ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ಅಮಾವಾಸ್ಯೆ,
ಬೆಳಗ್ಗೆ 8:44 ನಂತರ ಪ್ರಥಮಿ
ಗುರುವಾರ, ಪುಷ್ಯ ನಕ್ಷತ್ರ
ಮಧ್ಯಾಹ್ನ 12:11 ನಂತರ ಆಶ್ಲೇಷ ನಕ್ಷತ್ರ.
ರಾಹುಕಾಲ: ಮಧ್ಯಾಹ್ನ 2:04 ರಿಂದ 3:39
ಗುಳಿಕಕಾಲ: ಬೆಳಗ್ಗೆ 9:19 ರಿಂದ 10:54
ಯಮಗಂಡಕಾಲ: ಬೆಳಗ್ಗೆ 6:10 ರಿಂದ 7:44
Advertisement
ಮೇಷ: ಆಕಸ್ಮಿಕ ಬಂಧುಗಳ ಭೇಟಿ, ಅನಿರೀಕ್ಷಿತ ಪ್ರಯಾಣ, ವಾಹನಗಳಿಂದ ತೊಂದರೆ, ಉದ್ಯೋಗದಲ್ಲಿ ಸಮಸ್ಯೆ, ಉದ್ಯೋಗ ಕಳೆದುಕೊಳ್ಳುವ ಸನ್ನಿವೇಶ, ಸಾಲಗಾರರಿಂದ ಕಿರಿಕಿರಿ, ಬಂಧುಗಳು-ಸೇವಕರಿಂದ ತೊಂದರೆ.
Advertisement
ವೃಷಭ: ದಾಂಪತ್ಯದಲ್ಲಿ ಅನುಮಾನ, ಪಾಲುದಾರಿಕೆ ವ್ಯವಹಾರದಲ್ಲಿ ಸಂಕಷ್ಟ, ಮಕ್ಕಳ ಜೀವನದಲ್ಲಿ ಏರುಪೇರು, ಮಕ್ಕಳ ನಡವಳಿಕೆಯಿಂದ ಬೇಸರ, ದುಶ್ಚಟಕ್ಕೆ ದಾಸರಾಗುವಿರಿ.
Advertisement
ಮಿಥುನ: ಸ್ವಯಂಕೃತ್ಯಗಳಿಂದ ಶತ್ರುಗಳು ಹೆಚ್ಚು, ಹಣಕಾಸು ವ್ಯವಹಾರದಲ್ಲಿ ಅಡೆತಡೆ, ಯಂತ್ರೋಪಕರಣಗಳಿಂದ ನಷ್ಟ, ನರ ದೌರ್ಬಲ್ಯ, ಕಾಲು ಸೆಳೆತ, ಚರ್ಮ ತುರಿಕೆ, ಅಧಿಕ ನಿದ್ದೆ.
Advertisement
ಕಟಕ: ಆರೋಗ್ಯದಲ್ಲಿ ಏರುಪೇರು, ಗ್ಯಾಸ್ಟ್ರಿಕ್ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳಿಂದ ನಷ್ಟ ಅವಮಾನ, ದುಶ್ಚಟಗಳು ಹೆಚ್ಚಾಗುವುದು, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ, ಸಂಗಾತಿಯಿಂದ ನಷ್ಟ.
ಸಿಂಹ: ಮಾನಸಿಕ ಹಿಂಸೆ, ಜಿಗುಪ್ಸೆ, ಆಲಸ್ಯ, ನಿರುತ್ಸಾಹ, ಅತಿಯಾದ ನಿದ್ರೆ, ವಾಹನ ರಿಪೇರಿಯಿಂದ ಅಧಿಕ ಖರ್ಚು, ಸಾಲ ಬಾಧೆ, ಶತ್ರು ಕಾಟ, ಕಾರ್ಮಿಕರಿಂದ ಕೆಲಸಗಳಲ್ಲಿ ಅಡೆತಡೆ, ಸಂಗಾತಿ ನಡವಳಿಕೆಯಿಂದ ಬೇಸರ.
