ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ, ಫಾಲ್ಗುಣ ಮಾಸ,
ಶುಕ್ಲ ಪಕ್ಷ, ಚತುರ್ದಶಿ ತಿಥಿ ಉಪರಿ ಪೌರ್ಣಿಮೆ
ಮಖ ನಕ್ಷತ್ರ, ಗುರುವಾರ.
Advertisement
ರಾಹುಕಾಲ: ಮಧ್ಯಾಹ್ನ 2:05 ರಿಂದ 3:34
ಗುಳಿಕಕಾಲ: ಬೆಳಗ್ಗೆ 9:37 ರಿಂದ 11:06
ಯಮಗಂಡಕಾಲ: ಬೆಳಗ್ಗೆ 6:38 ರಿಂದ 8:08
Advertisement
ಮೇಷ: ಮನಸ್ಸಿನ ಆಸೆಗಳು ಈಡೇರುವುದು, ತಂದೆಯ ಹೆತ್ತವರಿಂದ ನಷ್ಟ, ಆಕಸ್ಮಿಕ ಸಂಕಷ್ಟ, ಪುಣ್ಯ ಫಲ ಪ್ರಾಪ್ತಿ.
Advertisement
ವೃಷಭ: ಮಾನಸಿಕ ಉಲ್ಲಾಸಕ್ಕಾಗಿ ಸುತ್ತಾಟ, ಹತ್ತಿರ ಪ್ರಯಾಣ, ಆಕಸ್ಮಿಕ ರಾಜಕೀಯ ವ್ಯಕ್ತಿಗಳ ಭೇಟಿ, ಪಿತ್ರಾರ್ಜಿತ ಆಸ್ತಿಯಿಂದ ಲಾಭ, ಹಿರಿಯ ಅಧಿಕಾರಿಗಳಿಂದ ಮನ್ನಣೆ.
Advertisement
ಮಿಥುನ: ಸ್ವಯಂಕೃತ ಅಪರಾಧಗಳಿಂದ ನಷ್ಟ, ಹಣಕಾಸು ಸಂಕಷ್ಟ, ಉದ್ಯೋಗದಲ್ಲಿ ನಷ್ಟ, ಅಹಂಭಾವದಿಂದ ತೊಂದರೆ, ಕುಟುಂಬದಲ್ಲಿ ವಾಗ್ವಾದ, ಸರ್ಕಾರಿ ಪತ್ರ ವ್ಯವಹಾರಗಳಿಗೆ ಅನುಕೂಲ.
ಕಟಕ: ಕೃಷಿಕರಿಗೆ ಲಾಭ, ವ್ಯಾಪಾರಸ್ಥರಿಗೆ ಅನುಕೂಲ, ಉದ್ಯಮಸ್ಥರಿಗೆ ಧನಾಗಮನ, ಧಾರ್ಮಿಕ ಕ್ಷೇತ್ರದಲ್ಲಿ ಒಲವು, ದೇವತಾ ಕಾರ್ಯಗಳಲ್ಲಿ ಚಿಂತೆ, ಮೇಲಾಧಿಕಾರಿಗಳಿಂದ ನಷ್ಟ, ಯತ್ನ ಕಾರ್ಯದಲ್ಲಿ ಜಯ.
ಸಿಂಹ: ಆಕಸ್ಮಿಕ ನಷ್ಟ ಪ್ರಮಾಣ ಹೆಚ್ಚಾಗುವುದು, ಸರ್ಕಾರಿ ಅಧಿಕಾರಿಗಳಿಗೆ ಬಡ್ತಿ, ಕೆಲಸಗಾರರಿಗೆ ಪ್ರಶಂಸೆ, ತಂದೆಯಿಂದ ಅನುಕೂಲ, ಸ್ಥಿರಾಸ್ತಿ-ವಾಹನ ಪ್ರಾಪ್ತಿ.
ಕನ್ಯಾ: ಪಿತ್ರಾರ್ಜಿತ ಆಸ್ತಿ ನಷ್ಟ, ಆಮದು-ರಫ್ತು ಮಾರಾಟಗಾರಿಗೆ ಸಂಕಷ್ಟ, ಉನ್ನತ ಹುದ್ದೆಯಲ್ಲಿರುವವರಿಗೆ ತೊಂದರೆ, ಸಂಕಷ್ಟಗಳು ಬಾಧಿಸುವುದು, ದಾಂಪತ್ಯದಲ್ಲಿ ವಿರಸ.
ತುಲಾ: ವಿವಿಧ ಕ್ಷೇತ್ರದಲ್ಲಿ ಉದ್ಯೋಗಾವಕಾಶ, ಧೈರ್ಯದಿಂದ ಕಾರ್ಯ ಸಫಲ, ಆತ್ಮವಿಶ್ವಾಸದಿಂದ ಕೆಲಸಗಳಲ್ಲಿ ಜಯ, ಶತ್ರುಗಳ ನಾಶ, ಋಣ-ರೋಗಬಾಧೆಯಿಂದ ಮುಕ್ತಿ.
ವೃಶ್ಚಿಕ: ದೀರ್ಘಕಾಲದ ಪ್ರಯಾಣ, ವಿದೇಶ ಪ್ರಯಾಣಕ್ಕೆ ಮಾನ್ಯತೆ, ರಾಜಕೀಯ ವ್ಯಕ್ತಿಗಳ ಭೇಟಿ, ಅನುಕೂಲಕರ ದಿನ.
ಧನಸ್ಸು: ಉಡುಗೊರೆ ಲಭಿಸುವುದು, ವಿಮೆ ಹಣ ಪ್ರಾಪ್ತಿ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮನೆಯಿಂದ ದೂರವಾಗುವ ಚಿಂತೆ, ವಿಪರೀತ ತಲೆ ನೋವು, ಉಷ್ಣ ಬಾಧೆಯಿಂದ ನರಳಾಟ.
ಮಕರ: ವಿವಾಹ ರದ್ದಾಗುವುದು, ಸ್ವಯಂಕೃತ್ಯಗಳಿಂದ ತೊಂದರೆ, ಸ್ನೇಹಿತರನ್ನು ದೂರ ಮಾಡಿಕೊಳ್ಳುವಿರಿ, ಉನ್ನತ ಅಧಿಕಾರಿಗಳಲ್ಲಿ ಮನಃಸ್ತಾಪ.
ಕುಂಭ: ಪಾಲುದಾರಿಕೆ ವ್ಯವಹಾರಕ್ಕಾಗಿ ಸಾಲ, ದಾಂಪತ್ಯದಲ್ಲಿ ಜಗಳ, ನೆಮ್ಮದಿಗೆ ಭಂಗ, ಸಮಸ್ಯೆಗಳು ಉಲ್ಬಣ, ನೀವಾಡುವ ಮಾತಿನಿಂದ ತೊಂದರೆ.
ಮೀನ: ಗರ್ಭಿಣಿಯರು ಎಚ್ಚರಿಕೆ, ಮಾನಸಿಕ ವ್ಯಥೆ, ಮನೋರೋಗಗಳ ಬಾಧೆ, ಸರ್ಕಾರಿ ಅಧಿಕಾರಿಗಳಿಗೆ ತೊಂದರೆ, ಉದ್ಯೋಗ ಸ್ಥಳದಲ್ಲಿ ಶತ್ರುಗಳು ಹೆಚ್ಚು.