ಕಾಬೂಲ್: 9 ವರ್ಷದ ಮಗಳನ್ನು 55 ವರ್ಷದವನಿಗೆ ಮಾರಾಟ ಮಾಡಿದ ತಂದೆ ಬಿಕ್ಕಿಬಿಕ್ಕಿ ಅತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಅಬ್ದುಲ್ ಮಲಿಕ್ ತನ್ನ 9 ವರ್ಷದಮಗಳನ್ನು 55 ವರ್ಷದ ವ್ಯಕ್ತಿಯೊಬ್ಬನಿಗೆ ಮಾರಾಟ ಮಾಡಿದ್ದಾರೆ. ಅಬ್ದುಲ್ ಮಲಿಕ್ ಅವರ ಕುಟುಂಬದಲ್ಲಿ ಎಂಟು ಜನರಿದ್ದು, ಎಲ್ಲರೂ ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಕುಟುಂಬವನ್ನು ನೋಡಿಕೊಳ್ಳಲು ಸಾಧ್ಯವಾಗದೆ ಕಷ್ಟಪಡುತ್ತಿರುವ ಅಬ್ದುಲ್ ಕೊನೆಗೆ ಮಗಳನ್ನು ಮಾರಾಟ ಮಾಡಿದ್ದಾನೆ. ಇದನ್ನೂ ಓದಿ: ಚಪ್ಪಲಿ ತೆಗೆದು ಅಭಿಮಾನಿಗಳಿಂದ ಅಪ್ಪುಗೆ ಅಂತಿಮ ನಮನ- ಬಿಬಿಎಂಪಿಯಿಂದ ರಾಶಿ ರಾಶಿ ಸ್ಲಿಪ್ಪರ್ಸ್ ತೆರವು
ಈಗ ಇದು ನಿಮ್ಮ (ಕೊರ್ಬಾನ್) ವಧು, ದಯವಿಟ್ಟು ಅವಳನ್ನು ನೋಡಿಕೊಳ್ಳಿ, ಈಗ ಆಕೆಯನ್ನು ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದು, ಅವಳನ್ನು ಕೊಲ್ಲಬೇಡಿ ಎಂದು ಅಬ್ದುಲ್ ಮಲಿಕ್ ಮಗಳ ಮಾರಾಟ ಒಪ್ಪಂದಕ್ಕೆ ಸಹಿ ಹಾಕಿ ಕಣ್ಣೀರು ಹಾಕಿದ್ದಾರೆ. ನಮಗೆ ತಿನ್ನಲು ಏನೂ ಇಲ್ಲದ ಕಾರಣ ನನ್ನ ತಂದೆ ನನ್ನನ್ನು ಮಾರಿದ್ದಾರೆ. ನನ್ನನ್ನು ಒಬ್ಬ ಮುದುಕನಿಗೆ ಮಾರಾಟ ಮಾಡಿದ್ದಾರೆ ಎಂದು 9 ವರ್ಷದ ಬಾಲಕಿ ಹೇಳಿದ್ದಾಳೆ. ಇದನ್ನೂ ಓದಿ: ಅಪ್ಪು ಸಮಾಧಿ ಬಳಿ ನೃತ್ಯ ನಮನ ಸಲ್ಲಿಸಿದ ಪುಟಾಣಿಗಳು