Connect with us

Dina Bhavishya

ದಿನಭವಿಷ್ಯ 02-11-2018

Published

on

ಪಂಚಾಂಗ

ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಕೃಷ್ಣಪಕ್ಷ, ನವಮಿ ತಿಥಿ,
ಬೆಳಗ್ಗೆ 7:10 ನಂತರ ಉಪರಿ ದಶಮಿ
ಶುಕ್ರವಾರ, ಮಖ ನಕ್ಷತ್ರ

ರಾಹುಕಾಲ: ಬೆಳಗ್ಗೆ 10:40 ರಿಂದ 12:07
ಗುಳಿಕಕಾಲ: ಬೆಳಗ್ಗೆ 7:45 ರಿಂದ 9:12
ಯಮಗಂಡಕಾಲ: ಮಧ್ಯಾಹ್ನ 3:02 ರಿಂದ 4:30

ಮೇಷ: ಮಕ್ಕಳೊಂದಿಗೆ ಉತ್ತಮ ಬಾಂಧವ್ಯ, ಪಿತ್ರಾರ್ಜಿತ ಆಸ್ತಿ ತಗಾದೆಯಲ್ಲಿ ಸೋಲು, ದಾಂಪತ್ಯದಲ್ಲಿ ಸಮಸ್ಯೆ, ಮಕ್ಕಳ ಜೀವನದಲ್ಲಿ ಏರುಪೇರು, ಜೂಜು-ರೇಸ್ ಲಾಟರಿಗಳಿಂದ ನಷ್ಟ, ವಿಕೃತ ಮನರಂಜನೆಗೆ ಆಸೆಯಾಗುವುದು, ಸಂತಾನ ದೋಷ ಕಾಡುವುದು, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

ವೃಷಭ: ಸ್ಥಿರಾಸ್ತಿ ನಷ್ಟ ಸಾಧ್ಯತೆ, ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಸೋಲು, ಬಂಧುಗಳಿಂದ ಮಾನಹಾನಿ, ಆರೋಗ್ಯದಲ್ಲಿ ವ್ಯತ್ಯಾಸ, ಶತ್ರುಗಳಿಂದ ತೊಂದರೆ, ಉದ್ಯೋಗ ಲಾಭ, ಪರಸ್ಥಳ ವಾಸ, ನೀರಿನಿಂದ ತೊಂದರೆ, ಕೆಲಸದಲ್ಲಿ ಒತ್ತಡ ನಿದ್ರಾಭಂಗ.

ಮಿಥುನ: ಪ್ರೇಮ ವಿಚಾರದಲ್ಲಿ ನೋವು, ಭಾವನೆಗಳಿಗೆ ಧಕ್ಕೆ, ಧಾರ್ಮಿಕ ವ್ಯಕ್ತಿಯಿಂದ ವಂಚನೆ, ಬಂಧುಗಳ ಜೀವನದಲ್ಲಿ ಏರುಪೇರು, ಪ್ರಯಾಣದಲ್ಲಿ ಹಿನ್ನಡೆ, ಹಣಕಾಸು ನಷ್ಟ, ಬಾಯಿ ಹುಣ್ಣು, ಉದರ ಬಾಧೆ.

ಕಟಕ: ಕುಟುಂಬದ ಗೌರವಕ್ಕೆ ಧಕ್ಕೆ, ನೀವಾಡುವ ಮಾತಿನಿಂದ ಸಮಸ್ಯೆ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ದಾಂಪತ್ಯದಿಂದ ದೂರವಾಗುವ ಆಲೋಚನೆ, ನಿದ್ರೆಯಲ್ಲಿ ಕೆಟ್ಟ ಕನಸು, ಅಪರಿಚಿತರಿಂದ ಮೋಸ, ಹಠ-ಮೊಂಡುತನ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

ಸಿಂಹ: ಉದ್ಯಮ-ವ್ಯಾಪಾರದಲ್ಲಿ ನಷ್ಟ, ಮೋಸ ಹೋಗುವ ಸಾಧ್ಯತೆ, ಸರ್ಕಾರಿ-ರಾಜಕೀಯ ವ್ಯಕ್ತಿಗಳಿಂದ ತೊಂದರೆ, ಸ್ತ್ರೀಯರಿಂದ ಆರ್ಥಿಕ ಸಂಕಷ್ಟ, ಕುಟುಂಬದ ಗೌರವಕ್ಕೆ ಚ್ಯುತಿ, ಶತ್ರುಗಳ ಕಾಟ, ಒತ್ತಡಗಳಿಂದ ನಿದ್ರಾಭಂಗ, ಮಾಟ-ಮಂತ್ರ, ದೈವ ಶಾಪದ ಭೀತಿ.

ಕನ್ಯಾ: ಅಕ್ರಮ ಸಂಪಾದನೆಗೆ ಮನಸ್ಸು, ಕೆಲಸ ಕಾರ್ಯಗಳಲ್ಲಿ ಜಯ, ಆಸೆ-ಆಕಾಂಕ್ಷೆಗಳು ಹೆಚ್ಚಾಗುವುದು, ಆರೋಗ್ಯ ಸಮಸ್ಯೆಯಿಂದ ಆತಂಕ, ಚಿನ್ನಾಭರಣ ನಷ್ಟ ಸಾಧ್ಯತೆ, ಶೃಂಗಾರದ ಮಾತುಗಳಿಂದ ಎಡವಟ್ಟು.