ಕನ್ಯಾ: ಸ್ನೇಹಿತರೊಂದಿಗೆ ತಿರುಗಾಟ, ಸ್ವಯಂಕೃತ್ಯದಿಂದ ನಷ್ಟ, ಉದ್ಯೋಗ ಬದಲಾವಣೆಯಿಂದ ನಷ್ಟ, ಕಾಲು ನೋವು, ರೋಗ ಬಾಧೆ, ಆರೋಗ್ಯದಲ್ಲಿ ಏರುಪೇರು, ದಾಯಾದಿಗಳೊಂದಿಗೆ ಕಲಹ.
ತುಲಾ: ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಹಣಕಾಸು ವ್ಯವಹಾರದಲ್ಲಿ ಮಂದಗತಿ, ಹಿರಿಯರಿಂದ ಅನುಕೂಲ, ವಿದ್ಯಾಭ್ಯಾಸಕ್ಕಾಗಿ ಅಧಿಕ ಖರ್ಚು, ಈ ದಿನ ಹೆಚ್ಚಾಗಿ ಖರ್ಚು ಮಾಡುವಿರಿ.
ವೃಶ್ಚಿಕ: ಮಕ್ಕಳಿಂದ ಸಮಸ್ಯೆ, ಸ್ವಯಂಕೃತ್ಯಗಳಿಂದ ಸಂಕಷ್ಟ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ವೃತ್ತಿಪರ ಕ್ಷೇತ್ರದವರಿಗೆ ಅನುಕೂಲ, ಸ್ಥಿರಾಸ್ತಿ ತಗಾಧೆ, ದಾಯಾದಿಗಳ ಕಲಹ.
ಧನಸ್ಸು: ಅನಿರೀಕ್ಷಿತ ಸೋಲು, ನಷ್ಟ ನಿರಾಸೆ ಅಪಕೀರ್ತಿ, ಉದ್ಯೋಗದಲ್ಲಿನ ಒತ್ತಡದಿಂದ ನಿದ್ರಾಭಂಗ, ಆರ್ಥಿಕ ಸಂಕಷ್ಟಗಳು ಹೆಚ್ಚಾಗುವುದು, ಆತ್ಮೀಯರಿಂದಲೇ ನೋವು.
ಮಕರ: ಉದ್ಯೋಗ-ಉದ್ಯಮಸ್ಥರಿಗೆ ಲಾಭ, ಸ್ನೇಹಿತರಿಂದ ಸಾಲದ ಸಹಾಯ, ಸ್ವಯಂಕೃತ್ಯಗಳಿಂದ ನಷ್ಟ, ಆತ್ಮೀಯರನ್ನು ದೂರ ಮಾಡುವ ಪರಿಸ್ಥಿತಿ, ಸಂಗಾತಿಯ ಆರೋಗ್ಯಕ್ಕಾಗಿ ಖರ್ಚು.
ಕುಂಭ: ಉದ್ಯೋಗ ಸ್ಥಳದಲ್ಲಿ ದುರ್ಘಟನೆ, ಮಕ್ಕಳಿಗಾಗಿ ವಸ್ತು ಖರೀದಿ, ವಿದ್ಯಾಭ್ಯಾಸಕ್ಕಾಗಿ ಅಧಿಕ ಖರ್ಚು, ಬೇಸರ ಕಳೆಯಲು ದುಶ್ಚಟ ಕಲಿಯುವಿರಿ, ಶೀತ ಕಫ ರೋಗ ಬಾಧೆ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಉಸಿರಾಟ ಸಮಸ್ಯೆ.
ಮೀನ: ತಂದೆಯಿಂದ ಮಕ್ಕಳಿಗೆ ಭವಿಷ್ಯದ ಆತಂಕ, ಉತ್ತಮ ಅವಕಾಶ ಪ್ರಾಪ್ತಿ, ಶುಭ ಕಾರ್ಯ ಮುರಿದು ಬೀಳುವುದು, ಜೂಜು-ರೇಸ್ಗಳಲ್ಲಿ ತೊಡಗುವಿರಿ, ದುಶ್ಚಟಗಳು ಹೆಚ್ಚಾಗುವುದು, ಗರ್ಭಿಣಿಯರು ಎಚ್ಚರಿಕೆ, ಪ್ರೇಮ ವಿಚಾರದಲ್ಲಿ ಮೋಸ.