಿ, ಗುರುಗಳ ದರ್ಶನ ಮಾಡಿ, ಉದರ ಬಾಧೆ, ಮಾತೃವಿನಿಂದ ಸಹಾಯ, ಕೃಷಿಕರಿಗೆ ಲಾಭ.

ಕನ್ಯಾ; ಅನಿರೀಕ್ಷಿತ ಖರ್ಚು, ಮಾತಿನ ಮೇಲೆ ಹಿಡಿತವಿರಲಿ, ನಿವೇಶನ ಪ್ರಾಪ್ತಿ, ದಾಂಪತ್ಯದಲ್ಲಿ ಕಲಹ, ಮಾನಸಿಕ ವ್ಯಥೆ, ಪರರಿಂದ ಸಹಾಯ, ದೂರ ಪ್ರಯಾಣ, ನೆಮ್ಮದಿ ಇಲ್ಲದ ಜೀವನ.

ತುಲಾ: ನಾನಾ ರೀತಿಯ ಸಂಪಾದನೆ, ಮನಸ್ಸಿನಲ್ಲಿ ಗೊಂದಲ, ಸಾಲದಿಂದ ಮುಕ್ತಿ, ದೈವಾನುಗ್ರಹದಿಂದ ಅನುಕೂಲ, ಉತ್ತಮ ಬುದ್ಧಿಶಕ್ತಿ, ಅಮೂಲ್ಯ ವಸ್ತುಗಳ ಖರೀದಿ.

ವೃಶ್ಚಿಕ: ಮಕ್ಕಳ ಭಾವನೆಗಳಿಗೆ ಸ್ಪಂದಿಸುವಿರಿ, ಸ್ಥಿರಾಸ್ತಿ ಖರೀದಿ ಸಾಧ್ಯತೆ, ದೇವತಾ ಕಾರ್ಯಗಳಲ್ಲಿ ಭಾಗಿ, ಅತಿಯಾದ ಕೋಪ, ಅನಾವಶ್ಯಕ ದ್ವೇಷ ಸಾಧನೆ ಒಳ್ಳೆಯದಲ್ಲ, ಮಿತ್ರರಲ್ಲಿ ಸ್ನೇಹ ವೃದ್ಧಿ.

ಧನಸ್ಸು: ಉತ್ತಮ ಬುದ್ಧಿಶಕ್ತಿ, ವೃಥಾ ಅಲೆದಾಟ, ಹೊಸ ವ್ಯವಹಾರದಿಂದ ಲಾಭ, ಅನಿರೀಕ್ಷಿತ ವಸ್ತ್ರಾಭರಣ ಯೋಗ, ಒಳ್ಳೆಯವರ ಸಹವಾಸದಿಂದ ಕೀರ್ತಿ ಪ್ರಾಪ್ತಿ, ಮಾನಸಿಕ ನೆಮ್ಮದಿ ಲಭಿಸುವುದು.

ಮಕರ: ವಿವಾಹದ ಮಾತುಕತೆ, ವಿದೇಶ ಪ್ರಯಾಣ, ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ದಕ್ಕೆ, ಅನ್ಯರಲ್ಲಿ ಪ್ರೀತಿ ವಾತ್ಸಲ್ಯ, ಬೆಂಕಿಯಿಂದ ಆತಂಕ, ಅಕಾಲ ಭೋಜನ, ಆದಾಯಕ್ಕಿಂತ ಖರ್ಚು ಹೆಚ್ಚು.

ಕುಂಭ: ಯತ್ನ ಕಾರ್ಯದಲ್ಲಿ ಜಯ, ತೀರ್ಥಯಾತ್ರೆ ದರ್ಶನ, ಮನೆಯಲ್ಲಿ ನೆಮ್ಮದಿ ವಾತಾವರಣ, ಹೆತ್ತವರಲ್ಲಿ ಪ್ರೀತಿ, ವಿಪರೀತ ಖರ್ಚು, ನಯವಂಚಕರ ಮಾತಿಗೆ ಮರುಳಾಗಬೇಡಿ.

ಮೀನ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ಸ್ವಂತ ಉದ್ಯಮಸ್ಥರಿಗೆ ಲಾಭ, ನಿಷ್ಠೂರದ ಮಾತುಗಳನ್ನಾಡುವಿರಿ, ಅನ್ಯರಿಗೆ ನೋವುಂಟು ಮಾಡುವಿರಿ, ಈ ವಾರ ಎಚ್ಚರಿಕೆಯಲ್ಲಿರುವುದು ಉತ್ತಮ.

Click to comment

Leave a Reply

Your email address will not be published. Required fields are marked *