ತುಲಾ: ಅಹಂಭಾವ-ಆತ್ಮಾಭಿಮಾನ ಹೆಚ್ಚಾಗುವುದು, ಅಧಿಕವಾದ ಸಿಟ್ಟು-ಆತುರ ಸ್ವಭಾವ, ಉದ್ಯೋಗ ಸ್ಥಳದಲ್ಲಿ ಅಪವಾದ, ಮೇಲಾಧಿಕಾರಿಗಳಿಂದ ಅನುಕೂಲ, ಸ್ವಯಂಕೃತ ಅಪರಾಧದಿಂದ ಸಂಕಷ್ಟ, ಸ್ಥಿರಾಸ್ತಿಯಿಂದ ನಷ್ಟ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮನೆಯಲ್ಲಿ ಆತಂಕದ ವಾತಾವರಣ.

ವೃಶ್ಚಿಕ: ಉದ್ಯೋಗ ನಷ್ಟ, ಅತಿಯಾದ ಒಳ್ಳೆತನದಿಂದ ತೊಂದರೆ, ಸ್ವಂತ ಉದ್ಯಮ ವ್ಯಾಪಾರದಲ್ಲಿ ಅನುಕೂಲ, ಮೋಸ ಹೋಗುವ ಸಾಧ್ಯತೆ, ಉದ್ಯೋಗದಲ್ಲಿ ಒತ್ತಡ, ಮಾನಸಿಕ ವ್ಯಥೆಯಿಂದ ನಿದ್ರಾಭಂಗ, ಉದ್ಯೋಗ ಬದಲಾವಣೆಗೆ ಚಿಂತನೆ, ಹಣಕಾಸು ವಿಚಾರದಲ್ಲಿ ಮಂದಗತಿ, ಒಂಟಿಯಾಗಿರಲು ಇಷ್ಟ ಪಡುವಿರಿ.

ಧನಸ್ಸು: ತಂದೆಯಿಂದ ಲಾಭ, ಮಹಿಳೆಯರಿಗೆ ಅನುಕೂಲ, ದುಷ್ಟ ವ್ಯಕ್ತಿಗಳಿಂದ ಪ್ರಶಂಸೆ, ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಆಕಸ್ಮಿಕ ಪ್ರಯಾಣ, ಶಕ್ತಿದೇವತೆಯ ದರ್ಶನ ಭಾಗ್ಯ, ಗುಪ್ತ ನಿಧಿ ಸಂಪತ್ತು ಪ್ರಾಪ್ತಿ, ಕಾಲಿಗೆ ಪೆಟ್ಟಾಗುವ ಸಾಧ್ಯತೆ, ಅತಿಯಾದ ಕಷ್ಟ, ಸೋಲು-ನಿರಾಸೆ, ದೂರ ಪ್ರಯಾಣಕ್ಕೆ ಮನಸ್ಸು.

ಮಕರ: ಉದ್ಯೋಗ ಸ್ಥಳದಲ್ಲಿ ಒತ್ತಡ, ಸಹೋದ್ಯೋಗಿಗಳಿಂದ ತೊಂದರೆ, ಮಹಿಳಾ ಶತ್ರುಗಳ ಕಾಟ, ಪಾಲುದಾರಿಕೆಯಲ್ಲಿ ಸಮಸ್ಯೆ, ಅಪಕೀರ್ತಿ, ಅಪಘಾತ ಸಾಧ್ಯತೆ, ಸ್ವಯಂಕೃತ ಅಪರಾಧದಿಂದ ತೊಂದರೆ, ಮೇಲಾಧಿಕಾರಿಗಳಿಂದ ದಂಡನೆ, ದಾಂಪತ್ಯದಲ್ಲಿ ಸಂಶಯ.

ಕುಂಭ: ಸಂಗಾತಿ ದಾರಿ ತಪ್ಪುವ ಸಾಧ್ಯತೆ, ತಂದೆಯ ನಡವಳಿಕೆಯಿಂದ ಬೇಸರ, ಪ್ರಯಾಣದಲ್ಲಿ ದುಷ್ಟರ ಸಹವಾಸ, ಪಾಲುದಾರಿಕೆಯಲ್ಲಿ ಸಮಸ್ಯೆ, ಭವಿಷ್ಯಕ್ಕೆ ಕಂಟಕವಾಗುವ ಸಂದರ್ಭ, ಸ್ಥಿರಾಸ್ತಿಯಿಂದ ತೊಂದರೆ, ಒತ್ತಡದ ಜೀವನದಿಂದ ನಿದ್ರಾಭಂಗ, ಮಾಡಿದ ತಪ್ಪುಗಳ ಅರಿವಾಗುವುದು, ಮಾಯೆಯ ಬಲೆಯಲ್ಲಿ ಸಿಲುಕುವಿರಿ.

ಮೀನ: ಶತ್ರುಗಳು-ಸೇವಕರಿಂದ ತೊಂದರೆ, ಸಾಲಗಾರರ ಕಾಟ, ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆ, ಗರ್ಭ ದೋಷ, ಮಕ್ಕಳ ಪ್ರೇಮ ವಿಚಾರಗಳಿಂದ ಮಾನಹಾನಿ, ಸ್ನೇಹಿತರೊಂದಿಗೆ ಶತ್ರುತ್ವ, ಗುಪ್ತ ನಿಧಿ ಸಂಪತ್ತು ಒಲಿಯುವುದು, ಆಧ್ಯಾತ್ಮಿಕತೆ-ತಂತ್ರಗಾರಿಕೆಯಿಂದ ಅನುಕೂಲ.

Click to comment

Leave a Reply

Your email address will not be published. Required fields are marked *