ನಟ ಶಿವಣ್ಣ (Shivanna) ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ತಾಯ್ನಾಡಿಗೆ ಆಗಮಿಸಿದ ಬೆನ್ನಲ್ಲೇ ಡಾಲಿ (Daali Dhananjay) ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಮಾಧ್ಯಮಕ್ಕೆ ನಟ ಮಾತನಾಡಿ, ಶಿವಣ್ಣ ಆರಾಮಾಗಿದ್ದಾರೆ. ಸದ್ಯದಲ್ಲೇ ಕೆಲವೇ ದಿನಗಳಲ್ಲಿ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ಎಷ್ಟೇ ಕುತಂತ್ರ ಮಾಡಿದ್ರು ಮೇಲೊಬ್ಬ ನೋಡ್ತಿದ್ದಾನೆ- ಪವಿತ್ರಾ ಗೌಡ ಟಾಂಗ್ ಕೊಟ್ಟಿದ್ಯಾರಿಗೆ?
Advertisement
ಶಿವಣ್ಣ ಕ್ಯಾನ್ಸರ್‌ನಿಂದ ಗುಣಮುಖರಾಗಿದ್ದಾರೆ. ಅವರನ್ನು ಭೇಟಿ ಮಾಡಿದ ಡಾಲಿ ಧನಂಜಯ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಶಿವಣ್ಣ ಅವರನ್ನು ನೋಡಿ ಬಹಳ ಖುಷಿ ಆಯಿತು. ಈಗ ಆರಾಮಾಗಿದ್ದಾರೆ. ಇನ್ನು ಎರಡು ಅಥವಾ ಮೂರು ವಾರದಲ್ಲಿ ಅವರು ಶೂಟಿಂಗ್ ಕೂಡ ಮಾಡಬಹುದು. ಅಂಥ ಪರಿಸ್ಥಿತಿಯನ್ನು ಅವರು ಗೆದ್ದು ಬಂದಿದ್ದಾರೆ. ಅವರು ಪ್ರತಿಯೊಬ್ಬರಿಗೂ ಸ್ಫೂರ್ತಿ. ಅವರು ಯಾರ ಮುಂದೆಯೂ ಅವರು ಕುಗ್ಗಲಿಲ್ಲ. ಇನ್ನೂ ಗಟ್ಟಿಯಾಗಿ ವಾಪಸ್ ಬಂದಿದ್ದಾರೆ ಎಂದು ಡಾಲಿ ಹೇಳಿದ್ದಾರೆ.
Advertisement
Advertisement
ಇನ್ನೂ ಡಾಲಿ ಅವರು ಇದೇ ಫೆ.16ರಂದು ಡಾಕ್ಟರ್ ಧನ್ಯತಾ ಜೊತೆ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಮೈಸೂರಿನಲ್ಲಿ ನಡೆಯಲಿರುವ ಮದುವೆಗೆ ಚಿತ್ರರಂಗದ ಕಲಾವಿದರಿಗೆ ಮತ್ತು ರಾಜಕೀಯ ರಂಗದ ಗಣ್ಯರಿಗೆ ಮದುವೆಗೆ ಆಹ್ವಾನ ನೀಡಲಾಗಿದೆ.