Connect with us

Dina Bhavishya

ದಿನ ಭವಿಷ್ಯ: 01-12-2019

Published

on

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಶುಕ್ಲ ಪಕ್ಷ, ಪಂಚಮಿ ತಿಥಿ,
ಭಾನುವಾರ, ಉತ್ತರಾಷಾಢ ನಕ್ಷತ್ರ

ರಾಹುಕಾಲ: ಸಂಜೆ 4:30 ರಿಂದ 5:56
ಗುಳಿಕಕಾಲ: ಮಧ್ಯಾಹ್ನ 3:04 ರಿಂದ 4:30
ಯಮಗಂಡಕಾಲ: ಮಧ್ಯಾಹ್ನ 12:12 ರಿಂದ 1:38

ಮೇಷ: ಅಲ್ಪ ಪ್ರಯತ್ನದಿಂದ ಕಾರ್ಯ ಸಫಲ, ಉತ್ತಮ ಅನುಕೂಲ ಪ್ರಾಪ್ತಿ, ಆರೋಗ್ಯದಲ್ಲಿ ಚೇತರಿಕೆ, ವಕೀಲರಿಗೆ ಅನುಕೂಲ, ಕೆಲಸ ಕಾರ್ಯದಲ್ಲಿ ಪ್ರಗತಿ, ಅಲ್ಪ ಆದಾಯ, ಅಧಿಕವಾದ ಖರ್ಚು.

ವೃಷಭ: ಪ್ರೀತಿ ಪಾತ್ರರೊಂದಿಗೆ ಬಾಂಧವ್ಯ, ಅನಿರೀಕ್ಷಿತ ಖರ್ಚು ಹೆಚ್ಚು, ಚಿನ್ನಾಭರಣ ಖರೀದಿ ಯೋಗ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಸ್ವಂತ ಉದ್ಯಮಗಳಿಂದ ಲಾಭ, ಗಣ್ಯ ವ್ಯಕ್ತಿಗಳ ಭೇಟಿ ಮಾಡುವಿರಿ.

ಮಿಥುನ: ಕುತಂತ್ರರಿಂದ ಹಣ ಸಂಪಾದನೆ, ಚೋರ ಭಯ, ಆಲಸ್ಯ ಮನೋಭಾವ, ಮೂಗಿನ ಮೇಲೆ ಕೋಪ, ವಾಹನದಿಂದ ಕಂಟಕ, ಆರೋಗ್ಯದಲ್ಲಿ ವ್ಯತ್ಯಾಸ, ಹಣಕಾಸು ತೊಂದರೆ.

ಕಟಕ: ವಿದೇಶ ಪ್ರಯಾಣ, ಸಾಲ ಮರುಪಾವತಿ, ಒಳ್ಳೆಯತನ ದುರುಪಯೋಗ ಪಡಿಸಿಕೊಳ್ಳುವರು ಎಚ್ಚರ, ಸ್ತ್ರೀಯರಿಗೆ ಅನುಕೂಲ, ವ್ಯಾಪಾರ-ವ್ಯವಹಾರದಲ್ಲಿ ಲಾಭ.

ಸಿಂಹ: ಮಿತ್ರರೊಂದಿಗೆ ವಾಗ್ವಾದ, ಋಣ ಬಾಧೆ, ಯತ್ನ ಕಾರ್ಯದಲ್ಲಿ ಅನುಕೂಲ, ಸ್ತ್ರೀಯರಿಗೆ ಲಾಭ, ನಿವೇಶನ ಯೋಗ, ಅಧಿಕ ತಿರುಗಾಟ, ದಾಂಪತ್ಯದಲ್ಲಿ ಪ್ರೀತಿ, ಉತ್ತಮ ವ್ಯಾಪಾರ ವಹಿವಾಟು.

