ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜೇಷ್ಠ ಮಾಸ,
ಶುಕ್ಲ ಪಕ್ಷ, ಅಷ್ಟಮಿ ತಿಥಿ,
ಬೆಳಗ್ಗೆ 6:17 ನಂತರ ನವಮಿ ತಿಥಿ,
ಶುಕ್ರವಾರ, ಪೂರ್ವ ಫಾಲ್ಗುಣಿ ನಕ್ಷತ್ರ
ಮಧ್ಯಾಹ್ನ 12:01 ನಂತರ ಉತ್ತರ ಫಾಲ್ಗುಣಿ ನಕ್ಷತ್ರ
ಶುಭ ಘಳಿಗೆ: ಬೆಳಗ್ಗೆ 7:23 ರಿಂದ 9:04
ಅಶುಭ ಘಳಿಗೆ: ಬೆಳಗ್ಗೆ 10:44 ರಿಂದ 12:25
Advertisement
ರಾಹುಕಾಲ: ಬೆಳಗ್ಗೆ 10:45 ರಿಂದ 12:21
ಗುಳಿಕಕಾಲ: ಬೆಳಗ್ಗೆ 7:33 ರಿಂದ 9:09
ಯಮಗಂಡಕಾಲ: ಮಧ್ಯಾಹ್ನ 3:23 ರಿಂದ 5:09
Advertisement
ಮೇಷ: ಮಕ್ಕಳಿಗಾಗಿ ಸಾಲ ಮಾಡುವಿರಿ, ಮಾನಸಿಕ ಚಿಂತೆ, ನೆರೆಹೊರೆಯವರಿಂದ ಕಿರಿಕಿರಿ, ಆತ್ಮಗೌರವಕ್ಕೆ ಧಕ್ಕೆ, ಸ್ಥಿರಾಸ್ತಿ-ವಾಹನದಿಂದ ನಷ್ಟ.
Advertisement
ವೃಷಭ: ಪತ್ರ ವ್ಯವಹಾರಗಳಲ್ಲಿ ಅಡೆತಡೆ, ಪಿತ್ರಾರ್ಜಿತ ಆಸ್ತಿ ತಗಾದೆ, ಕುಟುಂಬದಲ್ಲಿ ಮನಃಸ್ತಾಪ, ಅಭಿವೃದ್ಧಿಗಾಗಿ ಪರದಾಟ, ದಾಂಪತ್ಯದಲ್ಲಿ ಕಲಹ.
Advertisement
ಮಿಥುನ: ಉದ್ಯೋಗ ನಿಮಿತ್ತ ಪ್ರಯಾಣ, ಮಾತೃವಿನಿಂದ ಬೈಗುಳ, ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ, ಕುಟುಂಬದ ಪರಿಸ್ಥಿತಿ ಉತ್ತಮ.
ಕಟಕ: ಗಂಡು ಮಕ್ಕಳಿಂದ ತೊಂದರೆ, ಕುಟುಂಬದಲ್ಲಿ ಅಶಾಂತಿ, ಉದ್ಯೋಗ ಬಡ್ತಿಯಲ್ಲಿ ಹಿನ್ನಡೆ, ನೆಮ್ಮದಿ ಇಲ್ಲದ ಜೀವನ, ವ್ಯಾಪಾರ ವ್ಯವಹಾರದಲ್ಲಿ ಆತಂಕ.
ಸಿಂಹ: ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ರಾಜಕೀಯ ವ್ಯಕ್ತಿಗಳಿಂದ ಹಣಕಾಸು ನೆರವು, ಸಾಲಗಾರರ ಕಾಟ, ನೆಮ್ಮದಿ ಇಲ್ಲದ ಜೀವನ, ನಿದ್ರಾಭಂಗ, ವ್ಯಾಪಾರೋದ್ಯಮಕ್ಕೆ ಸರ್ಕಾರದಿಂದ ಮನ್ನಣೆ.
ಕನ್ಯಾ: ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ, ವಿದೇಶ ಪ್ರಯಾಣ ಕನಸು ನನಸಾಗುವುದು, ನರ ದೌರ್ಬಲ್ಯ, ಶರೀರದಲ್ಲಿ ಆತಂಕ, ಆರೋಗ್ಯದಲ್ಲಿ ಏರುಪೇರು.
ತುಲಾ: ಅನಗತ್ಯ ಮಾತಿನಿಂದ ಉದ್ಯೋಗ ನಷ್ಟ, ಮಿತ್ರರೊಂದಿಗೆ ವಾಗ್ವಾದ, ಭವಿಷ್ಯದ ಚಿಂತನೆ, ಆರ್ಥಿಕ ಮುಗ್ಗಟ್ಟು, ತಂದೆ-ಮಕ್ಕಳಲ್ಲಿ ಮನಃಸ್ತಾಪ.
ವೃಶ್ಚಿಕ: ಹೋರಾಟದಿಂದ ಕಾರ್ಯ ಜಯ, ಸಹೋದ್ಯೋಗಿಗಳೊಂದಿಗೆ ಪ್ರಯಾಣ, ಮಿತ್ರರಿಂದ ಉದ್ಯೋಗ ಪ್ರಾಪ್ತಿ, ಸ್ವಯಂಕೃತ್ಯಗಳಿಂದ ಉದ್ಯೋಗ ನಷ್ಟ ಮಾಡಿಕೊಳ್ಳುವಿರಿ.
ಧನಸ್ಸು: ಉದ್ಯೋಗ ನಿಮಿತ್ತ ಪ್ರಯಾಣ, ವೃತ್ತಿಪರರಿಗೆ ಅನುಕೂಲ, ಉದ್ಯೋಗದಲ್ಲಿ ಒತ್ತಡ, ಬಂಧುಗಳಿಂದ ನಿಂದನೆ, ನಿದ್ರಾಭಂಗ.
ಮಕರ: ತಂದೆಯಿಂದ ಸಂಶಯ, ದಾಂಪತ್ಯದಲ್ಲಿ ವಿರಸ, ವ್ಯಾಪಾರ-ವ್ಯವಹಾರ ನಿಮಿತ್ತ ಮಿತ್ರರ ಭೇಟಿ, ಉದ್ಯೋಗ ಪ್ರಾಪ್ತಿ.
ಕುಂಭ: ಉದ್ಯೋಗದಲ್ಲಿ ಸಂಕಷ್ಟ, ಆಕಸ್ಮಿಕ ದುರ್ಘಟನೆ, ಗೌರವಕ್ಕೆ ಧಕ್ಕೆ, ವ್ಯಾಪಾರೋದ್ಯಮದಲ್ಲಿ ನಷ್ಟ, ಮಕ್ಕಳ ತಪ್ಪುಗಳಿಂದ ಅನಾನುಕೂಲ.
ಮೀನ: ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳಿಂದ ಪಿತ್ರಾರ್ಜಿತ ಆಸ್ತಿ ಅಡಮಾನ, ಪ್ರೇಮ ವಿಚಾರದಲ್ಲಿ ಮನಃಸ್ತಾಪ, ತಂದೆಯ ಗೌರವಕ್ಕೆ ಧಕ್ಕೆ.