ದಿನ ಭವಿಷ್ಯ: 01-04 -2022

Public TV
2 Min Read
DINA BHAVISHYA

ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,ಉತ್ತರಾಯಣ,
ಶಿಶಿರ ಋತು,ಫಾಲ್ಗುಣ ಮಾಸ,
ಕೃಷ್ಣಪಕ್ಷ,ಅಮಾವಾಸ್ಯೆ,ಶುಕ್ರವಾರ,
ಉತ್ತರ ಭಾದ್ರಪದ ನಕ್ಷತ್ರ / ರೇವತಿ ನಕ್ಷತ್ರ
ರಾಹುಕಾಲ 10:54 ರಿಂದ 12:27
ಗುಳಿಕಕಾಲ 07:51 ರಿಂದ 09:23
ಯಮಗಂಡಕಾಲ 03:31ರಿಂದ 05:03

ಮೇಷ: ವ್ಯವಹಾರದಲ್ಲಿ ಅನುಕೂಲ, ಒತ್ತಡ ಅಧಿಕ ಕೋಪ ಸೋಮಾರಿತನ, ಶತ್ರು ಬಾಧೆ ಮತ್ತು ಸಾಲಬಾಧೆ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ಅಸಮತೋಲನ, ಮಾಟ ಮಂತ್ರ ತಂತ್ರ ಭೀತಿ.

ವೃಷಭ: ದಾಂಪತ್ಯದಲ್ಲಿ ಕಲಹ, ಮಕ್ಕಳಿಂದ ಅನುಕೂಲ, ಆರ್ಥಿಕ ಅಭಿವೃದ್ಧಿ, ಕುಟುಂಬದಿಂದ ಸಹಕಾರ, ಕಾರ್ಯಜಯ, ಉದ್ಯೋಗದಲ್ಲಿ ಕಿರಿಕಿರಿ, ನಿದ್ರಾಭಂಗ, ಸೋಮಾರಿತನ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ದುಷ್ಟಶಕ್ತಿಗಳ ಭಯ.

ಮಿಥುನ: ಅನಾರೋಗ್ಯ ಸಮಸ್ಯೆ, ಅನಿರೀಕ್ಷಿತ ಲಾಭ, ವ್ಯವಹಾರದಲ್ಲಿ ಅನುಕೂಲ, ಸ್ಥಿರಾಸ್ತಿಯಿಂದ ಯೋಗ, ಭವಿಷ್ಯದ ಚಿಂತೆ, ಅಪವಾದ ಅಪಮಾನ, ಸಾಲಗಾರರೊಂದಿಗೆ ಮನಸ್ತಾಪ, ಮಾನಸಿಕ ತೊಳಲಾಟ.

ಕಟಕ: ಪಾಲುದಾರಿಕೆಯಲ್ಲಿ ಕಿರಿಕಿರಿ, ಮನಸ್ತಾಪ, ಉದ್ಯೋಗದಲ್ಲಿ ಪ್ರಗತಿ, ಅನಾರೋಗ್ಯ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕ ನಷ್ಟ ಮತ್ತು ಖರ್ಚು, ಬುದ್ಧಿ ಚಂಚಲತೆ, ಬಂಧುಗಳಿಂದ ಸಹಕಾರ.

ಸಿಂಹ: ಭೂಮಿ ಮತ್ತು ವಾಹನ ಖರೀದಿ, ತಾಯಿಯೊಂದಿಗೆ ಮನಸ್ತಾಪ, ಧರ್ಮಕಾರ್ಯದಲ್ಲಿ ಅಪಚಾರ, ಅನಿರೀಕ್ಷಿತ ಆಪತ್ತು, ಸ್ನೇಹಿತರೊಂದಿಗೆ ಮನಸ್ತಾಪ, ಅನಿರೀಕ್ಷಿತ ಧನಾಗಮನ.

ಕನ್ಯಾ: ಕೋರ್ಟ್ ವ್ಯವಹಾರದ ಚಿಂತೆ, ಸೋಲು ನಷ್ಟ ಅಪವಾದ, ಸೋಲಿನ ಭಯ, ಅಧಿಕ ಬೇಸರ, ನಿರಾಸೆ, ವ್ಯಕ್ತಿಗಳಿಂದ ಆಪತ್ತು, ಭಾವನೆಗಳಿಗೆ ಪೆಟ್ಟು, ಉದ್ಯೋಗದಲ್ಲಿ ಸಮಸ್ಯೆ, ಪಾಲುದಾರಿಕೆಯಲ್ಲಿ ಅನಾನುಕೂಲ.

