ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣವಾಗಿ ಖ್ಯಾತ ನಟ ದರ್ಶನ್ (Darshan) ಅರೆಸ್ಟ್ ಆಗಿದ್ದಾರೆ. ಈ ಪ್ರಕರಣದ ಕುರಿತು ಸ್ಯಾಂಡಲ್‌ವುಡ್ ನಟ, ನಟಿಯರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸದ್ಯ ಡಾಲಿ ಧನಂಜಯ (Dali Dhananjay) ಪ್ರತಿಕ್ರಿಯೆ ನೀಡಿದ್ದು, ಆರೋಪಿ ಸ್ಥಾನದಲ್ಲಿರುವವರಿಗೆ ನಾವು ಸಪೋರ್ಟ್ ಮಾಡಿಲ್ಲ. ತಪ್ಪು ಮಾಡಿದ್ರೆ ಖಂಡಿತಾ ಶಿಕ್ಷೆಯಾಗಲಿ ಎಂದಿದ್ದಾರೆ.
ದರ್ಶನ್ ಪ್ರಕರಣದ ಕುರಿತು ಡಾಲಿ ಮಾತನಾಡಿ, ಅಲ್ಲಿ ಒಂದು ದುರಂತ ಆಗಿದೆ. ಜೀವ ಹೋಗಿದೆ. ಆ ವ್ಯಕ್ತಿಯ ಪೋಷಕರು ಮತ್ತು ಹೆಂಡತಿನಾ ನೋಡಿದಾಗ ಬೇಜರಾಗುತ್ತದೆ. ಕಾನೂನಿಗಿಂತ ದೊಡ್ಡವರು ಯಾರು ಇಲ್ಲ. ಆ ಜೀವಕ್ಕೆ ಏನು ನ್ಯಾಯ ಸಿಗಬೇಕೋ, ಆ ನ್ಯಾಯ ಸಿಗಲೇಬೇಕು. ಹಾಗೆಯೇ ಆರೋಪಿ ಸ್ಥಾನದಲ್ಲಿರುವವರು ನಮ್ಮವರೇ ಆಗಿದ್ದಾಗ ನಿಜಕ್ಕೂ ಬೇಜಾರಾಗುತ್ತೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ಶ್ರೀಲಂಕಾದಲ್ಲಿ ವಿಜಯ್ ದೇವರಕೊಂಡ- ಅಭಿಮಾನಿಗಳಿಂದ ಸರ್ಪ್ರೈಸ್
ಈ ಸುದ್ದಿ ಕೇಳಿದಾಗ ಶಾಕ್ ಆಯ್ತು. ಈ ಪ್ರಕರಣದಲ್ಲಿ ನಾವು ಪ್ರೀತಿಸಿದ ವ್ಯಕ್ತಿಯ ಹೆಸರು ಬಂದಾಗ ಬೇಜಾರಾಯಿತು. ಇಲ್ಲಿ ಯಾವುದನ್ನು ನಾವು ಸಮರ್ಥನೆ ಮಾಡಿಕೊಳ್ಳೋಕೆ ಆಗಲ್ಲ. ಎಲ್ಲದಕ್ಕೂ ಇಲ್ಲಿ ಕಾನೂನು ಇದೆ. ಅದಕ್ಕಿಂತ ದೊಡ್ಡವರು ಯಾರು ಇಲ್ಲ. ಆರೋಪಿ ಸ್ಥಾನದಲ್ಲಿರುವವರಿಗೆ ನಾವು ಸಪೋರ್ಟ್ ಮಾಡಿಲ್ಲ. ತಪ್ಪು ಮಾಡಿದ್ರೆ ಖಂಡಿತಾ ಶಿಕ್ಷೆಯಾಗಲಿ. ಅಲ್ಲಿ ನಿಜಕ್ಕೂ ಏನು ಆಗಿದೆ ನಮಗೆ ಗೊತ್ತಿಲ್ಲ. ಕೆಲವೊಂದನ್ನು ನಾವು ಒಂಟಿಯಾಗಿಯೇ ಫೈಟ್ ಮಾಡಬೇಕಾಗುತ್ತದೆ ಎಂದು ಡಾಲಿ ಧನಂಜಯ ಮಾತನಾಡಿದ್ದಾರೆ.
ಅಲ್ಲಿ ಏನು ಆಗಿದೆ ನಾವು ಸಮರ್ಥನೆ ಮಾಡೋಕೆ ಆಗಲ್ಲ. ಜಾಸ್ತಿ ಅಂದರೆ ನಾವು ಖಂಡಿಸಬಹುದು ಅಷ್ಟೇ. ಬದುಕು ಅವಕಾಶಗಳನ್ನು ಕೊಟ್ಟೇ ಕೊಡುತ್ತೆ. ಆ ಘಟನೆಗಳಿಂದ ದೂರ ಇದ್ದು, ಮತ್ತೆ ಪ್ರೇಕ್ಷಕರನ್ನು ರಂಜಿಸಲಿ ಎಂದು ದರ್ಶನ್ ಕುರಿತು ಡಾಲಿ ಮಾತನಾಡಿದ್ದಾರೆ.