ಕನ್ಯಾ: ಯಾವುದೇ ನಿರ್ಧಾ ಕೈಗೊಳ್ಳಬೇಡಿ, ಸಣ್ಣ ವಿಚಾರಕ್ಕೆ ಭಿನ್ನಾಭಿಪ್ರಾಯ, ಎಲ್ಲಿ ಹೋದರೂ ಅಶಾಂತಿ, ಚಂಚಲ ಮನಸ್ಸು, ಪರರಿಂದ ಮೋಸ, ತಾಳ್ಮೆ ಅತ್ಯಗತ್ಯ.

ತುಲಾ: ಹಿರಿಯರಿಂದ ಮಾರ್ಗದರ್ಶನ, ಸಾಲ ಬಾಧೆ, ಕೆಲಸದಲ್ಲಿ ಹೆಚ್ಚಿನ ಜವಾಬ್ದಾರಿ, ಅತಿಯಾದ ನೋವು, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಮಾತೃವಿನಿಂದ ಸಹಾಯ.

ವೃಶ್ಚಿಕ: ಶ್ರಮಕ್ಕೆ ತಕ್ಕ ಫಲ, ಯಾವುದಕ್ಕೂ ಚಿಂತಿಸುವ ಅಗತ್ಯವಿಲ್ಲ, ಮಾನಸಿಕ ನೆಮ್ಮದಿ, ದೂರ ಪ್ರಯಾಣ, ವಿವಾಹ ಯೋಗ, ಸಾಲದಿಂದ ಮುಕ್ತಿ, ಉತ್ತಮ ಪ್ರಗತಿ, ಸುಖ ಭೋಜನ ಪ್ರಾಪ್ತಿ.

ಧನಸ್ಸು: ಅನಾವಶ್ಯಕ ವಸ್ತುಗಳ ಖರೀದಿ, ದುಷ್ಟ ಜನರಿಂದ ದೂರವಿರಿ, ಸ್ತ್ರೀಯರಿಗೆ ಅನುಕೂಲ, ಮಹಿಳೆಯರಿಗೆ ಅಲ್ಪ ಆತಂಕ, ವ್ಯಾಪಾರದಲ್ಲಿ ಸಾಧಾರಣ ಲಾಭ, ವಿದ್ಯಾರ್ಥಿಗಳ ಪ್ರತಿಭೆಗೆ ಮನ್ನಣೆ.

ಮಕರ: ಆರ್ಥಿಕ ಸಂಕಷ್ಟಕ್ಕೆ ಸಿಲುಕುವಿರಿ, ಥಳುಕಿನ ಮಾತಿಗೆ ಮರುಳಾಗಬೇಡಿ, ಅತಿಯಾದ ಕೋಪ, ಸ್ಥಾನ ಬದಲಾವಣೆ, ಮನಸ್ಸಿನ ಹತೋಟಿ ಕಳೆದುಕೊಳ್ಳಬೇಡಿ, ತಾಳ್ಮೆಯಿಂದ ಕಾರ್ಯ ಪ್ರಗತಿ.

ಕುಂಭ: ದೇವತಾ ಕಾರ್ಯಗಳಲ್ಲಿ ಭಾಗಿ, ಹಣಕಾಸು ತೊಂದರೆ, ಮಾನಸಿಕ ವ್ಯಥೆ, ಆತ್ಮೀಯರಿಂದ ಸಹಾಯ, ಪಿತ್ರಾರ್ಜಿತ ಆಸ್ತಿ ಗಳಿಕೆ, ವಿದ್ಯಾರ್ಥಿಗಳಲ್ಲಿ ಪ್ರತಿಭೆ, ಸಾಧಾರಣ ಲಾಭ.

ಮೀನ: ಹೊಸ ವ್ಯಾಪಾರದಿಂದ ನಷ್ಟ, ಪರರ ತಪ್ಪಿನಿಂದ ಸಂಕಷ್ಟ, ಗೌರವಕ್ಕೆ ಧಕ್ಕೆ, ಹೊಸ ಜವಾಬ್ದಾರಿ ಒಪ್ಪಿಕೊಳ್ಳುವ ಮುನ್ನ ಚಿಂತಿಸಿ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ, ನೆಮ್ಮದಿ ಇಲ್ಲದ ಜೀವನ.

Click to comment

Leave a Reply

Your email address will not be published. Required fields are marked *