ತುಲಾ: ಅಧಿಕ ಕೋಪತಾಪಗಳು, ಸಂಗಾತಿಯೊಂದಿಗೆ ಮನಸ್ತಾಪ, ಆರ್ಥಿಕ ಬಳಲಿಕೆ, ಮಾತಿನಿಂದ ಕುಟುಂಬದಲ್ಲಿ ಕಲಹ, ಋಣಬಾಧೆ ಕಾಡುವುದು.

ವೃಶ್ಚಿಕ: ಸ್ವಂತ ಉದ್ಯಮ ವ್ಯಾಪಾರ ಆಲೋಚನೆ, ನೆರೆಹೊರೆಯವರಿಂದ ಕಿರಿಕಿರಿ, ಸೋಮಾರಿತನ ಆಲಸ್ಯ ಅಧಿಕ ಒತ್ತಡ, ಪ್ರಯಾಣದಲ್ಲಿ ಹಿನ್ನಡೆ ಶತ್ರು ಕಾಟ, ಅನಿರೀಕ್ಷಿತ ನಷ್ಟ ಮತ್ತು ಸೋಲು, ಸ್ನೇಹಿತರಿಂದ ಸಹಕಾರ, ಮಕ್ಕಳ ಭವಿಷ್ಯದ ಚಿಂತೆ.

ಧನಸ್ಸು: ಕುಟುಂಬದಲ್ಲಿ ಕಲಹ, ಮಾತಿನಿಂದ ಸಮಸ್ಯೆ, ಉಗುರು ಮತ್ತು ನಾಲಿಗೆಗೆ ಪೆಟ್ಟು, ರಕ್ತ ದೋಷಗಳು ದಾಂಪತ್ಯದಲ್ಲಿ ಆಲಸ್ಯ, ಬುದ್ಧಿ ಚಂಚಲತೆ, ಗೌರವ ಕೀರ್ತಿ ಪ್ರತಿಷ್ಠೆಗೆ ಭಂಗ, ಶುಭಕಾರ್ಯದ ಚಿಂತೆ, ಉದ್ಯೋಗದಲ್ಲಿ ನಿರಾಸಕ್ತಿ.

ಮಕರ: ವ್ಯವಹಾರದಲ್ಲಿ ಲಾಭ, ಆತುರ ಮತ್ತು ಕೋಪದಿಂದ ತೊಂದರೆ, ಬಂಧು ಬಾಂಧವರಿಂದ ಕಿರಿಕಿರಿ, ಅನಾರೋಗ್ಯ, ಪ್ರಯಾಣ ಮಾಡುವ ಸಂದರ್ಭ, ಸ್ನೇಹಿತರೊಂದಿಗೆ ಮನಸ್ತಾಪ.

ಕುಂಭ: ಅಧಿಕ ಕೋಪತಾಪಗಳು ಅಧಿಕ ಒತ್ತಡ, ಮಕ್ಕಳಿಂದ ಆರ್ಥಿಕ ಸಹಾಯ, ಪ್ರೀತಿ ಪ್ರೇಮ ಭಾವನೆಗಳಿಗೆ ಮನ್ನಣೆ, ಕಾರ್ಯಜಯ, ಮೋಜು-ಮಸ್ತಿಯಿಂದ ತೊಂದರೆ, ವಿವೇಚನಾರಹಿತ ಕಾರ್ಯಗಳು, ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಮಂದತ್ವ.

ಮೀನ: ಅಧಿಕ ಲಾಭ, ಆರ್ಥಿಕ ಸಹಾಯ, ಸ್ನೇಹಿತರಿಂದ ಕಿರಿಕಿರಿ, ನೋವು ಸಂಕಟ, ಸಂಗಾತಿಯೊಂದಿಗೆ ಕಿರಿಕಿರಿ, ಭೂಮಿಯಿಂದ ಯೋಗ, ತಾಯಿಂದ ಸಹಕಾರ, ವಿದ್ಯೆಯಲ್ಲಿ ಆಸಕ್ತಿ, ಸ್ನೇಹಿತರಿಂದ ಸಹಕಾರ ನಿರೀಕ್ಷೆ.

Share This Article
Leave a Comment

Leave a Reply

Your email address will not be published. Required fields are marked *