ಪಂಚಾಂಗ:
ಶ್ರೀ ಶೋಭಕೃತ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಜೇಷ್ಠ ಮಾಸ, ಶುಕ್ಲ ಪಕ್ಷ,
ವಾರ: ಬುಧವಾರ, ತಿಥಿ: ಏಕಾದಶಿ,
ನಕ್ಷತ್ರ: ಹಸ್ತ,
ರಾಹುಕಾಲ: 12:20 ರಿಂದ 1:56
ಗುಳಿಕಕಾಲ: 10:44 ರಿಂದ 12:20
ಯಮಗಂಡಕಾಲ: 7:32 ರಿಂದ 9:08
ಮೇಷ: ಸ್ಥಾನ ಬದಲಾವಣೆ, ಅದೃಷ್ಟ ಕೈ ತಪ್ಪುವುದು, ವಿದ್ಯಾರ್ಥಿಗಳಿಗೆ ಗೊಂದಲ, ದಾಂಪತ್ಯದಲ್ಲಿ ಅನ್ಯೋನ್ಯತೆ.
Advertisement
ವೃಷಭ: ಮನಸ್ಸಿನಲ್ಲಿ ಕೆಟ್ಟ ಆಲೋಚನೆ, ಶತ್ರುಗಳ ಷಡ್ಯಂತರಕ್ಕೆ ಒಳಗಾಗುವಿರಿ, ಗುರು ಹಿರಿಯರಲ್ಲಿ ಭಕ್ತಿ, ಅನಗತ್ಯ ಸುತ್ತಾಟ.
Advertisement
ಮಿಥುನ: ನಂಬಿಕಸ್ತರಿಂದ ಮೋಸ, ಉದ್ಯೋಗ ಅವಕಾಶ, ಮನಶಾಂತಿ, ವ್ಯಾಪಾರಿಗಳಿಗೆ ಅಧಿಕ ಲಾಭ.
Advertisement
ಕಟಕ: ಹೊಸ ಯೋಜನೆಗಳಲ್ಲಿ ಏರುಪೇರು, ಸಾಲದಿಂದ ವಿಮುಕ್ತಿ, ಮಹಿಳೆಯರಿಗೆ ಶುಭ, ವಾಗ್ವಾದಗಳಲ್ಲಿ ಎಚ್ಚರ.
Advertisement
ಸಿಂಹ: ಆಪ್ತರೊಡನೆ ದೂರ ಪ್ರಯಾಣ, ರಾಜಕೀಯದಲ್ಲಿ ಗೊಂದಲ, ಮನೆಯಲ್ಲಿ ದೇವತಾ ಕಾರ್ಯ.
ಕನ್ಯಾ: ದ್ರವ್ಯಲಾಭ, ಕಾರ್ಯಕ್ಷೇತ್ರದಲ್ಲಿ ಅಭಿವೃದ್ಧಿ, ಕೃಷಿಯಲ್ಲಿ ಲಾಭ, ಹಿತೈಷಿಗಳ ಮಾತಿನಿಂದ ಸಂತಸ.
ತುಲಾ: ನಾನಾ ರೀತಿಯ ಚಿಂತೆ, ಸ್ಥಳ ಬದಲಾವಣೆ, ವಾಸ ಗೃಹದಲ್ಲಿ ತೊಂದರೆ, ಸುಳ್ಳು ಮಾತನಾಡುವಿರಿ.
ವೃಶ್ಚಿಕ: ತಾಯಿಯಿಂದ ಸಹಾಯ, ಯಾರನ್ನು ಹೆಚ್ಚಾಗಿ ನಂಬಬೇಡಿ, ಅಲೆದಾಟ, ಅಕಾಲ ಭೋಜನ.
ಧನುಸ್ಸು: ಇಷ್ಟ ವಸ್ತುಗಳ ಖರೀದಿ, ಅನಾವಶ್ಯಕ ಖರ್ಚು, ನಿದ್ರಾಭಂಗ, ವಿರೋಧಿಗಳಿಂದ ದೂರವಿರಿ.
ಮಕರ: ಸಕಲ ಕಾರ್ಯಗಳಿಗೆ ಅಡ್ಡಿ ಆತಂಕ, ಸಂಕಷ್ಟಗಳು ಹೆಚ್ಚಾಗುವುದು, ಮನಸ್ತಾಪ, ಪರಸ್ಥಳವಾಸ, ದುಡುಕು ಸ್ವಭಾವ.
ಕುಂಭ: ಯತ್ನ ಕಾರ್ಯಗಳಲ್ಲಿ ಜಯ, ಆರೋಗ್ಯದಲ್ಲಿ ಸಮಸ್ಯೆ, ಕೆಲಸದಲ್ಲಿ ಏಕಾಗ್ರತೆ, ಪರರ ಮಾತಿಗೆ ಕಿವಿ ಕೊಡಬೇಡಿ.
ಮೀನ: ನಯ ವಂಚಕರ ಮಾತಿಗೆ ಮರುಳಾಗಬೇಡಿ, ವಿಪರೀತ ಖರ್ಚು, ಮತ್ತೊಬ್ಬರ ವಿಷಯದಲ್ಲಿ ಪ್ರವೇಶ ಮಾಡದಿರಿ.