ಸ್ಯಾಂಡಲ್‌ವುಡ್ ನಟ ಶಿವಣ್ಣ (Shivarajkumar) ಅವರು ಯಶಸ್ವಿ ಶಸ್ತ್ರಚಿಕಿತ್ಸೆಯ ಬಳಿಕ ಜ.26ರಂದು ತಾಯ್ನಾಡಿಗೆ ಮರಳಿದ್ದಾರೆ. ಈ ಹಿನ್ನೆಲೆ ಶಿವಣ್ಣ ಮನೆಗೆ ಡಾಲಿ ಧನಂಜಯ ಅವರು ಭೇಟಿ ನೀಡಿದ್ದಾರೆ. ಇದನ್ನೂ ಓದಿ:ಮದುವೆ ಆ್ಯನಿವರ್ಸರಿ ದಿನವೇ ಗಂಡು ಮಗುವಿಗೆ ಜನ್ಮ ನೀಡಿದ ಹರಿಪ್ರಿಯಾ
ಶಿವಣ್ಣ ಅವರು ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಕೊಂಡಿದ್ದು, ಮನೆಗೆ ಮರಳಿರುವ ನಟನನ್ನು ನೋಡಲು ಡಾಲಿ ತೆರಳಿದ್ದಾರೆ. ಶಿವಣ್ಣರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಕೆಲ ಕಾಲ ಅವರೊಂದಿಗೆ ಸಮಯ ಕಳೆದಿದ್ದಾರೆ.
ಇನ್ನೂ ಡಾಲಿ ಅವರು ಇದೇ ಫೆ.16ರಂದು ಡಾಕ್ಟರ್ ಧನ್ಯತಾ ಜೊತೆ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಮೈಸೂರಿನಲ್ಲಿ ನಡೆಯಲಿರುವ ಮದುವೆಗೆ ಚಿತ್ರರಂಗದ ಕಲಾವಿದರಿಗೆ ಮತ್ತು ರಾಜಕೀಯ ರಂಗದ ಗಣ್ಯರಿಗೆ ಮದುವೆಗೆ ಆಹ್ವಾನ ನೀಡಲಾಗಿದೆ.